twitter
    For Quick Alerts
    ALLOW NOTIFICATIONS  
    For Daily Alerts

    ಅಪೋಲೋ ಆಸ್ಪತ್ರೆಗೆ ದಾಖಲಾದ ನಿರ್ದೇಶಕ ಮಣಿರತ್ನಂ

    By Bharath Kumar
    |

    ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಚೆನ್ನೈ ನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎನ್ನಲಾಗುತ್ತಿದೆ.

    ಆದ್ರೆ, ಮಣಿರತ್ನಂ ಅವರ ಆರೋಗ್ಯ ಚೆನ್ನಾಗಿದ್ದು, ಸಾಮಾನ್ಯ ಪರೀಕ್ಷೆಗಾಗಿ (regular check up) ಮಣಿರತ್ನಂ ಅವರು ಬಂದಿದ್ದಾರೆ ಎಂದು ವೈದ್ಯ ಮೂಲಗಳ ತಿಳಿಸಿವೆಯಂತೆ.

    ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಮಣಿರತ್ನ ಅವರು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. 'ದಳಪತಿ', 'ನಾಯಗನ್', 'ರೋಜಾ', 'ಬಾಂಬೆ' ಸೇರಿದಂತೆ ಹಲವು ಸಿನಿಮಾಗಳು ಇವರ ಸಾರಥ್ಯದಲ್ಲಿ ಮೂಡಿಬಂದಿದೆ.

    Mani Ratnam hospitalised due to heart complication

    ಸದ್ಯ, ವಿಜಯ್ ಸೇತುಪತಿ, ಸಿಂಬು, ಅರವಿಂದ ಸ್ವಾಮಿ ಹಾಗೂ ಅರುಣ್ ವಿಜಯ್ ಅಭಿನಯದ 'ಚೆಕ್ಕು ಚಿವ್ವಂತಾ ವಾನಂ' ಚಿತ್ರವನ್ನ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದರು.

    ಅಂದ್ಹಾಗೆ, ಮಣಿರತ್ನಂ ಅವರು ಆಸ್ಪತ್ರೆಗೆ ದಾಖಲಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಎರಡು ಮೂರು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    English summary
    filmmaker Mani Ratnam is admitted to a private hospital in Thousand Lights area in the city today. But sources say he is alright.
    Thursday, July 26, 2018, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X