»   » ಮನೋರಂಜನ್ ಕಾಲಿಗೆ ಪೆಟ್ಟು: ಎರಡು ವಾರ ಕದಲುವ ಹಾಗಿಲ್ಲ!

ಮನೋರಂಜನ್ ಕಾಲಿಗೆ ಪೆಟ್ಟು: ಎರಡು ವಾರ ಕದಲುವ ಹಾಗಿಲ್ಲ!

Posted By:
Subscribe to Filmibeat Kannada
ಮನೋರಂಜನ್ ಕಾಲಿಗೆ ಪೆಟ್ಟು | Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಕನ್ನಡ ನಟ ಮನೋರಂಜನ್ ರವಿಚಂದ್ರನ್ ಕಾಲಿಗೆ ಪೆಟ್ಟಾಗಿದೆ.

ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ನಲ್ಲಿ 'ಕರ್ನಾಟಕ ವಾರಿಯರ್ಸ್' ತಂಡವನ್ನ ಮುನ್ನಡೆಸಿ, ಸ್ಯಾಂಡಲ್ ವುಡ್ ಗೆ ಗೆಲುವಿನ ಸಿಹಿಯನ್ನು ತಂದುಕೊಟ್ಟಿದ್ದು ಇದೇ ಮನೋರಂಜನ್ ರವಿಚಂದ್ರನ್. ಆದ್ರೀಗ, ಬ್ಯಾಡ್ಮಿಂಟನ್ ಆಡುವಾಗ ಎಡವಿ ಬಿದ್ದ ಮನೋರಂಜನ್ ಕಾಲಿಗೆ ಪೆಟ್ಟಾಗಿದೆ.

ನಡೆಯುವಾಗ ದೇಹದ ಭಾರವೆಲ್ಲ ಕಾಲಿಗೆ ಬೀಳುವುದರಿಂದ, ಎರಡು ವಾರಗಳ ಕಾಲ ಕದಲದಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ, ಎರಡು ವಾರಗಳ ಕಾಲ ನಟ ಮನೋರಂಜನ್ ಚಿತ್ರೀಕರಣದಲ್ಲೂ ಭಾಗವಹಿಸುವಂತಿಲ್ಲ.

Manoranjan Ravichandran sprained his ankle while playing badminton

'ಸಾಹೇಬ', 'ಬೃಹಸ್ಪತಿ' ಸಿನಿಮಾಗಳ ನಂತರ 'ಚಿಲಂ' ಚಿತ್ರದಲ್ಲಿ ಅಭಿನಯಿಸಲು ಮನೋರಂಜನ್ ರವಿಚಂದ್ರನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ 'ಕ್ವಾಟ್ಲೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಂದ್ರಕಲಾ, 'ಚಿಲಂ'ಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

14 ವರ್ಷ ವನವಾಸ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್

ಡ್ರಗ್ ಮಾಫಿಯಾ ಕುರಿತಾದ ಕಥೆ ಇದಾಗಿದ್ದು, ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಆಗಲಿದೆ. ಅಷ್ಟರೊಳಗೆ ರೆಸ್ಟ್ ತೆಗೆದುಕೊಂಡು ಮನೋರಂಜನ್ ಫಿಟ್ ಅಂಡ್ ಫೈನ್ ಆಗಬೇಕು.

English summary
Manoranjan Ravichandran sprained his ankle while playing badminton. Doctors have advised him to take rest for 2 weeks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X