»   » 'ಗಣೇಶ'ನ ಜೊತೆ 'ಸಾಹೇಬ'ನ ಎಂಟ್ರಿ

'ಗಣೇಶ'ನ ಜೊತೆ 'ಸಾಹೇಬ'ನ ಎಂಟ್ರಿ

Posted By:
Subscribe to Filmibeat Kannada

ಎಲ್ಲ ಅಂದುಕೊಂತೆ ಆಗಿದ್ದರೇ ಇಷ್ಟೊತ್ತಿಗಾಗಲೇ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ರವರ ಪುತ್ರ ಮನೋರಂಜನ್ ಅಭಿನಯದ 'ಸಾಹೇಬ' ಸಿನಿಮಾ ತೆರೆ ಕಾಣಬೇಕಿತ್ತು. ಆದ್ರೆ, ಪ್ರಾಣಿದಯಾ ಸಂಘದಿಂದ ಎನ್.ಓ.ಸಿ ಸಿಗದೆ, ಸೆನ್ಸಾರ್ ಆಗಿರಲಿಲ್ಲ. ಹೀಗಾಗಿ, ಚಿತ್ರದ ಬಿಡುಗಡೆ ವಿಳಂಬವಾಗಿತ್ತು.

ಈಗ ಎನ್.ಓ.ಸಿ ಪಡೆದು, ಸೆನ್ಸಾರ್ ಕೂಡ ಮುಗಿಸಿಕೊಂಡಿರುವ ಸಾಹೇಬ ಇದೇ ತಿಂಗಳಲ್ಲಿ ತೆರೆಮೇಲೆ ಅಬ್ಬರಿಸುತ್ತಿದ್ದಾನೆ. ಹೌದು, ಗಣೇಶ್ ಹಬ್ಬದ ಪ್ರಯುಕ್ತ ಆಗಸ್ಟ್ 25 ರಂದು ಸಾಹೇಬ ಸಿನಿಮಾ ಬಿಡುಗಡೆಯಾಗುತ್ತಿದೆ.

Manoranjan Starrer 'Saheba' will release on august 25th

ಮನೋರಂಜನ್ ಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಜೊತೆಯಾಗಿ ನಟಿಸಿದ್ದು, ಡ್ಯಾನ್ಸ್, ಖಡಕ್ ಡೈಲಾಗ್ ಮತ್ತು ಜಬರ್ ದಸ್ತ್ ಫೈಟ್ಸ್ ಗಳ ಮೂಲಕ ಚಿತ್ರದ ಟ್ರೈಲರ್ ಗಮನ ಸೆಳೆಯುತ್ತಿದೆ.

ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿರುವ 'ಸಾಹೇಬ' ಚಿತ್ರದ ಹಾಡುಗಳು ಮೋಡಿ ಮಾಡಿವೆ. ಚಿತ್ರದ ವಿಶೇಷ ಅಂದ್ರೆ ಈ ಚಿತ್ರದಲ್ಲಿ ವಿ.ರವಿಚಂದ್ರನ್ ರವರ 'ನಾನು ನನ್ನ ಹೆಂಡ್ತಿ' ಚಿತ್ರದ 'ಯಾರೇ ನೀನು ರೋಜಾ ಹೂವೆ... ಯಾರೇ ನೀನು ಮಲ್ಲಿಗೆ ಹೂವೆ' ಹಾಡನ್ನು ಅಳವಡಿಸಿಕೊಂಡಿದೆ.

Ravichandran Childrens Rare Unseen Photos | Filmibeat Kannada

ಇನ್ನು ಈ ಚಿತ್ರಕ್ಕೆ ಭರತ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಒಟ್ನಲ್ಲಿ ಈ ಬಾರಿಯ ಗಣೇಶ ಹಬ್ಬ ಸಾಹೇಬನಿಗೆ ಸ್ವಲ್ಪ ವಿಶೇಷವಾಗಿರಲಿದೆ.

English summary
Crazy Star Ravichandran Son Manoranjan Starrer Kannada Movie 'Saheba' will release on august 25th. The movie is directed by Bharath and Shanvi Srivasthav is in the Female Lead.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada