Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪ್ಪನ ನೆನಪಿಸಿಕೊಂಡು ಭಾವುಕರಾದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು
ಇಂದು 'ವಿಶ್ವ ಅಪ್ಪಂದಿರ ದಿನ'. ಚಂದನವನದ ಹಲವು ಸೆಲೆಬ್ರಿಟಿಗಳು ತಮ್ಮ ತಂದೆಯವರನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಹಲವರು ಅಪರೂಪದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ತಂದೆಯನ್ನು ಅನುಸರಿಸಿ ಚಿತ್ರರಂಗಕ್ಕೆ ಬಂದ ನಟರೇ ಹಲವರು ನಮ್ಮ ಚಂದನವನದಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ತಂದೆಯನ್ನು ನೆನಪಿಸಿಕೊಂಡು ಹಲವು ನಟ, ನಟಿಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ನಟಿ ಪ್ರಣಿತಾ ಸುಭಾಷ್, ಸೃಜನ್ ಲೋಕೇಶ್, ಹರಿಪ್ರಿಯಾ ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ವಿಶೇಷ ದಿನದಂದು ತಂದೆಯನ್ನು ನೆನಪಿಸಿಕೊಂಡು ಅವರ ಬಗ್ಗೆ ಭಾವಪೂರ್ಣ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಅಪ್ಪನಿಗಾಗಿ ಹಾಡು ಹೇಳಿದ ಪುನೀತ್
ಡಾ.ರಾಜ್‌ಕುಮಾರ್ ಪುತ್ರ ನಟ ಪುನೀತ್ ರಾಜ್‌ಕುಮಾರ್ ಅವರು ಅಪ್ಪನನ್ನು ನೆನಪಿಸಿಕೊಂಡು ಸುಂದರವಾದ ಹಾಡು ಹೇಳಿದ್ದಾರೆ. 'ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ' ಎಂಬ ಸೊಗಸಾದ ಹಾಡನ್ನು ಪುನೀತ್ ಹಾಡಿದ್ದಾರೆ. 1981 ರಲ್ಲಿ ಬಿಡುಗಡೆ ಆಗಿದ್ದ 'ಭಾಗ್ಯವಂತ' ಸಿನಿಮಾದ ಹಾಡು ಇದು. ಆ ಸಿನಿಮಾದಲ್ಲಿ ರಾಜ್‌ಕುಮಾರ್ ಸಹ ಇದ್ದರು.

ಕೊನೆ ಉಸಿರಿನವರೆಗೆ ನಿನ್ನ ಮರೆಯುವುದಿಲ್ಲ: ಜಗ್ಗೇಶ್
ಯಾರು ನಿನ್ನ ನೆನೆಯಲಿ ಮರೆಯಲಿ ನಾನು ಮಾತ್ರ ನನ್ನ ಉಸಿರಿನ ಕೊನೆಯವರೆಗು ನಿನ್ನ ನೆನೆಯುವೆ ಅಪ್ಪ..ಕಾರಣ ಆ ಉಸಿರು ನನಗೆ ದೇಣಿಗೆ ನೀಡಿದ ಧಣಿ ನೀನಲ್ಲವೆ! ಅಪ್ಪನ ನನ್ನ ದೇವರು. ಕ್ಷಮೆಯಿರಲಿ ನಿಮ್ಮಿಂದ ಕೆಲದಿನ ದೂರ ಉಳಿದದ್ದಕ್ಕೆ! ನನ್ನ ತಂದೆಯಷ್ಟೆ ಗೌರವ ನಿಮ್ಮಗಳ ಮೇಲಿದೆ ನನಗೆ. ತಂದೆಯಿಂದ ಜೀವ. ನಿಮ್ಮಿಂದ ಜೀವನ.

ಅಪ್ಪನ ಚಿತ್ರ ಹಂಚಿಕೊಂಡ ಸೃಜನ್ ಲೋಕೇಶ್
''ಜೀವನದಲ್ಲಿ ಗುರಿ ಇಲ್ಲದೆ ಬದುಕಬಾರದು ಎಂದು ಹೇಳಿಕೊಟ್ಟ ನನ್ನ ತಂದೆಗೆ ಹ್ಯಾಪಿ ಫಾದರ್ಸ್ ಡೇ ಹಾಗೂ ಎಲ್ಲ ತಂದೆಯರಿಗು, ತಂದೆಯಂದಿರ ದಿನಾಚರಣೆಯ ಶುಭಾಶಯಗಳು'' ಎಂದಿದ್ದಾರೆ ನಟ ಸೃಜನ್ ಲೋಕೇಶ್. ತಂದೆ ಲೋಕೇಶ್ ಬಂದೂಕು ಗುರಿ ಇಡುವುದು ಕಲಿಸಿಕೊಡುತ್ತಿರುವ ಹಳೆಯ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ. ಲೋಕೇಶ್ ಅವರೂ ಸಹ ಬಹಳ ದೊಡ್ಡ ನಟರಾಗಿದ್ದವರು.

ನಿಮ್ಮಿಂದ ಕಲಿಯುವುದು ಬಹಳಷ್ಟಿದೆ: ಪ್ರಣಿತಾ
ಇತ್ತೀಚೆಗಷ್ಟೆ ಮದುವೆಯಾದ ನಟಿ ಪ್ರಣಿತಾ ಸುಭಾಷ್ ತಮ್ಮ ತಂದೆಯೊಟ್ಟಿನ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ''ಬನಶಂಕರಿಯ ಮೆಚ್ಚಿನ ವೈದ್ಯರಾಗಿರುವ ನಿಮ್ಮಂದ ಕಲಿಯುವುದು ಬಹಳಷ್ಟಿದೆ. ನಿಮ್ಮ ಸಾಮಾಜಿಕ ಕಾರ್ಯಗಳು, ಉಚಿತ ಆರೋಗ್ಯ ಶಿಬಿರಗಳು, ನಿಮ್ಮ ಸಿದ್ಧಾಂತಗಳು, ನಿಮ್ಮ ಮಾನವೀಯತೆ, ನಿಮ್ಮ ಶಾಂತತೆ, ಎಲ್ಲರೂ ಆದರ್ಶವಾಗಿ ಸ್ವೀಕರಿಸಲಿಚ್ಛಿಸುವ ಎಲ್ಲ ವ್ಯಕ್ತಿತ್ವವೂ ನಿಮಗಿದೆ'' ಎಂದಿದ್ದಾರೆ ಪ್ರಣಿತಾ.

20 ವರ್ಷದವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ: ರಕ್ಷಿತಾ
''ತಂದೆಯ ಭಯ, ಕಣ್ಣೀರು ಯಾವತ್ತೂ ಕಾಣಿಸುವುದಿಲ್ಲ. ತಂದೆ ತನ್ನ ಪ್ರೀತಿಯನ್ನು ಹೇಳುವುದಿಲ್ಲ ಬದಲಿಗೆ ಆತ ನಮ್ಮ ಬೆನ್ನಿಗೆ ಇದ್ದಾನೆಂದು ಸದಾ ಗೊತ್ತಿರುತ್ತದೆ. ಮೊದಲಿಗೆ ತಂದೆ ಎಂದರೆ ಭಯವೇ ಹೆಚ್ಚು ಆಗುತ್ತಿತ್ತು. ಆದರೆ ಸಿನಿಮಾ ನಮ್ಮಿಬ್ಬರನ್ನು ಇನ್ನಷ್ಟು ಹತ್ತಿರ ಮಾಡಿತು. ನಾನು 20 ವರ್ಷದವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ. ನಾನು ಹೆಚ್ಚು ಸಮಯ ಅಪ್ಪನೊಂದಿಗೆ ಇರಲಾಗಲಿಲ್ಲ. ಆದರೆ ನನಗೆ ಅವರ ಕೆಲಸ ಬಹಳ ಇಷ್ಟವಾಗುತ್ತಿತ್ತು. ನಾನು ಅವರನ್ನು ಎಷ್ಟು ಇಷ್ಟಪಡುತ್ತಿದ್ದೆ ಎಂಬುದನ್ನು ನಾನು ಹೇಳಲಾಗಲೇ ಇಲ್ಲ ಈ ಬಗ್ಗೆ ದೊಡ್ಡ ವಿಷಾದ ನನಗೆ ಇದೆ'' ಎಂದಿದ್ದಾರೆ ನಟಿ ರಕ್ಷಿತಾ ತಮ್ಮ ತಂದೆ ಬಿ.ಸಿ.ಗೌರಿಶಂಕರ್ ಬಗ್ಗೆ.
Recommended Video

ಈಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ: ಸುಧಾರಾಣಿ
ಹಿರಿಯ ನಟಿ ಸುಧಾರಾಣಿ ಸಹ ತಮ್ಮ ತಂದೆಯವರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪನ ಚಿತ್ರ ಪ್ರಕಟಿಸಿರುವ ಸುಧಾರಾಣಿ, ''ಎಲ್ಲ ಸೂಪರ್ ಹೀರೋಗಳು ಸೂಪರ್ ಹೀರೋ ಕಾಸ್ಟ್ಯೂಮ್ ಧರಿಸಿರುವುದಿಲ್ಲ. ಅಪ್ಪ ನನ್ನ ಸೈಲೆಂಟ್ ಹೀರೋ. ಅವರ ಶಾಂತ ಗಂಭೀರತೆ ಹಲವು ಸದ್ಗುಣಗಳಿಂದ ತುಂಬಿತ್ತು. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ'' ಎಂದಿದ್ದಾರೆ ಸುಧಾರಾಣಿ.