For Quick Alerts
  ALLOW NOTIFICATIONS  
  For Daily Alerts

  ತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾ

  |

  ಗಾಂಜಾ ದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಆಯುರ್ವೇದದಲ್ಲಿಯೂ ಗಾಂಜಾಕ್ಕೆ ಉತ್ತಮ ಸ್ಥಾನ ಮಾನಗಳಿವೆ. ತುಳಸಿಯಷ್ಟೆ ಗಾಂಜಾ ಸಹ ಶ್ರೇಷ್ಠ ಎಂದಿದ್ದಾರೆ ನಟಿ ನಿವೇದಿತಾ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಕನ್ನಡದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ನಿವೇದಿತಾ, ಗಾಂಜಾ ಗಿಡವನ್ನು ತುಳಸಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೆ ಗಾಂಜಾ 'ಮಹಿಮೆ'ಯನ್ನು ಕೊಂಡಾಗಿದ್ದಾರೆ.

  ಸನಾತನ ಧರ್ಮದಲ್ಲಿ ಗಾಂಜಾ ಗೆ ವಿಶೇಷ ಸ್ಥಾನವಿದೆ. ಆಯುರ್ವೇಧ ಮಾತ್ರವಲ್ಲದೆ ಅಲೋಪತಿಯಲ್ಲೂ ಸಹ ಗಾಂಜಾವನ್ನು ಬಳಸಲಾಗುತ್ತದೆ ಎಂದು ನಟಿ ನಿವೇದಿತಾ ಹೇಳಿದ್ದಾರೆ.

  ಜಗತ್ತಿನ ಹಲವು ದೇಶಗಳಲ್ಲಿ ಗಾಂಜಾ ಮಾರಾಟ, ಬಳಕೆ ಕಾನೂನುಬದ್ಧವಾಗಿದೆ. ಗಾಂಜಾದಿಂದ ಅಪರಾಧ ಪ್ರಮಾಣ ಸಹ ಕಡಿಮೆ ಆಗುತ್ತದೆ. ನಮ್ಮ ದೇಶದಲ್ಲಿಯೂ ಗಾಂಜಾವನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ ನಿವೇದಿತಾ.

  'ಸಿಂಥೆಟಿಕ್ ಮಾದಕ ವಸ್ತು, ಕುಡಿತದಿಂದ ಅಪಾಯ'

  'ಸಿಂಥೆಟಿಕ್ ಮಾದಕ ವಸ್ತು, ಕುಡಿತದಿಂದ ಅಪಾಯ'

  ನಮ್ಮಲ್ಲಿ ಸಿಂಥೆಟಿಕ್ ಮಾದಕ ವಸ್ತುಗಳು ಹಾಗೂ ಕುಡಿತದಿಂದಾಗಿ ಅಪರಾಧ ಪ್ರಮಾಣ ಅತಿಯಾಗಿದೆ. ಗಾಂಜಾ ಕಾನೂನುಬದ್ಧವಾಗಿರುವ ಎಷ್ಟೋ ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆ ಇದೆ ಎಂದರು ನಿವೇದಿತಾ.

  'ಗಾಂಜಾದಲ್ಲಿನ ಔಷಧೀಯ ಗುಣವನ್ನು ಪರಿಗಣಿಸಿ'

  'ಗಾಂಜಾದಲ್ಲಿನ ಔಷಧೀಯ ಗುಣವನ್ನು ಪರಿಗಣಿಸಿ'

  ಗಾಂಜಾದಲ್ಲಿರುವ ಔಷಧೀಯ ಗುಣ ಹಾಗೂ ಇನ್ನಿತರೆ ವಿಷಯಗಳನ್ನು ಪರಿಗಣಿಸಿ ಅದನ್ನು ಕಾನೂಬದ್ಧಗೊಳಿಸಬೇಕು ಎಂದು ನಟಿ ನಿವೇದಿತಾ ಹೇಳಿದ್ದಾರೆ. ಈ ಹಿಂದೆಯಿಂದ ಒಂದು ಬಗೆಯ ಗುಂಪು ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ.

  ಗಟ್ಟಿ ಪಾತ್ರಗಳಿಗೆ ಖ್ಯಾತರು ನಿವೇದಿತಾ

  ಗಟ್ಟಿ ಪಾತ್ರಗಳಿಗೆ ಖ್ಯಾತರು ನಿವೇದಿತಾ

  ನಟಿ ನಿವೇದಿತಾ ತಮ್ಮ ಗಟ್ಟಿ ನುಡಿಗಳಿಗೆ, ಗಟ್ಟಿ ಪಾತ್ರಗಳಿಗೆ ಖ್ಯಾತರು. ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಿವೇದಿತಾ ಅಭಿನಯ ಗಮನ ಸೆಳೆದಿತ್ತು. ಕನ್ನಡದ ಹೊರತಾಗಿ ಕೆಲವು ತಮಿಳು ಸಿನಿಮಾಗಳಲ್ಲಿಯೂ ನಿವೇದಿತಾ ನಟಿಸಿದ್ದಾರೆ.

  ಸ್ಯಾಂಡಲ್‌ವುಡ್‌ಗೆ ಮಾದಕ ವಸ್ತು ನಂಟು?

  ಸ್ಯಾಂಡಲ್‌ವುಡ್‌ಗೆ ಮಾದಕ ವಸ್ತು ನಂಟು?

  ಚಂದನವನಕ್ಕೆ ಡ್ರಗ್ಸ್ ಮಾಫಿಯಾದ ನಂಟಿದೆ ಎಂಬ ಕುರಿತಾಗಿ ಚರ್ಚೆ ಪ್ರಸ್ತುತ ತಾರಕ್ಕೇರಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್, ಆದಿ ಲೋಕೇಶ್, ರಕ್ಷತ್ ಇನ್ನೂ ಕೆಲವರು ಚಂದನವನದ ಕೆಲವು ನಟ-ನಟಿಯರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

  English summary
  Actress Niveditha said marijuana had many Pharmaceutical quality so it should be legalized tender in India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X