For Quick Alerts
  ALLOW NOTIFICATIONS  
  For Daily Alerts

  ಮಾಸ್ಟರ್ ಆನಂದ್ 39ನೇ ಹುಟ್ಟುಹಬ್ಬ: ನೆನಪಿದೆಯಾ ಮಾಸ್ಟರ್ ಆನಂದ್ ಮೊದಲು ನಿರ್ದೇಶಿಸಿದ ಚಿತ್ರ?

  |

  ಮಾಸ್ಟರ್ ಆನಂದ್ 1984ರ ಜನವರಿ 4ರಂದು ವಿ ಹರಿಹರನ್ ಹಾಗೂ ಬಿ ಎಸ್ ಲತಾ ಎಂಬ ದಂಪತಿಗಳಿಗೆ ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ ಚಲನಚಿತ್ರರಂಗದ ಉತ್ತಮ ಬಾಲ್ಯ ನಟರು ಎಂಬ ವಿಷಯ ಕಿವಿಗೆ ಬಿದ್ದ ತಕ್ಷಣ ನೆನಪಾಗುವ ಕೆಲವೇ ಹೆಸರುಗಳಲ್ಲಿ ಮಾಸ್ಟರ್ ಆನಂದ್ ಅವರ ಹೆಸರೂ ಸಹ ಒಂದು. ಚಿಕ್ಕ ವಯಸ್ಸಿಗೆ ನಟನೆಯನ್ನು ಕರಗತ ಮಾಡಿಕೊಂಡಿದ್ದ ಮಾಸ್ಟರ್ ಆನಂದ್ ವಿಶೇಷವಾಗಿ ಕಾಮಿಡಿ ಎಂಟರ್‌ಟೈನರ್ ಚಿತ್ರಗಳಲ್ಲಿ ಮಾಡುತ್ತಿದ್ದ ಅಭಿನಯ ಪ್ರೇಕ್ಷಕರಿಗೆ ಅಚ್ಚುಮೆಚ್ಚು.

  ಇನ್ನು ರವಿಚಂದ್ರನ್ ಅವರ ಕಿಂದರಿ ಜೋಗಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ನಂತರ ಯಶಸ್ವಿ ಬಾಲನಟನಾಗಿ, ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಬೆಳೆದರು. 2010ರಲ್ಲಿ ಯಶಸ್ವಿನಿ ಎಂಬುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಅವರಿಗೆ ವಂಶಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಅಪ್ಪನಂತೆ ಮಗಳೂ ಸಹ ಪುಟ್ಟ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಿ ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾಳೆ.

  ಇನ್ನು ಮಾಸ್ಟರ್ ಆನಂದ್ ಮದುವೆಯಾಗಿ, ತಂದೆಯಾದರೂ ಸಹ ಇನ್ನೂ ಮಾಸ್ಟರ್ ಆನಂದ್ ಎಂದೇ ಕರೆಯಲ್ಪಡುತ್ತಿದ್ದು, ಇದು ಅವರು ಬಾಲಕನಾಗಿದ್ದಾಗ ಮಾಡಿದ್ದ ಅತ್ಯದ್ಭುತ ನಟನೆಯ ಪ್ರಭಾವವಾಗಿದೆ. ಅಂದಹಾಗೆ ಮಾಸ್ಟರ್ ಆನಂದ್ ಚಿಕ್ಕ ವಯಸ್ಸಿನಲ್ಲಿ ಮಾತ್ರವಲ್ಲದೇ ದೊಡ್ಡವನಾಗಿ ಬೆಳೆದ ನಂತರವೂ ಸಹ ಇಂಡಸ್ಟ್ರಿಯಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ನೆಲೆಯೂರಲು ಪ್ರಯತ್ನಪಟ್ಟಿದ್ದರಾದರೂ ಹೆಚ್ಚೇನೂ ಯಶಸ್ಸು ಗಳಿಸಲಾಗಲಿಲ್ಲ.

  ಮಾಸ್ಟರ್ ಆನಂದ್ ನಟನಾಗಿ ಅಭಿನಯಿಸಿದ ಮೊದಲ ಚಿತ್ರ

  ಮಾಸ್ಟರ್ ಆನಂದ್ ನಟನಾಗಿ ಅಭಿನಯಿಸಿದ ಮೊದಲ ಚಿತ್ರ

  ಬಾಲ ನಟನಾಗಿ ನಟಿಸಿದ್ದ ಮಾಸ್ಟರ್ ಆನಂದ್ ನಂತರ 2002ರಲ್ಲಿ ತೆರೆಕಂಡ 'ಫ್ರೆಂಡ್ಸ್' ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಈ ಚಿತ್ರದಲ್ಲಿದ್ದ ಐದು ನಾಯಕರಲ್ಲಿ ಮಾಸ್ಟರ್ ಆನಂದ್ ಕೂಡ ಒಬ್ಬರಾಗಿದ್ದರು. ಇದಾದ ಬಳಿಕ ಮಾಸ್ಟರ್ ಆನಂದ್ ಲೀಡ್ ಪಾತ್ರಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳಲಿಲ್ಲ. ದೇವರು ವರವನು ಕೊಟ್ರೆ, ಜೇಷ್ಠ, ಮಣಿ, ಬುಲೆಟ್ ಬಸ್ಯಾ, ಪ್ಯಾರ್ಗೆ ಆಗ್‌ಬುಟ್ಟೈತೆ ಹಾಗೂ ಜಾತ್ರೆ ಚಿತ್ರಗಳಲ್ಲಿ ಮಾಸ್ಟರ್ ಆನಂದ್ ಪೋಷಕ ನಟ ಪಾತ್ರವನ್ನು ನಿರ್ವಹಿಸಿದ್ದಾರೆ.

  ನಿರ್ದೇಶನ ಮಾಡಿದ್ರು ಮಾಸ್ಟರ್ ಆನಂದ್

  ನಿರ್ದೇಶನ ಮಾಡಿದ್ರು ಮಾಸ್ಟರ್ ಆನಂದ್

  ಫ್ರೆಂಡ್ಸ್ ಮೂಲಕ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಮಾಸ್ಟರ್ ಆನಂದ್ 2011ರಲ್ಲಿ ಬಿಡುಗಡೆಗೊಂಡ '5 ಈಡಿಯಟ್ಸ್' ಎಂಬ ಚಿತ್ರದ ಮೂಲಕ ನಿರ್ದೇಶಕನಾಗಿಯೂ ಬಡ್ತಿ ಪಡೆದರು. ಆದರೆ ಈ ಚಿತ್ರ ಹೇಳಿಕೊಳ್ಳುವಂತ ಯಶಸ್ಸು ಸಾಧಿಸದೇ ಮಾಸ್ಟರ್ ಆನಂದ್ ಸೋಲನ್ನು ಕಂಡರು. ಬಳಿಕ 'ಮಚ್ಚಾ ಬಾಗ್ಲಾಕೋ' ಎಂಬ ಚಿತ್ರಕ್ಕೂ ಸಹ ಮಾಸ್ಟರ್ ಆನಂದ್ ಆಕ್ಷನ್ ಕಟ್ ಹೇಳಿದ್ದರು. ಅಷ್ಟೇ ಅಲ್ಲದೇ 'ಪಡುವಾರಳ್ಳಿ ಪಡ್ಡೆಗಳು' ಹಾಗೂ 'ರೋಬೊ ಫ್ಯಾಮಿಲಿ' ಎಂಬ ಧಾರಾವಾಹಿಗಳಿಗೂ ಸಹ ಮಾಸ್ಟರ್ ಆನಂದ್ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ಈಗ ಮಾಸ್ಟರ್ ಆನಂದ್ ರಿಯಾಲಿಟಿ ಶೋಗಳ ನಿರೂಪಕನಾಗಿಯೂ ಸಹ ಕೆಲಸ ನಿರ್ವಹಿಸುತ್ತಿದ್ದಾರೆ.

  ಮಾಸ್ಟರ್ ಆನಂದ್ ಗೆದ್ದ ಪ್ರಶಸ್ತಿಗಳು

  ಮಾಸ್ಟರ್ ಆನಂದ್ ಗೆದ್ದ ಪ್ರಶಸ್ತಿಗಳು

  ಮಾಸ್ಟರ್ ಆನಂದ್ ಬಾಲನಟನಾಗಿದ್ದಾಗಲೇ ಉನ್ನತ ಪ್ರಶಸ್ತಿಗಳನ್ನು ಗೆದ್ದಿದ್ದರು. 1991 - 92ರಲ್ಲಿ ಗೌರಿ ಗಣೇಶ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಅತ್ಯುತ್ತಮ ಬಾಲನಟ ಕೆಟಗರಿ ಅಡಿಯಲ್ಲಿ ಪಡೆದಿದ್ದರು. 1994-95ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ತಾಯಿ ಇಲ್ಲದ ತವರು ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟ ಕೆಟಗಿರಯಲ್ಲಿ ಪಡೆದಿದ್ದರು. 1995-96ರಲ್ಲಿ ಮಕ್ಕಳ ಸಾಕ್ಷಿ ಚಿತ್ರಕ್ಕಾಗಿ ಮಾಸ್ಟರ್ ಆನಂದ್ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಬಾಲ ನಟ ಕೆಟಗರಿ ಅಡಿಯಲ್ಲಿ ಪಡೆದಿದ್ದರು.

  English summary
  Master Anand Birthday: List of films acted and directed by Master Anand. Take a look
  Wednesday, January 4, 2023, 16:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X