»   » ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ 'RJ'

ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ 'RJ'

Posted By:
Subscribe to Filmibeat Kannada
ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ | Oneindia Kannada

ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ 'RJ' ಆಗಿದ್ದಾರೆ. 'ನಮ್ ರೇಡಿಯೋ'ದಲ್ಲಿ ಬರುತ್ತಿರುವ ಹೊಸ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಸಾರಥ್ಯ ವಹಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದ್ದು, ಆರ್ ಜೆ ಆಗಲು ಖುಷಿಯಿಂದ ಆನಂದ್ ಒಪ್ಪಿಕೊಂಡಿದ್ದಾರಂತೆ.

ಚಿಕ್ಕ ವಯಸ್ಸಿಯನಲ್ಲಿಯೇ ಅನೇಕ ಸಿನಿಮಾಗಳನ್ನು ಮಾಡಿದ್ದ ಮಾಸ್ಟರ್ ಆನಂದ್ ಈಗ ಕಿರುತೆರೆಯಲ್ಲಿ ಬಿಜಿ ಇದ್ದಾರೆ. ಒಂದು ಕಡೆ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು 2' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ 'ನಿಗೂಡ ರಾತ್ರಿ' ಧಾರಾವಾಹಿಯ ನಿರ್ದೇಶನದ ಜವಾಬ್ದಾರಿ ಕೂಡ ಆನಂದ್ ವಹಿಸಿಕೊಂಡಿದ್ದಾರೆ. ಇವುಗಳ ಜೊತೆಗೆ ಈಗ ಆರ್ ಜೆ ಆಗಿ ಅಭಿಮಾನಿಗಳ ಮುಂದೆ ಆನಂದ್ ದರ್ಶನ ನೀಡಲಿದ್ದಾರೆ.

Master Anand turns has radio jackie for Nam Radio

ಮಾಸ್ಟರ್ ಆನಂದ್ ಎಂದ ತಕ್ಷಣ ನೆನಪಾಗುವುದು ಕಾಮಿಡಿ. ಅದೇ ಕಾರಣದಿಂದ ಈ ಕಾರ್ಯಕ್ರಮ ಕೂಡ ಕಾಮಿಡಿ, ಫನ್ ಅಂಶಗಳನ್ನು ಒಳಗೊಂಡಿದೆಯಂತೆ. ಕೇಳುಗರಿಗೆ 100 % ಮನರಂಜನೆ ನೀಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಶುರು ಮಾಡಲಾಗುತ್ತಿದೆ. ವಿಭಿನ್ನ ರೀತಿಯಾಗಿ ಪ್ಲಾನ್ ಮಾಡುತ್ತಿದ್ದು 10-15 ದಿನಗಳಲ್ಲಿ ಈ ಹೊಸ ಶೋ ಶುರು ಆಗಲಿದೆ.

ಈ ಹಿಂದೆ 'ನಮ್ ರೇಡಿಯೋ'ದಲ್ಲಿ ಹೊಸ ವರ್ಷದ ವಿಶೇಷವಾಗಿ ಆನಂದ್ ಒಂದು ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಬಂದ ದೊಡ್ಡ ಪ್ರತಿಕ್ರಿಯೆ ಈಗ ಒಂದು ಹೊಸ ಕಾರ್ಯಕ್ರಮ ಮಾಡುವ ಉತ್ಸಾಹ ನೀಡಿದೆ. ಅಂದಹಾಗೆ, ಈ ಶೋ ಪ್ರತಿ ದಿನ ಪ್ರಸಾರ ಆಗಲಿದೆ. ಬಿ.ಬಿ.ಸಿ ರೀತಿಯ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ತರುವ ಹೊಸ ಕಾನ್ಸೆಪ್ಟ್ ಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ 'ನಮ್ ರೇಡಿಯೋ' ಈ ಮೂಲಕ ತರುತ್ತಿದೆಂತೆ. ಸದ್ಯಕ್ಕೆ ಕಾರ್ಯಕ್ರಮದ ಪ್ಲಾನ್ ಇನ್ನೂ ನಡೆಯುತ್ತಿದೆ.

English summary
Kannada actor Master Anand turns has radio jackie for 'Nam Radio' station. Master Anand is hosting a new show in 'Nam Radio'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X