»   » ಬೆಳ್ಳಿಪರದೆ ಮೇಲೆ ಸಚಿನ್ ತೆಂಡೂಲ್ಕರ್ ಹೊಸ ಇನ್ನಿಂಗ್ಸ್

ಬೆಳ್ಳಿಪರದೆ ಮೇಲೆ ಸಚಿನ್ ತೆಂಡೂಲ್ಕರ್ ಹೊಸ ಇನ್ನಿಂಗ್ಸ್

Posted By:
Subscribe to Filmibeat Kannada

ಭಾರತೀಯ ಕ್ರಿಕೆಟ್ ಜಗತ್ತಿನ ದಂತಕಥೆ, ಭಾರತರತ್ನ ಸಚಿನ್ ತೆಂಡೂಲ್ಕರ್ ಬೆಳ್ಳಿಪರದೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮ್ಮದೇ ಜೀವನಕಥೆಯಾಧಾರಿತ ಚಿತ್ರದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಸರಿಸುಮಾರು 2,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೆ ಶೇ.50ರಷ್ಟು ಚಿತ್ರೀಕರಣ ಪೂರ್ಣವಾಗಿದ್ದು ಮುಂಬೈ ಮೂಲದ ನಿರ್ಮಾಣ ಸಂಸ್ಥೆ '200 ನಾಟ್ ಔಟ್' ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರದಲ್ಲಿ ಸಚಿನ್ ಅವರ ವೈಯಕ್ತಿಯ ಹಾಗೂ ವೃತ್ತಿಬದುಕಿನ ರೋಚಕ ಕ್ಷಣಗಳು ಬೆಳ್ಳಿಪರದೆ ಮೇಲೆ ಮೂಡಿಬರಲಿವೆ. [ಸಚಿನ್, ತೆಂಡೂಲ್ಕರ್ ಅಲ್ಲ: ಚಿತ್ರ ವಿಮರ್ಶೆ]

ಹಾಗಂತ ಇದು ಸಾಕ್ಷ್ಯಚಿತ್ರವೂ ಅಲ್ಲ, ಸಚಿನ್ ಅವರ ಜೀವನ ಚರಿತ್ರೆಯೂ ಅಲ್ಲ ಎನ್ನುತ್ತದೆ '200 ನಾಟ್ ಔಟ್' ಸಂಸ್ಥೆ. ಈ ಚಿತ್ರಕ್ಕೆ ಲಂಡನ್ ಮೂಲದ ಬರಹಗಾರ, ನಿರ್ಮಾಪಕ ಹಾಗೂ ನಿರ್ದೇಶಕ ಜೇಮ್ಸ್ ಎರ್ಸ್ ಕೈನ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

Master Blaster Sachin Tendulkar debuts in Bollywood

200 ನಾಟ್ ಔಟ್ ಸಂಸ್ಥೆ 150ಕ್ಕೂ ಹೆಚ್ಚು ಜಾಹೀರಾತುಗಳು ಮತ್ತು ಕಿರುಚಿತ್ರಗಳನ್ನು ನಿರ್ಮಿಸಿದ ಖ್ಯಾತಿಯನ್ನು ಹೊಂದಿದೆ. ಇನ್ನು ಚಿತ್ರದ ನಿರ್ದೇಶಕ ಜೇಮ್ಸ್ ಅವರೂ ಅಷ್ಟೆ ಹಲವಾರು ಕ್ರಿಡಾ ಪಟುಗಳ ಜೀವನ ಆಧಾರಿತ ಚಿತ್ರಗಳಿಗೆ ಹೆಸರಾದವರು.

ಒಟ್ಟಾರೆ ಸಚಿನ್ ತೆಂಡೂಲ್ಕರ್ ಅವರು ತಮ್ಮದೇ ವೈಯಕ್ತಿಯ ಹಾಗೂ ವೃತ್ತಿಬದುಕಿನ ಕಥೆಯಲ್ಲಿ ಬಣ್ಣಹಚ್ಚುತ್ತಿರುವುದು ವಿಶೇಷ. ಈ ಮೂಲಕ ಬೆಳ್ಳಿತೆರೆಗೆ ಮತ್ತೊಬ್ಬ ಹೀರೋ ಎಂಟ್ರಿ ಕೊಡುತ್ತಿದ್ದಾರೆ.

ಸಚಿನ್ ಅವರ 25 ವರ್ಷಗಳ ವೃತ್ತಿಬದುಕು, ಗೆಳಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲ, ಮುಂದೆ ಯೌವನ , ಮದುವೆ ಬಂಧನದ ಹೊಸ ಜೀವನ, ಏರುಪೇರಿನ ಗತಿಯಲ್ಲಿ ಜೀವನ, ಸಾಗಿ ಮಾಗಿ ಬಂದ ಹಿರಿತನದ ಅಮೋಘ ಕ್ಷಣಗಳನ್ನು ನಿರೀಕ್ಷಿಸಬಹುದು. (ಏಜೆನ್ಸೀಸ್)

English summary
Master Blaster Sachin Tendulkar Featuring himself in the yet-to-be-titled movie will capture his cricket and personal life in great detail. Apart from acting in real-time, Tendulkar will also chip in with his inputs for the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada