For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳಲ್ಲಿ ತೆರೆಕಾಣಲಿದೆ 'ಮೇಘಾ ಅಲಿಯಾಸ್ ಮ್ಯಾಗಿ'

  By Bharath Kumar
  |

  ಸುಕೃತ ವಾಗ್ಲೆ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಮೇಘಾ ಅಲಿಯಾಸ್ ಮ್ಯಾಗಿ' ಇದೇ ತಿಂಗಳಲ್ಲಿ (ಜೂನ್ 15) ತೆರೆಕಾಣಲಿದೆ. ವಿಶಾಲ್ ಪುಟ್ಟಣ್ಣ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದು, ವಿನಯ್ ಕುಮಾರ್ ನಿರ್ಮಿಸಿದ್ದಾರೆ.

  ಹೆಣ್ಣೊಬ್ಬಳ ಮನದ ಭಾವೋದ್ವೇಗದ ಕಥಾನಕವನ್ನು ಒಳಗೊಂಡಿರುವ ಈ ಚಿತ್ರವು ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥೆಯನ್ನು ಹೊಂದಿದೆ. ಸುಕೃತಾ ವಾಗ್ಲೆ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ಚಿತ್ರಕ್ಕೆ ಜಿನಿಸ್ ಪೈಕ್ಕಟ್ಟು ಹಾಗೂ ಜಯಪ್ರಕಾಶ್ ಛಾಯಾಗ್ರಹಣ, ಅತಿಶಯ ಜೈನ್ ಸಂಗೀತ ನೀಡಿದ್ದಾರೆ. ಸುಕೃತ ವಾಗ್ಲೆ ಜೊತೆ ತೇಜ್ ಗೌಡ, ನೀತು ಬಾಲ, ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್, ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

  ತಾಯಂದಿರಿಂದ ಎಂಎಂಸಿಹೆಚ್ ಹಾಡುಗಳ ಅನಾವರಣ

  ದಶಕದ ನಂತರ 'ಮುಸ್ಸಂಜೆ ಮಾತು' ಚಿತ್ರದ ಯಶಸ್ವೀ ಜೋಡಿ ನಿರ್ದೇಶಕ ಮುಸ್ಸಂಜೆ ಮಹೇಶ್ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮತ್ತೊಂದು ಮ್ಯೂಸಿಕಲ್ ಹಿಟ್ ಚಿತ್ರವನ್ನು ಪ್ರೇಕ್ಷಕರಿಗೆ ನೀಡಲು ಅಣಿಯಾಗಿದ್ದಾರೆ.

  ಎಂಎಂಸಿಹೆಚ್ ಎಂಬ ವಿಷೇಶ ಶೀರ್ಷಿಕೆ ಹೊಂದಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಪಂಚತಾರಾ ಹೋಟೆಲೊಂದರಲ್ಲಿ ನಡೆಯಿತು. ವಿಷೇಶವಾಗಿ ಈ ಚಿತ್ರದಲ್ಲಿ ಅಭಿನಯಿಸಿದ ನಾಲ್ವರು ನಾಯಕಿಯರ ತಾಯಂದಿರ ಕೈನಲ್ಲೇ ಈ ಚಿತ್ರದ ಹಾಡುಗಳ ಮೇಕಿಂಗ್ ನ್ನು ಲೋಕಾರ್ಪಣೆ ಮಾಡಲಾಯಿತು.

  ಈ ಆಡಿಯೋ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಫಿಲಂ ಚೇಂಬರ್ ಅಧ್ಯಕ್ಷರಾದ ಸಾ.ರಾ. ಗೋವಿಂದು, ಉಮೇಶ್ ಬಣಕಾರ್ ಸೇರಿದಂತೆ ಹಲವರು ಗಣ್ಯರು ಆಗಮಿಸಿದ್ದರು.

  ಈ ಚಿತ್ರವನ್ನು ಎಸ್. ಪುರುಷೋತ್ತಮ್, ಜಾನಕಿರಾಮ್ ಹಾಗೂ ಅರವಿಂದ್ ಈ ಮೂವರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ರಜನಿಕಾಂತ್ ಕೆಲಸ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರು ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

  ಈ ಚಿತ್ರದಲ್ಲಿ ಬರುವ ಪ್ಯಾಥೋಸಾಂಗ್ ಒಂದನ್ನು ಇಂಡಿಯನ್ ರೈಲ್ವೇಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ದಯಾನಂದ್ ಅವರು ಹಾಡಿದ್ದಾರೆ. ಸಾಹಿತಿ ಗೌಸ್ ಪೀರ್ ರಚಿಸಿದ ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ ಎಂಬ ಶೋಕಗೀತೆಗೆ ದಯಾನಂದ್ ಅವರು ದನಿಯಾಗಿದ್ದಾರೆ.

  ಈವರೆಗೆ ಹಲವಾರು ಭಾವಗೀತೆಗಳು ಭಕ್ತಿಗೀತೆಗೆಳನ್ನು ಹಾಡಿರುವ ಇವರು ಚಲನಚಿತ್ರಕ್ಕೆ ಹಾಡಿರುವುದು ಫಸ್ಟ್ ಟೈಮ್. ಹಿರಿಯನಟಿ ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾರಾಜ್, ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್, ಸುಧಾ ಬೆಳವಾಡಿ ಅವರ ಪುತ್ರಿ ಸಂಯುಕ್ತಾ ಹೊರನಾಡು ಹಾಗೂ ಸುಮಿತ್ರಮ್ಮ ಅವರ ಪುತ್ರಿ ನಕ್ಷತ್ರ ಎಂ.ಎಂ.ಸಿ.ಹೆಚ್. ಚಿತ್ರದ ನಾಲ್ಕು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

  ಇವರ ಜೊತೆ ನಟಿ ರಾಗಿಣಿ ದ್ವಿವೇದಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಪೊಲೀಸ್ ಕಾಪ್ ಗೆಟಪ್ ನಲ್ಲಿ ಅವರು ಮಿಂಚಿದ್ದಾರೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್‍ ರಂಥ ಪ್ರಮುಖ ಗಾಯಕರು ಹಾಡಿದ್ದಾರೆ.

  English summary
  kannada actress sukrutha wagle starrer megha alias maggi movie will release on june 15th. and kannada movie mmch audio released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X