For Quick Alerts
  ALLOW NOTIFICATIONS  
  For Daily Alerts

  ಹೊಸ ಚಿತ್ರದಲ್ಲಿ ಜಿಲ್ಕಾ ನಾಯಕನಿಗೆ ಅನು ಸಿರಿಮನೆ ಸಾಥ್

  |

  ಅದೆಷ್ಟೋ ಕಲಾವಿದರು ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಬರುವವರಲ್ಲಿ ಕೆಲವರಿಗಷ್ಟೆ ಸಕ್ಸಸ್ ಅನ್ನೋದು ಕೈ ಹಿಡಿಯೋದು. ಹೀಗೆ ಟಿವಿ ಸೀರಿಯಲ್‌ನಿಂದ ಬಿಗ್‌ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟವರಲ್ಲಿ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ ಕೂಡ ಒಬ್ಬರು. ಟಿವಿ ಸೀರಿಯಲ್ ನಲ್ಲಿ ನಂ 1 ಧಾರವಾಹಿಯಾಗಿ ಗುರುತಿಸಿಕೊಂಡಿರೋ ಈ ಧಾರವಾಹಿ ಮೂಲಕ ರಾಜ್ಯದ ಮನೆ ಮನಗಳಲ್ಲಿ ಈ ಮೇಘಾ ಶೆಟ್ಟಿ ಅನು ಸಿರಿಮನೆಯಾಗಿ ಪರಿಚಿತರಾಗಿದ್ದಾರೆ. ಈ ಸೀರಿಯಲ್ ಮೂಲಕ ಸಾಕಷ್ಟು ಹೆಸರುವಾಸಿ ಆದ ಇವರು, ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಸಾಲು ಸಾಲು ಸಿನಿಮಾ ಆಫರ್ ಮೇಘಾ ಶೆಟ್ಟಿಯನ್ನ ಅರಸಿ ಬರುತ್ತಿವೆ.

  ಜೊತೆ ಜೊತೆಯಲಿ ಸೀರಿಯಲ್ ಪ್ರಸಾರವಾಗುತ್ತಿರುವಾಗಲೇ ಮೇಘಾ ಶೆಟ್ಟಿಗೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗೆ ನಾಯಕಿ ಆಗೋ ಅವಕಾಶ ಸಿಕ್ಕಿತ್ತು. ತ್ರಿಬಲ್ ರೈಡಿಂಗ್‌ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವಾಗಲೇ ಮೇಘನಾಗೆ ಮತ್ತಷ್ಟು ಸಿನಿಮಾ ಆಫರ್ ಗಳು ಬರುತ್ತಿವೆ. ಅಧಿಕೃತವಾಗಿ ಮತ್ತೊಂದು ಸಿನಿಮಾವನ್ನು ಮೇಘನಾ ಶೆಟ್ಟಿ ಅನೌನ್ಸ್ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ಪಾತ್ರ ತುಂಬ ಡಿಫರೆಂಟ್ ಆಗಿ ಇರಲಿದೆಯಂತೆ.

  ಚಿತ್ರದ ಟೈಟಲ್ ಇನ್ನು ಫೈನಲ್ ಆಗಿಲ್ಲ. ಆದರೆ ಈ ಸಿನಿಮಾ ಬಹುಭಾಷೆಗಳಲ್ಲಿ ಬರುತ್ತಿದೆ ಅನ್ನೋದು ವಿಶೇಷ. ಕನ್ನಡ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಹೊರತರಲು ಚಿತ್ರತಂಡ ತಯಾರಿ ನಡೆಸಿದೆ. ಈ ಬಿಗ್ ಬಡ್ಜೆಟ್ ಸಿನಿಮಾಗೆ ಮೇಘಾ ಶೆಟ್ಟಿ ಆಯ್ಕೆಯಾಗಿದ್ದು, ತುಂಬಾ ಎಕ್ಸೈಟ್ ಆಗಿದ್ದಾರಂತೆ.

  ಈ ಚಿತ್ರದಲ್ಲಿ ಮೇಘಾ ಶೆಟ್ಟಿ ಜೊತೆ ಕೊ ಸ್ಟಾರ್ ಆಗಿ ಕವೀಶ್ ಶೆಟ್ಟಿ ನಟಿಸಲಿದ್ದು, ಈ ಹಿಂದೆ ಜಿಲ್ಕಾ ಸಿನಿಮಾದಲ್ಲಿ ಕವೀಶ್ ಕಾಣಿಸಿಕೊಂಡಿದ್ದರು. ಇದು ಕವೀಶ್ ಅವರಿಗೆ ಎರಡನೇ ಸಿನಿಮಾ ಆಗಿದ್ದು, ರಾಘವೇಂದ್ರ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಟೈಟಲ್ ಅನೌನ್ಸ್ ಆಗಲಿದ್ದು, ನಂತರದಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ತಯಾರಿ ನಡೆಸಿದೆ. ಇನ್ನು ಸಿನಿಮಾದ ಚಿತ್ರೀಕರಣ ಬೆಂಗಳೂರು ಸೆರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನಡೆಯಲಿದೆ.

  ಉಡುಪಿ ಮೂಲದ ವಿಜಯ್ ಕುಮಾರ್ ಶೆಟ್ಟಿ ಹಾಗೂ ರಮೇಶ್ ಕೊಠಾರಿ ತಮ್ಮ ಕ್ಲಾಸಿಕ್ ಸ್ಟುಡಿಯೋ ಅಂಗ ಸಂಸ್ಥೆಯ ಅಡಿಯಲ್ಲಿ ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಎನ್ನುವ ನಿರ್ಮಾಣ ಸಂಸ್ಥೆಯ ಮೂಲಕ ಈ ಬಹು ಭಾಷೆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನ ಈಗಲೇ ಮಾಡಿಕೊಳ್ಳಲಾಗುತ್ತಿದ್ದು, ಉಳಿದ ತಾರಾಗಣ ಇನ್ನಷ್ಟೆ ಫೈನಲ್ ಆಗಬೇಕಿದೆ.

   Megha Shetty to Play Female Lead in Kaveesh Shettys Next Big Budget Movie

  ನಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುವ ಮೊದಲನೇ ಚಿತ್ರಕ್ಕೆ ಒಂದು ಅದ್ಧೂರಿತನದ ಅದ್ಭುತವಾದ ಕಥೆಯನ್ನೇ ಆಯ್ಕೆ ಮಾಡಿದ್ದೇವೆ ಎನ್ನುವ ಖುಷಿಯಿದೆ. ಕನ್ನಡ, ಮರಾಠಿ ಮತ್ತು ಇತರ ಭಾಷೆಯ ಸ್ಟಾರ್ ನಟರ ದಂಡು ಈ ಚಿತ್ರದಲ್ಲಿದೆ ಮತ್ತು ಪ್ರತಿಯೊಂದು ವಿಭಾಗದಲ್ಲೂ ಚಿತ್ರರಂಗದ ನುರಿತ ತಂತ್ರಜ್ಞರ ದೊಡ್ಡ ತಂಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಮೂಲಕ ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಇದೊಂದು ದೊಡ್ಡ ಬಜೆಟ್ಟಿನ ಚಿತ್ರ ಎನ್ನುವ ಸುಳಿವನ್ನೂ ನೀಡಿದ್ದಾರೆ.

  English summary
  Jothe Jotheyali serial fame Megha Shetty to Play Female Lead in Jilka Movie fame Kaveesh Shetty's Next Big Budget Movie. Know more details.
  Thursday, October 21, 2021, 12:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X