For Quick Alerts
  ALLOW NOTIFICATIONS  
  For Daily Alerts

  ತಿರುಪತಿ ತಿಮ್ಮಪ್ಪನಿಗೆ ಹರಕೆ ತೀರಿಸಿದ ಮೇಘನಾ ತಂದೆ ಸುಂದರ್ ರಾಜ್

  |

  ನಟಿ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ಚಿರು ನಿಧನದ ಬಳಿಕ ಕಟ್ಟಿಕೊಂಡಿದ್ದ ಹರಿಕೆಯನ್ನು ಈಡೇರಿಸಿದ್ದಾರೆ.

  ಚಿರಂಜೀವಿ ಸರ್ಜಾ ಸಾವಿನ ಬಳಿಕ ತನ್ನ ಮಗಳಿಗೆ ಏನು ತೊಂದರೆಯಾಗದಂತೆ, ಆರೋಗ್ಯವಾಗಿ ಹೆರಿಗೆ ಆಗಲಿ ಎಂದು ತಿರುಪತಿ ತಿಮ್ಮಪ್ಪನಿಗೆ ಹರಿಕೆ ಕಟ್ಟಿಕೊಂಡಿದ್ದರಂತೆ. ಹರಿಕೆ ಈಡೇರಿಸಲು ತಿರುಪತಿಗೆ ಭೇಟಿ ನೀಡಿದ ಸುಂದರ್ ರಾಜ್ ತಮ್ಮ ಮುಡಿ ಅರ್ಪಿಸಿದ್ದಾರೆ.

  ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್

  ''ತಿರುಪತಿ ತಿಮ್ಮಪ್ಪ ನಮ್ಮ ಕುಟುಂಬದ ನೆಚ್ಚಿನ ದೇವರ. ನಮ್ಮ ತಾಯಿ ಪ್ರತಿ ವಿಚಾರಕ್ಕೆ ಬಾಲಾಜಿ, ಶ್ರೀನಿವಾಸ ಎಂದು ಪ್ರಾರ್ಥಿಸುತ್ತಿದ್ದರು. ನಾನು ಅಷ್ಟೇ ನಂಬಿದ್ದೇನೆ. ನಂಬಿದವರ ಕೈ ಬಿಡಲ್ಲ. ಮಗಳು-ಮೊಮ್ಮಗ ಆರೋಗ್ಯವಾಗಿದೆ'' ಎಂದು ಸುಂದರ್ ರಾಜ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

  ನಟ ಚಿರಂಜೀವಿ ಸರ್ಜಾ ಅವರ ಜೂನ್ 7 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಗರ್ಭಿಣಿಯಾಗಿದ್ದ ಮೇಘನಾ ರಾಜ್ ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.

  Recommended Video

  ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada

  ಚಿರು ಸರ್ಜಾ ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದಲ್ಲಿ, ಮಗುವಿನ ಆಗಮನದಿಂದ ಸಂತಸ ಹಿಂತಿರುಗಿತ್ತು.

  English summary
  Actress Meghana Raj father Sundar Raj has visit to tirupati and fulfilled his vow.
  Sunday, November 8, 2020, 14:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X