Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರರಂಗದವರೇ ಕಾಲೆಳೆದರು, ಚಿತ್ರೀಕರಣಕ್ಕೆ ಹೋಗಲು ಹೆದರುತ್ತಿದ್ದೆ: ಮೇಘನಾ ರಾಜ್
ನಟಿ ಮೇಘನಾ ರಾಜ್ ಯಾರಿಗಾದರೂ ಸ್ಪೂರ್ತಿಯಾಗಬಹುದಾದಂತ ವ್ಯಕ್ತಿ. ಪ್ರೀತಿಪಾತ್ರರನ್ನು ಕಳೆದುಕೊಂಡ ಬಳಿಕ ಸ್ವಪ್ರಯತ್ನದಿಂದ ಮತ್ತೆ ತಮ್ಮದೆ ಬದುಕು ಕಟ್ಟಿಕೊಳ್ಳುವತ್ತ ದಿಟ್ಟ ಹೆಜ್ಜೆಗಳನ್ನು ನಟಿ ಇಟ್ಟಿದ್ದಾರೆ.
ಮೇಘನಾ ರಾಜ್ ಕೆಟ್ಟ ದಿನಗಳನ್ನು ನೋಡಿದ್ದಾರೆ, ಆದರೆ ಅದು ಅವರಿಗೆ ಹೊಸದೇನೂ ಅಲ್ಲ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಅವರು ಹಲವು ಟೀಕೆ-ಮೂದಲಿಕೆಗಳನ್ನು ಎದುರಿಸಿದವರೇ.
ಕೆಲವು ತಿಂಗಳ ಹಿಂದೆ ಹಿಂದಿಯ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಮೇಘನಾ ರಾಜ್ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಇದೀಗ ಅದೇ ಸಂದರ್ಶನದ ಎರಡನೇ ಭಾಗ ಬಿಡುಗಡೆ ಆಗಿದ್ದು ಸಿನಿಮಾ, ಚಿರಂಜೀವಿ ಸರ್ಜಾ, ಕುಟುಂಬದ ಬೆಂಬಲ, ಜನರ ಟೀಕೆ ಮತ್ತು ಪ್ರೀತಿ, ಚಿತ್ರರಂಗದವರ ಮಾತ್ಸರ್ಯ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಚಿತ್ರರಂಗದವರೇ ನನ್ನನ್ನು ಕೆಳಗೆ ಎಳೆದುಬಿಟ್ಟರು: ಮೇಘನಾ
ಚಿತ್ರರಂಗಕ್ಕೆ ಬರುವ ಮುನ್ನ, ಸೌಂದರ್ಯದ ಬಗ್ಗೆ, ದೇಹತೂಕ ಇನ್ನಿತರೆ ವಿಷಯಗಳ ಬಗ್ಗೆ ಯಾವುದೇ ಹಿಂಜರಿಕೆಗಳು ಇಲ್ಲದೇ ಬೆಳದಿದ್ದ ಮೇಘನಾಗೆ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಂತೆ ಹಲವು ಟೀಕೆಗಳು ಎದುರಾದವಂತೆ. ಆಕೆಯ ತ್ವಚೆ ಸರಿಯಿಲ್ಲ, ತೂಕ ಹೆಚ್ಚು, ಮುಖ ದಪ್ಪ, ಕೂದಲು ಸರಿಯಿಲ್ಲ ಇತ್ಯಾದಿ-ಇತ್ಯಾದಿ. ಮಾಧ್ಯಮದವರು ಬೆಂಬಲ ನೀಡಿದರಾದರೂ ನನ್ನ ಚಿತ್ರರಂಗದವರೇ ನನ್ನನ್ನು ಕೆಳಗೆ ಎಳೆದುಬಿಟ್ಟರು'' ಎಂದಿದ್ದಾರೆ ಮೇಘನಾ ರಾಜ್.

ಕನ್ನಡ ಇಷ್ಟವಿಲ್ಲ ಎಂದು ಪ್ರಚಾರ ಮಾಡಿದ್ದರು: ಮೇಘನಾ
ನಾನು ಸಿನಿಮಾದಲ್ಲಿ ಆರಂಭಿಸಿದ್ದು ತಮಿಳು ಸಿನಿಮಾ ಮೂಲಕ, ಆಗಲೇ ಕೆಲವರು ಈಕೆಗೆ ಕನ್ನಡ ಭಾಷೆಯ ಮೇಲೆ ಪ್ರೀತಿ ಇಲ್ಲ ಅದಕ್ಕೆ ತಮಿಳು ಸಿನಿಮಾದಿಂದ ನಟನೆ ಆರಂಭಿಸುತ್ತಿದ್ದಾಳೆ ಎಂದರು. ಆ ನಂತರ ಬಾಡಿಶೇಮಿಂಗ್ ಅಂತೂ ಸದಾ ನಡೆದೇ ಇತ್ತು. ನನ್ನ ಮೊದಲ ಫೋಟೊಶೂಟ್ ದಿನವಂತೂ ನಾನು ಬಹಳ ಅತ್ತುಬಿಟ್ಟಿದ್ದೆ. ನನಗೆ ಅಂದು ಮೇಕಪ್ ಮಾಡಿದವರು, ನನ್ನ ತ್ವಚೆ ಬಗ್ಗೆ, ಕೂದಲಿನ ಬಗ್ಗೆ ಬಹಳ ದೂರುಗಳನ್ನು ಹೇಳಿಬಿಟ್ಟರು'' ಎಂದು ನೆನಪು ಮಾಡಿಕೊಂಡಿದ್ದಾರೆ ಮೇಘನಾ.

ಚಿತ್ರೀಕರಣಕ್ಕೆ ಹೋಗಲು ಭಯವಾಗುತ್ತಿತ್ತು: ಮೇಘನಾ
ಕೆಲವು ಮೇಕಪ್ ಕಲಾವಿದರು ನಿಮ್ಮ ಬಗ್ಗೆ ನಿಮಗೇ ಅನುಮಾನ ಬರುವಂತೆ ಮಾಡಿಬಿಡುತ್ತಾರೆ. ನನಗಂತೂ ಅಂಥಹಾ ಅನುಭವ ಸಾಕಷ್ಟಾಗಿದೆ. ನನಗೆ ಕಾನ್ಫಿಡೆನ್ಸ್ ಇಲ್ಲದಾಗಿಬಿಟ್ಟಿತ್ತು, ಚಿತ್ರೀಕರಣಕ್ಕೆ ಹೋಗುವುದೆಂದರೆ ಭಯವಾಗುತ್ತಿತ್ತು. ಆ ನಂತರ ಹೇಗೋ ಮಾಡಿ ಅದೆಲ್ಲದರಿಂದ ಪಾರಾದೆ. ಕಷ್ಟಪಟ್ಟು ಮತ್ತೆ ಶೇಪ್‌ಗೆ ಬಂದೆ. ಈಗ ಪೋಸ್ಟ್ ಪ್ರೆಗೆನ್ಸಿಯಿಂದಾಗಿ ಮತ್ತೆ ದೇಹತೂಕ ಹೆಚ್ಚಾಗಿದೆ. ಆದರೆ ಜನ ಈಗ ತುಸು ದಯಾಳುವಾಗಿದ್ದಾರೆ. ಮೊದಲಿನಷ್ಟು ಟೀಕೆ ಈಗ ಕೇಳಿಬರುತ್ತಿಲ್ಲ. ಜನ ಸದಾ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ'' ಎಂದಿದ್ದಾರೆ ಮೇಘನಾ ರಾಜ್.

''ಹಿಂದಿ ಹುಡುಗಿಯರು ಬಂದು ಸೂತ್ರವೇ ಬದಲಾಯ್ತು''
ಕನ್ನಡ ಚಿತ್ರರಂಗಕ್ಕೆ ಹಿಂದಿ ಹುಡುಗಿಯರು ಬಂದು ಸೌಂದರ್ಯದ ಸೂತ್ರ ಬದಲಿಸಿಬಿಟ್ಟರು. ಬಿಳಿ ಬಣ್ಣದ, 'ಸರಿಯಾದ ಅಳತೆ'ಯ ಸೊಂಟದ, ಕೋಲು ಮುಖದ ಹುಡುಗಿಯರಿಗೆ ನಮ್ಮ ನಿರ್ಮಾಪಕರು ಹೆಚ್ಚು ಮಣೆ ಹಾಕಲು ಆರಂಭಿಸಿದರು. ಆಗ ನಮಗೆ ಒತ್ತಾಯಪೂರ್ವಕವಾಗಿ ನಮ್ಮ ದೇಹದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಇಷ್ಟಾದರೂ ಹಲವು ನಿರ್ಮಾಪಕರು ನಮಗೆ ಸಿಗಬೇಕಾದ ಸಂಭಾವನೆಯನ್ನು ನೀಡುತ್ತಿರಲಿಲ್ಲ. ಒಳ್ಳೆಯ ಬಟ್ಟೆಗಳನ್ನು ಕೊಡುತ್ತಿರಲಿಲ್ಲ. ಇದು ನನ್ನೊಬ್ಬಳ ಸಮಸ್ಯೆಯಲ್ಲ ಹಲವು ಕನ್ನಡದ ನಟಿಯರು ಈ ಸಮಸ್ಯೆ ಎದುರಿಸಿದ್ದಾರೆ ಎಂದಿದ್ದಾರೆ ಮೇಘನಾ ರಾಜ್.