»   » 'ಬಿಗ್ ಬಾಸ್' ಸುದೀಪ್ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್

'ಬಿಗ್ ಬಾಸ್' ಸುದೀಪ್ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ನಟ ಕಿಚ್ಚ ಸುದೀಪ್ ಈಗ ಕಂಪ್ಲೀಟ್ ಆಗಿ 'ಬಿಗ್ ಬಾಸ್' ಗುಂಗಿನಿಂದ ಹೊರಬಂದಿದ್ದಾರೆ. ಈಗ ಅವರು ಹೊಸ ಹೊಸ ಪ್ರಾಜೆಕ್ಟ್ ಗಳ ಕಡೆಗೆ ಗಮನಹರಿಸಿದ್ದಾರೆ. ಇದೇ ಭರಟೆಯಲ್ಲಿ ಅವರು ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ಗೆ ಆಕ್ಷನ್ ಕಟ್ ಹೇಳುತ್ತಿರುವವರು ಮಿಲನ ಪ್ರಕಾಶ್.

'ಮಿಲನ' ಚಿತ್ರದ ಮೂಲಕ ಹೊಸ ಭರವಸೆ ಮೂಡಿಸಿದ ನಿರ್ದೇಶಕ ಪ್ರಕಾಶ್. ಬಳಿಕ ಅವರು 'ವಂಶಿ' ಹಾಗೂ 'ರಿಷಿ' ಚಿತ್ರಗಳ ಮೂಲಕ ಮತ್ತೆರಡು ಯಶಸ್ವಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಟ್ಟರು. ಈಗ ಅವರ ಮತ್ತೊಂದು ಕಾಣಿಕೆಯಾಗಿ ಸುದೀಪ್ ಜೊತೆಗಿನ ಚಿತ್ರ ಬರುತ್ತಿದೆ.


ಈ ಬಾರಿಯ ಅವರು ಕೈಗೆತ್ತಿಕೊಂಡಿರುವುದು ಲವ್ ಸಬ್ಜೆಕ್ಟ್. ಬಹುಭಾಷಾ ನಟರಾಗಿ ಗುರುತಿಸಿಕೊಂಡಿರುವ ಸುದೀಪ್ ಅವರ ಯೂನಿವರ್ಸಲ್ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ಕಥೆಯನ್ನು ಎಣೆಯಲಾಗಿದೆ ಎನ್ನುತ್ತಾರೆ ಪ್ರಕಾಶ್. ಇದಿಷ್ಟು ಬಿಟ್ಟರೆ ಅವರು ಹೆಚ್ಚಿನ ಮಾಹಿತಿ ಕೊಡಲು ಸ್ವಲ್ಪ ದಿನ ಕಾಯಿರಿ ಎಂದಿದ್ದಾರೆ.

ಅಂದಹಾಗೆ ಈ ಚಿತ್ರ ಸೆಟ್ಟೇರಬೇಕಾದರೆ 2014ರ ತನಕ ಕಾಯಬೇಕು. ಇದಕ್ಕೂ ಮುನ್ನ ಸುದೀಪ್ ತಮ್ಮ ಪ್ರಾಜೆಕ್ಟ್ ಗಳನ್ನು ಮುಗಿಸಿಕೊಳ್ಳಬೇಕು. ಹಾಗೆಯೇ ಪ್ರಕಾಶ್ ಸಹ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಬೇಕು. ಆ ಚಿತ್ರದ ವಿವರಗಳನ್ನು ಶೀಘ್ರದಲ್ಲೇ ನೀಡುತ್ತೇನೆ ಎಂದಿದ್ದಾರೆ.

ಇನ್ನು ಸುದೀಪ್, ಪ್ರಕಾಶ್ ಜೋಡಿಯ ಚಿತ್ರವನ್ನು 'ಆಕ್ಸಿಡೆಂಟ್' ಖ್ಯಾತಿಯ ರಘುನಾಥ್ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿ ಚಿತ್ರ ಇದೇ ಆಗಸ್ಟ್ 25ಕ್ಕೆ ಸೆಟ್ಟೇರುತ್ತಿದೆ. (ಏಜೆನ್ಸೀಸ್)

English summary
Kannada film 'Milana' fame Prakash himself has confirmed the news that he will be directing Sudeep. For the first time, he is teaming up with Kiccha. The film is likely to hit the floors in 2014. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada