Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಿಸೆಸ್ ಸೌತ್ ಇಂಡಿಯಾ: ರ್ಯಾಂಪ್ ಮೇಲೆ ಸೌಂದರ್ಯದ ಮೆರವಣಿಗೆ
ನಗರದಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್ಫುಲ್ ಸ್ಪರ್ಧೆ ಆಯೋಜಿಸಲಾಗಿತ್ತು. ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ದಕ್ಷಿಣ ಭಾರತದ 70 ರೂಪದರ್ಶಿಯರು ರ‍್ಯಾಂಪ್ ಮೇಲೆ ಹೆಜ್ಜೆಹಾಕಿದರು.
ಸ್ಪರ್ಧೆಯಲ್ಲಿ ಪ್ರಿಯಾಂಕ, ಸುವನ, ಸಿಂಧು, ಜನನಿ, ಬಬಿತಾ ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದರು. ಕರ್ವಿ ವಿಭಾಗದಲ್ಲಿ ಸುಚಿತ್ರ ವೇಣುಗೋಪಾಲ್, ವರ್ಷ, ಶ್ವೇತ ಪ್ರಶಸ್ತಿ ಗೆದ್ದರು. ಮಿಸ್ಟರ್ ವಿಭಾಗದಲ್ಲಿ ಸಂಜಯ್, ಅಭಿಷೇಕ್ ನಾಯರ್, ನವೀನ್ ಗೆದ್ದರೆ, ಮಿಸ್ ವಿಭಾಗದಲ್ಲಿ ಬನಷ್ರಿ ಸಕ್ರಿ, ಸನರ, ಪ್ರತಿಭಾ ಗೆದ್ದರು.
ಹೋಟೆಲ್ ಲಲಿತ್ ಅಶೋಕ್ ನಲ್ಲಿ ನಡೆದ ಮಿಸ್ ಹಾಗೂ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್ ಫ್ಯಾಷನ್ ಶೋ ಶನಿವಾರದ ಸಂಜೆಗೆ ಸಾಕ್ಷಿಯಾಯಿತು. ಇಂಟರ್ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಆಫ್ ವಾಷಿಂಗ್ಟನ್ ಸಹಯೋಗದಲ್ಲಿ ನಂದಿನಿ ನಾಗರಾಜ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕರ್ವಿ ವಿಭಾಗವನ್ನು ಆಯೋಜಿಸಲಾಗಿತ್ತು
ಸೌಂದರ್ಯ ಸ್ಪರ್ಧೆ ಎಂದರೆ ತೆಳ್ಳಗೆ, ಬೆಳ್ಳಗೆ ಇರುವವರಿಗೆ ಮಾತ್ರ ಎನ್ನುವ ಮೂಡನಂಬಿಕೆಯನ್ನು ಕೈಬಿಡುವ ಉದ್ದೇಶದಿಂದ ಮಿಸೆಸ್ ಕರ್ವಿ ವಿಭಾಗವನ್ನು ಕೂಡ ಆಯೋಜಿಸಲಾಗಿತ್ತು. ಮಿಸೆಸ್ ಸೌತ್ ಇಂಡಿಯಾ ವಿಭಾಗದಲ್ಲಿ 30, ಮಿಸ್ ವಿಭಾಗದಲ್ಲಿ 20, ಮಿಸ್ಟರ್ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದರು. ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು ರಾಂಪ್ ವಾಕ್ ಮಾಡಿದರು. ಇಲ್ಲಿ ಗೆದ್ದ ಚಿಣ್ಣರು ಅಮೆರಿಕ ದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಲಿದ್ದಾರೆ.

ಸಾಂಪ್ರದಾಯಿಕ ಸುತ್ತಿಗೆ ರೇಷ್ಮಾ ಸಿಂಗ್ ಡಿಸೈನರ್
ಸಾಂಪ್ರದಾಯಿಕ ಸುತ್ತಿಗೆ ರೇಷ್ಮಾ ಸಿಂಗ್ ಡಿಸೈನರ್ ಆಗಿ ಕೆಲಸ ಮಾಡಿದ್ದರೆ, ಚಂದನ್ ಗೌಡ ಹಾಗೂ ಬಕ್ಕಾಶಾಲಿ ಗೌನ್ ರೌಂಡ್ ನ ಡಿಸೈನರ್ ಆಗಿದ್ದರು. ಸ್ವರ್ಣಮಂಗಲ್ ಜ್ಯುವೆಲರಿ ಅವರ ಸಹಯೋಗ ಇತ್ತು. ಮಿಸೆಸ್ ವಿಭಾಗದಲ್ಲಿ ಐವರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಮಿಸ್‌ನಲ್ಲಿ ಮೂವರು ಹಾಗೂ ಮಿಸ್ಟರ್ ವಿಭಾಗದಲ್ಲೂ ಮೂವರು ಗೆಲುವಿನ ಸಂಭ್ರಮ ಆಚರಿಸಿದರು.

ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್
ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, "ಫ್ಯಾಷನ್ ಶೋ ಎಂದರೆ ಕೇವಲ ಸೌಂದರ್ಯ ಸ್ಪರ್ದೆ ಅಲ್ಲ. ಇಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶ ಇದೆ. ಮದುವೆಯಾದ ನಂತರ ಕೂಡ ತಮಗೆ ರ‍್ಯಾಂಪ್ ಮೇಲೆ ಹೆಜ್ಜೆಹಾಕುವ ಅವಕಾಶ ಸಿಕ್ಕಿದ್ದಕ್ಕೆ ಮಿಸೆಸ್ ವಿಭಾಗದ ಸ್ಪರ್ಧಿಗಳು ಸಂಭ್ರಮಿಸುತ್ತಾರೆ. ನಾನು ಅವರಿಗೆಲ್ಲಾ ಅಭಿನಂದನೆ ಹೇಳಲೇಬೇಕು' ಎಂದರು. ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್‌ನಲ್ಲಿ ಗೆದ್ದ ಸ್ಪರ್ಧಿಗಳು ಗೋವಾ ದಾಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಗೆದ್ದವರು ಸಿಂಗಪೂರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು
ಗೌನ್ ಹಾಗೂ ಸೀರೆಯಲ್ಲಿ ಮಿಂಚಿದ ಮಿಸೆಸ್ ಹಾಗೂ ಮಿಸ್ ವಿಭಾಗದ ರೂಪದರ್ಶಿಯರಿಗೆ ಕಡಿಮೆ ಇಲ್ಲದಂತೆ ಮಿಸ್ಟರ್ ವಿಭಾಗದವರೂ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು ರಾಂಪ್ ಮೇಲೆ ಹೆಜ್ಜೆ ಹಾಕಿದ್ದು ಈ ಬಾರಿಯ ಫ್ಯಾಷನ್ ಷೋ ನ ವಿಶೇಷತೆ.