For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದಲ್ಲಿ ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಭಾರತೀಯ ಚಿತ್ರ ಯಾವುದು?

  |
  ಪಾಕಿಸ್ತಾನದಲ್ಲಿ ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಭಾರತೀಯ ಚಿತ್ರಗಳು..! | FILMIBEAT KANNADA

  ಭಾರತದಲ್ಲಿ ಪಾಕಿಸ್ತಾನ ಚಿತ್ರಗಳಿಗೆ ಬೇಡಿಕೆ ಅಷ್ಟಾಗಿ ಇಲ್ಲ. ಆದ್ರೆ, ಭಾರತೀಯ ಚಿತ್ರಗಳಿಗೆ ಪಾಕ್ ದೇಶದಲ್ಲಿ ತುಂಬಾ ಬೇಡಿಕೆ ಇದೆ. ಅದರಲ್ಲೂ ಬಾಲಿವುಡ್ ಸಿನಿಮಾಗಳು ಬಿಡುಗಡೆಯಾದ್ರೆ ಪಾಕ್ ಪ್ರಜೆಗಳು ಮುಗಿಬಿದ್ದು ನೋಡ್ತಾರೆ.

  ಈ ವರ್ಷ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರ ಯಾವುದು ಇರಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 2018ನೇ ವರ್ಷ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಯಾವ ಚಿತ್ರದ ಬಗ್ಗೆ ತಿಳಿಯಲು ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದ್ದಾರೆ ಎಂಬುದು ಬಹಿರಂಗವಾಗಿದೆ.

  ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ 'ಸ್ಟಾರ್' ಯಾರು ಗೊತ್ತಾ?

  ನಿರೀಕ್ಷೆಯಂತೆ ಬಾಲಿವುಡ್ ಸಿನಿಮಾಗಳೇ ಇಲ್ಲಿ ಹೆಚ್ಚು ಸ್ಥಾನ ಪಡೆದುಕೊಂಡಿದೆ. ಹಾಗಿದ್ರೆ, ಪಾಕಿಸ್ತಾನದಲ್ಲಿ ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಭಾರತೀಯ ಚಿತ್ರ ಯಾವುದು ಎಂದು ತಿಳಿಯೋಣ ಬನ್ನಿ. ಮುಂದೆ ಓದಿ....

  ಸಲ್ಮಾನ್ ಖಾನ್ 'ರೇಸ್-3'

  ಸಲ್ಮಾನ್ ಖಾನ್ 'ರೇಸ್-3'

  ಸಲ್ಮಾನ್ ಖಾನ್, ಅನಿಲ್ ಕಪೂರ್, ಜಾಕ್ವಲೀನ್ ಫರ್ನಾಂಡೀಸ್, ಬಾಬಿ ಡಿಯೋಲ್, ಡೈಸಿ ಶಾ ಅಭಿನಯದ 'ರೇಸ್-3' ಸಿನಿಮಾ, ಪಾಕಿಸ್ತಾನದಲ್ಲಿ ಹೆಚ್ಚು ಸರ್ಚ್ ಆಗಿದೆ. ಜೂನ್ 15, 2018ರಂದು ಈ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು.

  'ಸಂಜು' ಮೆಚ್ಚಿದ ಪಾಕಿಗಳು

  'ಸಂಜು' ಮೆಚ್ಚಿದ ಪಾಕಿಗಳು

  ಸಂಜಯ್ ದತ್ ಬಯೋಪಿಕ್ ಸಿನಿಮಾ ಸಂಜು ಚಿತ್ರದ ಬಗ್ಗೆಯೂ ಪಾಕ್ ಪ್ರಜೆಗಳು ಹೆಚ್ಚು ಹುಡುಕಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅವರ ವೈಯಕ್ತಿಕ ಜೀವನದ ಹಲವು ವಿಷ್ಯಗಳನ್ನ ತೋರಿಸಲಾಗಿತ್ತು. ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಣ್ಬೀರ್ ಕಪೂರ್, ಸಂಜಯ್ ದತ್ ಪಾತ್ರ ನಿರ್ವಹಿಸಿದ್ದರು.

  ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ಚಿತ್ರಗಳು

  ಟೈಗರ್ ಜಿಂದಾ ಹೈ

  ಟೈಗರ್ ಜಿಂದಾ ಹೈ

  2012ರಲ್ಲಿ ಬಿಡುಗಡೆಯಾಗಿದ್ದ ಏಕ್ತಾಟೈಗರ್ ಸಿನಿಮಾದ ಮುಂದುವರೆದ ಭಾಗ ಟೈಗರ್ ಜಿಂದಾ ಹೈ ಸಿನಿಮಾ 2017ರ ಡಿಸೆಂಬರ್ ನಲ್ಲಿ ರಿಲೀಸ್ ಆಗಿತ್ತು. ಹಾಗಿದ್ದರೂ ಈ ವರ್ಷ ಈ ಸಿನಿಮಾದ ಬಗ್ಗೆ ಪಾಕಿಸ್ತಾನದಲ್ಲಿ ಹೆಚ್ಚು ಜನ ಹುಡುಕಿದ್ದಾರೆ. ಸಲ್ಮಾನ್, ಕತ್ರಿನಾ ಈ ಚಿತ್ರದಲ್ಲಿ ನಟಿಸಿದ್ದರು.

  ಭಾಗಿ 2

  ಭಾಗಿ 2

  ಟೈಗರ್ ಶ್ರಾಫ್, ದಿಶಾ ಪಟಾನಿ ಅಭಿನಯದ 'ಭಾಗಿ-2' ಸಿನಿಮಾ ಈ ವರ್ಷ ಹೆಚ್ಚು ಸದ್ದು ಮಾಡಿತ್ತು. ಅದರಂತೆ ಪಾಕಿಸ್ತಾನದಲ್ಲೂ ಸಿನಿಮಾ ಮೋಡಿ ಮಾಡಿದೆ.

  ಥಗ್ಸ್ ಆಫ್ ಹಿಂದೂಸ್ತಾನ್

  ಥಗ್ಸ್ ಆಫ್ ಹಿಂದೂಸ್ತಾನ್

  ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ಫಾತೀಮಾ ಸನಾ ಅಭಿನಯಿಸಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದ್ರೆ, ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ ಈ ಚಿತ್ರಕ್ಕೆ ಪ್ರೇಕ್ಷಕರು ಕೂಡ ನೋ ಎಂದರು. ಈ ಚಿತ್ರದ ಬಗ್ಗೆಯೂ ಪಾಕ್ ಅಭಿಮಾನಿಗಳು ಕುತೂಹಲವಿಟ್ಟುಕೊಂಡಿದ್ದರು.

  2018ರ ಅತ್ಯುತ್ತಮ ಕನ್ನಡ ಸಿನಿಮಾ ಯಾವುದು?

  ಹೇಟ್ ಸ್ಟೋರಿ 4

  ಹೇಟ್ ಸ್ಟೋರಿ 4

  ಊವರ್ಶಿ ರೌಟೇಲಾ, ಕರಣ್ ವಾಹಿ, ವಿವಾನ್ ಅಭಿನಯಿಸಿದ್ದ ಹೇಟ್ ಸ್ಟೋರಿ 4 ಸಿನಿಮಾ ಬಗ್ಗೆ ಪಾಕಿಸ್ತಾನದಲ್ಲಿ ಜನರು ಸರ್ಚ್ ಮಾಡಿದ್ದಾರೆ. ವಿಶಾಲ್ ಪಾಂಡ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

  ಈ ವರ್ಷ ನಿರ್ದೇಶಕರ ಮ್ಯಾಜಿಕ್ ಹೇಗಿತ್ತು, ಯಾರು ಬೆಸ್ಟ್ ?

  ಪದ್ಮಾವತ್ ಸಿನಿಮಾ

  ಪದ್ಮಾವತ್ ಸಿನಿಮಾ

  ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಅಭಿನಯಿಸಿದ್ದ ಐತಿಹಾಸಿಕ ಸಿನಿಮಾ ಪದ್ಮಾವತ್ ಚಿತ್ರದ ಬಗ್ಗೆಯೂ ಪಾಕ್ ಜನರು ಹುಡುಕಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ ಈ ಸಿನಿಮಾ ವಿವಾದದಿಂದಲೇ ಹೆಚ್ಚು ಸುದ್ದಿ ಮಾಡಿತ್ತು.

  English summary
  The most searched indian movies on Google in Pakistan at 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X