For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ಚಿತ್ರಗಳು

  |

  ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಹಾಲಿವುಡ್ ಚಿತ್ರಗಳನ್ನ ಸೇರಿದಂತೆ ಈ ವರ್ಷ ಅನೇಕ ಸಿನಿಮಾಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ. ರಿಲೀಸ್ ಗೂ ಮುಂಚೆ ಅತಿಯಾದ ನಿರೀಕ್ಷೆ ಹುಟ್ಟುಹಾಕಿ ನಂತರ ಸದ್ದು ಸುದ್ದಿಯಿಲ್ಲದೇ ಥಿಯೇಟರ್ ನಿಂದ ಎತ್ತಂಗಡಿಯಾಗಿರುವ ಸಿನಿಮಾಗಳು ಇದೆ.

  ಸಿನಿಮಾ ಚೆನ್ನಾಗಿಲ್ಲ ಎಂಬ ರಿವ್ಯೂ ಪಡೆದುಕೊಂಡರು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಉದಾಹರಣೆಗಳಿವೆ. ನಾಯಕ, ನಾಯಕಿ, ಸಾಂಗ್, ಟೀಸರ್, ಟ್ರೈಲರ್, ವಿವಾದ ಅದೂ ಇದೂ ಅಂತ ಕೆಲವು ಚಿತ್ರಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದವು.

  ಹಾಗಾದ್ರೆ, ಈ ವರ್ಷ ಭಾರತದಲ್ಲಿ ಹೆಚ್ಚು ಜನರು ಯಾವ ಚಿತ್ರದ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಹುಡುಕಿರಬಹುದು. 2018ರಲ್ಲಿ ಗೂಗಲ್ ಸರ್ಚ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಟಾಪ್ 10 ಚಿತ್ರಗಳ ಪಟ್ಟಿ ಇಲ್ಲಿದೆ. ಯಾವುದು ಹೆಚ್ಚು ಯಾವುದು ಕಮ್ಮಿ ಎಂದು ತಿಳಿಯಲು ಮುಂದೆ ಓದಿ....

  ಡೆಡ್ ಫೂಲ್ 2

  ಡೆಡ್ ಫೂಲ್ 2

  ಅಮೇರಿಕನ್ ಸೂಪರ್ ಹೀರೋ ಸಿನಿಮಾ 'ಡೆಡ್ ಫೂಲ್ 2' ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಸದ್ದು ಮಾಡಿದ ಚಿತ್ರಗಳ ಪೈಕಿ ಹತ್ತನೇ ಸ್ಥಾನದಲ್ಲಿದೆ. ರಿಯಾನ್ ರೆನಾಲ್ಡ್ಸ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಈ ಸಿನಿಮಾ ಮೇ ತಿಂಗಳಲ್ಲಿ ತೆರೆಕಂಡಿತ್ತು.

  ಶ್ರೀದೇವಿ ಪುತ್ರಿಯ ಸಿನಿಮಾ

  ಶ್ರೀದೇವಿ ಪುತ್ರಿಯ ಸಿನಿಮಾ

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಢಕ್' ಇದೇ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಶ್ರೀದೇವಿ ನಿಧನದ ಬಳಿಕ ರಿಲೀಸ್ ಆದ ಈ ಚಿತ್ರದ ಬಗ್ಗೆ ತಿಳಿಯಲು ಜನರು ಗೂಗಲ್ ಬಳಸಿದ್ದಾರೆ. ಟಾಪ್ ಪಟ್ಟಿಯಲ್ಲಿ ದಢಕ್ ಒಂಭತ್ತನೇ ಸ್ಥಾನದಲ್ಲಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಶ್ರೀದೇವಿ ನಿಧನವಾಗಿದ್ದರು.

  ಬ್ಲ್ಯಾಕ್ ಪ್ಯಾಂಥರ್ಸ್

  ಬ್ಲ್ಯಾಕ್ ಪ್ಯಾಂಥರ್ಸ್

  ಅಮೇರಿಕನ್ ಮತ್ತೊಂದು ಸೂಪರ್ ಹೀರೋ ಸಿನಿಮಾ 'ಬ್ಲ್ಯಾಕ್ ಪ್ಯಾಂಥರ್ಸ್'. ಜನವರಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಬಗ್ಗೆ ತಿಳಿಯಲು ಗೂಗಲ್ ನಲ್ಲಿ ಹೆಚ್ಚು ಜನ ಹುಡುಕಿದ್ದಾರೆ. ಟಾಪ್ ಪಟ್ಟಿಯಲ್ಲಿ ಈ ಸಿನಿಮಾ ಏಂಟನೇ ಸ್ಥಾನದಲ್ಲಿದೆ.

  ದೀಪಿಕಾ 'ಪದ್ಮಾವತ್'

  ದೀಪಿಕಾ 'ಪದ್ಮಾವತ್'

  ಕಳೆದ ವರ್ಷದಿಂದ ವಿವಾದಿಂದಲೇ ಸುದ್ದಿಯಾಗಿದ್ದ ಪದ್ಮಾವತ್ ಸಿನಿಮಾ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಅಭಿನಯದ ಈ ಚಿತ್ರವನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದರು. ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಚಿತ್ರಗಳಲ್ಲಿ ಏಳನೇ ಸ್ಥಾನದಲ್ಲಿ 'ಪದ್ಮಾವತ್' ಇದೆ.

  ಸಂಜಯ್ ದತ್ ಬಯೋಪಿಕ್

  ಸಂಜಯ್ ದತ್ ಬಯೋಪಿಕ್

  ಬಾಲಿವುಡ್ ನಟ ಸಂಜಯ್ ದತ್ ಬಯೋಪಿಕ್ 'ಸಂಜು' ಸಿನಿಮಾ ಈ ವರ್ಷದ ದೊಡ್ಡ ಸಂಚಲನ. ರಣ್ವೀರ್ ಕಪೂರ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 500 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದರು. ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಚಿತ್ರಗಳಲ್ಲಿ ಆರನೇ ಸ್ಥಾನದಲ್ಲಿ 'ಸಂಜು' ಇದೆ.

  ಸಲ್ಮಾನ್ ಖಾನ್ ಸಿನಿಮಾ

  ಸಲ್ಮಾನ್ ಖಾನ್ ಸಿನಿಮಾ

  ಕಳೆದ ವರ್ಷ ಅಂತ್ಯದಲ್ಲಿ ಬಿಡುಗಡೆಯಾಗಿದ್ದ 'ಟೈಗರ್ ಜಿಂದಾ ಹೈ' ಸಿನಿಮಾ ಈ ವರ್ಷವೂ ಹೆಚ್ಚು ಸದ್ದು ಮಾಡಿದೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯಿಸಿದ್ದ ಈ ಚಿತ್ರ ಡಿಸೆಂಬರ್ 22, 2017ರಲ್ಲಿ ರಿಲೀಸ್ ಆಗಿತ್ತು. ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಚಿತ್ರಗಳಲ್ಲಿ ಐದನೇ ಸ್ಥಾನದಲ್ಲಿ 'ಟೈಗರ್ ಜಿಂದಾ ಹೈ' ಇದೆ.

  ಅವೆಂಜರ್ಸ್:ಇನ್ಫಿನಿಟಿ ವಾರ್

  ಅವೆಂಜರ್ಸ್:ಇನ್ಫಿನಿಟಿ ವಾರ್

  ಏಪ್ರಿಲ್ ತಿಂಗಳಲ್ಲಿ ತೆರೆಕಂಡ 'ಅವೆಂಜರ್ಸ್ ಇನ್ಫಿನಿಟಿ ವಾರ್' ಸಿನಿಮಾ ಭಾರತದಲ್ಲಿ ಹೆಚ್ಚು ಗಳಿಕೆ ಕಂಡಿತ್ತು. ಇದು ಕೂಡ ಅಮೇರಿಕನ್ ಸೂಪರ್ ಹೀರೋ ಸಿನಿಮವಾಗಿದ್ದು, ಬಹುದೊಡ್ಡ ತಾರಬಳಗವನ್ನ ಹೊಂದಿತ್ತು. ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಚಿತ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿ 'ಅವೆಂಜರ್ಸ್:ಇನ್ಫಿನಿಟಿ ವಾರ್' ಇದೆ.

  ಸಲ್ಮಾನ್ 'ರೇಸ್'

  ಸಲ್ಮಾನ್ 'ರೇಸ್'

  ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಸಿನಿಮಾ ಈ ವರ್ಷ ಭಾರಿ ಸದ್ದು ಮಾಡಿತ್ತು. ಆಕ್ಷನ್ ಎಂಟರ್ ಟೈನಿಂಗ್ ಆಗಿದ್ದ ಈ ಚಿತ್ರದಲ್ಲಿ ಅನಿಲ್ ಕಪೂರ್, ಸಲ್ಮಾನ್ ಖಾನ್, ಬಾಬಿ ಡಿಯೋಲ್, ಜಾಕ್ವಲೀನ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್ ನಲ್ಲು ಒಳ್ಳೆಯ ಬಿಸಿನೆಸ್ ಮಾಡಿತ್ತು. ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿ 'ರೇಸ್-3' ಇದೆ.

  ಭಾಗಿ-2

  ಭಾಗಿ-2

  ಸ್ಟಾರ್, ಸೂಪರ್ ಸ್ಟಾರ್ ಗಳನ್ನ ಹಿಂದಿಕ್ಕಿರುವ ಟೈಗರ್ ಶ್ರಾಫ್ ಸಿನಿಮಾ 'ಭಾಗಿ-2' ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಸದ್ದು ಮಾಡಿದೆ. ಟಾಪ್ 10 ಚಿತ್ರಗಳ ಪೈಕಿ 2ನೇ ಸ್ಥಾನದಲ್ಲಿದೆ. ದಿಶಾ ಪಟಾನಿ ನಾಯಕಿಯಾಗಿದ್ದರು.

  ರಜನಿಕಾಂತ್ '2.0'

  ರಜನಿಕಾಂತ್ '2.0'

  ನಿರೀಕ್ಷೆಯಂತೆ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯಿಸಿದ್ದ '2.0' ಸಿನಿಮಾ ಈ ವರ್ಷ ಗೂಗಲ್ ಕಿಂಗ್ ಆಗಿ ಮರೆದಿದೆ. ಈ ವರ್ಷ '2.0' ಚಿತ್ರದ ಅಪ್ಡೇಟ್ ತಿಳಿಯಲು ಹೆಚ್ಚು ಜನ ಹುಡುಕಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ಚಿತ್ರಗಳ ಪೈಕಿ ರಜನಿಕಾಂತ್ ಸಿನಿಮಾ ಮೊದಲ ಸ್ಥಾನದಲ್ಲಿದೆ.

  English summary
  Best of 2018: These were the most searched movies in 2018, according to Google.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X