»   »  ತಮಿಳಿನ 'ಅನ್ನಿಯನ್' ಕನ್ನಡದಿಂದ ಕದ್ದ ಕತೆಯೇ?

ತಮಿಳಿನ 'ಅನ್ನಿಯನ್' ಕನ್ನಡದಿಂದ ಕದ್ದ ಕತೆಯೇ?

Subscribe to Filmibeat Kannada
Film director Rajendra Kumar Arya
ದಕ್ಷಿಣ ಭಾರತದಲ್ಲಿ ಭರ್ಜರಿ ಹಿಟ್ ದಾಖಲಿಸಿದ ತಮಿಳಿನ 'ಅನ್ನಿಯನ್' ಚಿತ್ರಕ್ಕೆ ಕತೆ ಒದಗಿಸಿದ್ದು ಒಬ್ಬ ಕನ್ನಡಗ ಎಂಬ ಸತ್ಯ ತಡವಾಗಿ ಬೆಳಕಿಗೆ ಬಂದಿದೆ! ಶಂಕರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಕನ್ನಡದ ನಿರ್ದೇಶಕ ರಾಜೇಂದ್ರ ಕುಮಾರ್ ಆರ್ಯ ಕತೆ ಬರೆದದ್ದು ನಿಜವೇ?

ಸ್ವತಃ ರಾಜೇಂದ್ರ ಕುಮಾರ್ ಆರ್ಯ ಅವರೇ ಈ ಬಗ್ಗೆ ವಿವರ ನೀಡಿದ್ದಾರೆ. ಇವರ ಪ್ರಕಾರ 'ಅನ್ನಿಯನ್' ಇವರದ್ದೇ ಕತೆ ಆಧರಿಸಿದ ಚಿತ್ರವಂತೆ. ಹೇಗೆ ಎಂದು ಕೇಳಿದರೆ, ತಮ್ಮ ಕತೆಗೆ ಮೊದಲು 'ಕಲ್ಕಿ'ಎಂದು ಹೆಸರಿಟ್ಟಿದ್ದೆ. ನಟಿ ದೇವಯಾನಿಯ ಗಂಡ ರಾಜಕುಮಾರನ್ ಈ ಚಿತ್ರವನ್ನು ನಿರ್ದೇಶಿಸಬೇಕಾಗಿತ್ತು. ಆದರೆ ವಿಕ್ರಮ್ ನಾಲ್ಕು ಕೋಟಿ ರು.ಗಳ ಸಂಭಾವನೆ ಕೇಳಿದ ಕಾರಣ ತಾವು ಅನಿವಾರ್ಯವಾಗಿ ಈ ಚಿತ್ರವನ್ನು ಕೈಬಿಡಬೇಕಾಯಿತು ಎನ್ನುತ್ತಾರೆ ಆರ್ಯ!

ಆನಂತರ ಕಲ್ಕಿ ಚಿತ್ರವೇ 'ಅನ್ನಿಯನ್' ಆಗಿ ತೆರೆಕಂಡಿತು. ನನ್ನ ಕತೆಯನ್ನು ವಿಕ್ರಮ್ ಕದ್ದರೋ ಅಥವಾ ಶಂಕರ್ ಕದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅನ್ನಿಯನ್ ಯಶಸ್ಸನ್ನು ನಿಸ್ಸಹಾಯಕನಾಗಿ ನೋಡಬೇಕಾಯಿತು. ಅದು ಶೇಕಡಾ ನೂರರಷ್ಟು ನನ್ನದೇ ಕತೆ ಎಂಬುದಂತೂ ನಿಜ. ಈ ವಿಚಾರವನ್ನು ಹೇಳಿಕೊಂಡರೆ ಎಲ್ಲಿ ಗಾಂಧಿನಗರ ಎದ್ದು ಬಿದ್ದು ನಗುತ್ತದೋ ನಂತರ 'ಹುಚ್ಚ' ಎಂಬ ಹಣೆಪಟ್ಟಿ ಅಂಟಿಸಿಬಿಟ್ಟರೆ ಕಷ್ಟ ನೋಡಿ ಎನ್ನುತ್ತಾರೆ ಅವರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ದಿನೇಶ್, ಸುದೀಪ್ ಸ್ನೇಹದ ಕಡಲಲ್ಲಿ ಹಾಲಾಹಲ
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?
ಬಿಸಿಲ ಹೊತ್ತು ಪಾರ್ವತಮ್ಮ ರಾಂಗಾದರು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada