For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತರ ಸವಾಲ್: ನಿಖಿಲ್ ಮತ್ತು ಅಭಿ ಇಬ್ಬರಲ್ಲಿ ಮಂಡ್ಯ ಉತ್ತರಾಧಿಕಾರಿ ಯಾರು?

  |

  ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಹೆಚ್.ಡಿ ಕುಮಾರಸ್ವಾಮಿ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ಪಕ್ಷಗಳನ್ನ ಮೀರಿದ ಬಾಂಧವ್ಯ ಇವರಿಬ್ಬರಲ್ಲಿತ್ತು. ಅದೇ ರೀತಿ ಅಂಬರೀಶ್ ಪುತ್ರ ಅಭಿಷೇಕ್ ಮತ್ತು ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಇಬ್ಬರು ಒಳ್ಳೆಯ ಸ್ನೇಹಿತರು.

  ಆಲ್ ಮೋಸ್ಟ್ ಇವರಿಬ್ಬರು ಒಂದೇ ಬ್ಯಾಚ್. ಪಾರ್ಟಿ, ಫ್ರೆಂಡ್ಸ್, ಟೂರ್ ಇದೆಲ್ಲದರಲ್ಲೂ ಇಬ್ಬರು ಒಟ್ಟಿಗೆ ಇರ್ತಾರೆ. ಅಂಬಿ ನಿಧನದ ವೇಳೆಯೂ ಅಭಿ ಪಕ್ಕದಲ್ಲೇ ಇದ್ದು ಸಾಂತ್ವನ ಹೇಳಿದ ನಿಖಿಲ್ ಕುಮಾರ್ ಅವರನ್ನ ಗಮನಿಸಿದ್ದೇವೆ.

  ಅಂಬಿ-ಕುಮಾರಣ್ಣನ ನಂತರ ನಿಖಿಲ್-ಅಭಿಷೇಕ್ ಜುಗಲ್ ಬಂದಿ

  ಇದೀಗ, ಈ ಸ್ನೇಹಿತರ ಮಧ್ಯೆ ಸವಾಲ್ ಎದುರಾಗುವ ಸೂಚನೆ ಸಿಕ್ಕಿದೆ. ಸ್ನೇಹಿತರ ಸವಾಲ್ ಎಂದಾಕ್ಷಣ ಇದು ಸಿನಿಮಾ ಕಥೆನಾ ಅಂತ ಅಂದುಕೊಳ್ಳಬೇಡಿ. ಲೋಕಸಭೆ ಚುನಾವಣೆಯಲ್ಲಿ ಇಬ್ಬರು ಬೆಂಬಲಿಗರ ಮಧ್ಯೆ ಫೈಟ್ ಎದುರಾಗಿದೆ. ಯಾವ ವಿಷ್ಯಕ್ಕೆ ಮುಂದೆ ಓದಿ.....

  ಮಂಡ್ಯಕ್ಕೆ ನಿಖಿಲ್ ಕುಮಾರ್ ಬೇಡ.!

  ಮಂಡ್ಯಕ್ಕೆ ನಿಖಿಲ್ ಕುಮಾರ್ ಬೇಡ.!

  ಮಂಡ್ಯ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಗೆ ಟಿಕೆಟ್ ನೀಡಲಿದ್ದಾರೆ ಎಂಬ ಮಾತಿದೆ. ಜೆಡಿಎಸ್ ಬೆಂಬಲಿಗರು ಕೂಡ ಈ ಒತ್ತಾಯವನ್ನ ಮಾಡ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದು, ನಿಖಿಲ್ ಕುಮಾರ್ ಗೆ ಟಿಕೆಟ್ ಬೇಡ, ಅವರ ಬದಲು ಅಂಬರೀಶ್ ಮಗನಿಗೆ ಟಿಕೆಟ್ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ.

  ಅಂಬಿ ಪುತ್ರನಿಗೆ ಮಂಡ್ಯ ಟಿಕೆಟ್ ಕೊಡಿ

  ಅಂಬಿ ಪುತ್ರನಿಗೆ ಮಂಡ್ಯ ಟಿಕೆಟ್ ಕೊಡಿ

  ಈ ಬಗ್ಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅರವಿಂದ ಕುಮಾರ್ ಮಾತನಾಡಿ, ನಿಖಿಲ್ ಸ್ಪರ್ಧೆಗೆ ನಮ್ಮ ವಿರೋಧವಿದೆ. ಮಂಡ್ಯದಿಂದ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೆ ಟಿಕೆಟ್ ನೀಡಲಿ. ಅವರಿಗೆ ಜೆಡಿಎಸ್ ಸಹ ಬೆಂಬಲ ನೀಡಲಿ ಎಂದಿದ್ದಾರೆ.

  'ಸೀತಾ ರಾಮ ಕಲ್ಯಾಣ' ಸೆಟ್ ನಲ್ಲಿ ಜೂನಿಯರ್ ರೆಬೆಲ್ ಸ್ಟಾರ್

  ಸುಮಲತಾಗೆ ಟಿಕೆಟ್ ಸಾಧ್ಯತೆ.!

  ಸುಮಲತಾಗೆ ಟಿಕೆಟ್ ಸಾಧ್ಯತೆ.!

  ಅಂಬರೀಶ್‌ ಇದ್ದಾಗ ಅಭಿಷೇಕ್ ರಾಜಕೀಯ ಜೀವನದ ಬಗ್ಗೆ ಏನೂ ನಿರ್ಧರಿಸಲಿಲ್ಲ. ಈಗ ಅಂಬಿ ಅಗಲಿದ್ದಾರೆ. ಅವರ ಸ್ಥಾನಕ್ಕೆ ಅವರ ಮಗನನ್ನು ಕರೆದುತರಬೇಕು ಎಂಬುದು ಮಂಡ್ಯ ಬೆಂಬಲಿಗರ ಆಶಯ. ಒಂದು ವೇಳೆ ಅಭಿಷೇಕ್ ಸ್ಪರ್ಧೆ ಮಾಡದಿದ್ದರೇ, ಸುಮಲತಾ ಅವರಿಗೆ ಟಿಕೆಟ್ ನೀಡಿ ಎಂಬ ಮಾತುಗಳು ಮಂಡ್ಯ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗ್ತಿದೆ.

  ನಿಖಿಲ್ ಸ್ಪರ್ಧಿಸಬಹುದು

  ನಿಖಿಲ್ ಸ್ಪರ್ಧಿಸಬಹುದು

  ಅಭಿಷೇಕ್ ಸ್ಪರ್ಧೆ ಮಾಡುವ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆದ್ರೆ, ನಿಖಿಲ್ ಕುಮಾರ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹಲವು ಭಾರಿ ಮಾತನಾಡಿದ್ದಾರೆ. ವರಿಷ್ಠರು ನಿರ್ಧರಿಸಿದ್ರೇ ನೋಡೋಣ ಎಂದು ಹೇಳುತ್ತಿದ್ದರು. ಒಂದು ವೇಳೆ ಮಂಡ್ಯ ಕ್ಷೇತ್ರ ಕೈತಪ್ಪಿದರೇ ಚಿಕ್ಕಬಳ್ಳಾಪುರದಿಂದ ನಿಖಿಲ್ ಕಣಕ್ಕೆ ಇಳಿಯಬಹುದು ಎನ್ನಲಾಗುತ್ತಿದೆ.

  ಅಮರ್ ಮತ್ತು ಸೀತಾರಾಮ ಕಲ್ಯಾಣ

  ಅಮರ್ ಮತ್ತು ಸೀತಾರಾಮ ಕಲ್ಯಾಣ

  ಸದ್ಯ ಅಂಬರೀಶ್ ಪುತ್ರ ಅಮರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದಿಲ್ಲ. ಹಾಗಾಗಿ, ಸಿನಿಮಾ ಮುಗಿಸುವ ಕಡೆ ಗಮನ ಕೊಟ್ಟಿರುವ ಅಭಿ ರಾಜಕೀಯದ ಬಗ್ಗೆ ಚಿಂತಿಸಿದ್ದಾರಾ ಗೊತ್ತಿಲ್ಲ. ಮತ್ತೊಂದೆಡೆ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಆ ಬಳಿಕ ಯಾವ ಚಿತ್ರವನ್ನ ಓಕೆ ಮಾಡಿಲ್ಲ. ಬಹುಶಃ ಚುನಾವಣೆಗೆ ಸಿದ್ಧವಾಗುತ್ತಿರಬಹುದು ಎಂಬ ಕುತೂಹಲವಿದೆ.

  English summary
  Mandya Ambareesh fans and Congress leaders demanding that Congress should give MP elections ticket to Ambareesh's son Abhishek not to Kumaraswamy's son Nikhil Kumaraswamy

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X