For Quick Alerts
  ALLOW NOTIFICATIONS  
  For Daily Alerts

  "ದೇವ್ರಾಣೆ ಧನಂಜಯ ನಮ್ಮ ಅಣ್ಣನಂತೆ ಕಾಣ್ತಾರೆ.. ನಾನು 'ಹೆಡ್‌ಬುಷ್' ಆಡ್ತಿದ್ದೆ": ಎಂ ಪಿ ಜಯರಾಜ್ ಸಹೋದರಿ

  |

  ಡಾನ್ ಜಯರಾಜ್ ಜೀವನವನ್ನಾಧರಿಸಿ ನಿರ್ಮಾಣವಾಗಿರುವ 'ಹೆಡ್‌ ಬುಷ್' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಡಾಲಿ ಧನಂಜಯ ಚಿತ್ರದಲ್ಲಿ ಡಾನ್ ಜಯರಾಜ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಒಂದು ದಿನ ಮೊದಲೇ ಸಿನಿಮಾ ಪೇಯ್ಡ್ ಪ್ರೀಮಿಯರ್‌ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಎಂಪಿ ಜಯರಾಜ್ ಸಹೋದರಿ ಸಿನಿಮಾ ನೋಡಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  70-80ರ ದಶಕದ ಬೆಂಗಳೂರು ಭೂಗತ ಲೋಕದ ಕಥೆಯನ್ನು 'ಹೆಡ್‌ ಬುಷ್' ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. 2 ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದ್ದು, ಮೊದಲ ಭಾಗದಲ್ಲಿ ಪಾತ್ರಗಳ ಪರಿಚಯ, ಜಯರಾಜ್ ಭೂಗತಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ ಎನ್ನುವುದನ್ನು ಕಟ್ಟಿಕೊಡಲಾಗಿದೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಧನಂಜಯ ಬಂಡವಾಳ ಹಾಕಿದ್ದಾರೆ.

  Head Bush Twitter Review : ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?Head Bush Twitter Review : ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?

  ಈ ಹಿಂದೆ 'ಹೆಡ್‌ ಬುಷ್' ಚಿತ್ರಕ್ಕೆ ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ವತಃ ಜಯರಾಜ್ ಸಹೋದರಿ ಎಂ.ಪಿ. ಹೇಮಾವತಿ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದರು. ಇದೀಗ ಕಂಪ್ಲೀಟ್ ಸಿನಿಮಾ ನೋಡಿ ಅವರು ಮಾತನಾಡಿದ್ದಾರೆ.

  "ದೇವ್ರಾಣೆ ಧನು ನಮ್ಮ ಅಣ್ಣನಂತೆ ಕಾಣ್ತಾರೆ"

  "ನಾನು ಸಿನಿಮಾಗಳನ್ನು ನೋಡಿ 25 ವರ್ಷ ಆಗಿ ಹೋಗಿತ್ತು. 25 ವರ್ಷಗಳಿಂದ ಯಾವ್ದೆ ಸಿನಿಮಾ ನೋಡಿರ್ಲಿಲ್ಲ. 'ಹೆಡ್‌ ಬುಷ್' ಸಿನಿಮಾ ನೋಡ್ದೆ, ತುಂಬಾ ಖುಷಿ ಆಯ್ತು. ನೈಜ ಕಥೆಗೆ ಸಿನಿಮಾ ಬಹಳ ಹತ್ತಿರವಾಗಿದೆ. ತೆರೆಮೇಲೆ ನಮ್ಮ ಅಣ್ಣನನ್ನೇ ನೋಡಿದಂತಾಯ್ತು. ದೇವ್ರಾಣೆ ಧನಂಜಯನ ನೋಡಿ ನಮ್ಮಣ್ಣನನ್ನೇ ನೋಡಿದಂತೆ ಭಾಸವಾಯಿತು. ಧನಂಜಯ ಮುಖಚರ್ಯೆ, ಲುಕ್ ಎಲ್ಲಾ ನೋಡಿದ್ರೆ, ನಮ್ಮಣ್ಣನನ್ನೇ ನೋಡುತ್ತಿದ್ದೇನೆ ಎನಿಸಿತು".

  ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?

  ನಾನು ಕೂಡ 'ಹೆಡ್‌ ಬುಷ್' ಆಡುತ್ತಿದ್ದೆ

  ನಾನು ಕೂಡ 'ಹೆಡ್‌ ಬುಷ್' ಆಡುತ್ತಿದ್ದೆ

  ಇನ್ನು ಸಿನಿಮಾ ಟೈಟಲ್ ಬಗ್ಗೆ ಮಾತನಾಡುತ್ತಾ ಆ ದಿನಗಳನ್ನು ಎಂ.ಪಿ. ಹೇಮಾವತಿ ನೆನಪಿಸಿಕೊಂಡಿದ್ದಾರೆ. "ನಾನು ಕೂಡ 'ಹೆಡ್‌ ಬುಷ್' ಆಡುತ್ತಿದ್ದೆ. ಅಗ್ನಿ ಶ್ರೀಧರ್ ಅಣ್ಣ ಬೈಯ್ಯುತ್ತಿದ್ದರು. ತಿಗಳರ ಪೇಟೆಯಲ್ಲಿ ನನ್ನ ಜೊತೆ 'ಹೆಡ್‌ ಬುಷ್' ಆಡುತ್ತಿದ್ದವರು ಈಗಲೂ ಇದ್ದಾರೆ. ನಮ್ಮ ಅಣ್ಣನಿಗೆ ಗೊತ್ತಾಗದಂತೆ ಆಡುತ್ತಿದ್ದೆ. ಏಯ್ ಜಯರಾಜ್ ಬಂದು ಬಿಡ್ತಾನೆ ನೋಡಿಕೊಳ್ರೋ ಎಂದು ಹುಡುಗರನ್ನು ನಿಲ್ಲಿಸಿ ಆಡುತ್ತಿದ್ದೆ. ಅಂದು ವಾತಾವರಣ ಆ ರೀತಿ ಇರುತ್ತಿತ್ತು.

  'ಹೆಡ್‌ ಬುಷ್' ಪಾರ್ಟ್‌ -2 ಮಾಡ್ಲೇಬೇಕು

  'ಹೆಡ್‌ ಬುಷ್' ಪಾರ್ಟ್‌ -2 ಮಾಡ್ಲೇಬೇಕು

  "ಖಂಡಿತ 'ಹೆಡ್‌ ಬುಷ್'- 2 ಸಿನಿಮಾ ಮಾಡ್ಲೇಬೇಕು. ಅಗ್ನಿ ಶ್ರೀಧರ್ ಎಲ್ಲವನ್ನು ಅದು ಹೇಗೆ ತಲೆಯಲ್ಲಿ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಅಷ್ಟು ವರ್ಷಗಳ ಹಿಂದಿನದ್ದನ್ನು ಅಷ್ಟುಚೆನ್ನಾಗಿ ನೆನೆಪಿಟ್ಟುಕೊಂಡು ಹೇಳಿದ್ದಾರೆ. ಅದೇ ನಮಗೆ ಖುಷಿ. ನಾನು ಹೇಳುತ್ತಿರುತ್ತೀನಿ. ಅಷ್ಟು ಹಳೆಯದ್ದನ್ನೆಲ್ಲಾ ಹೇಗೆ ತಲೆಯಲ್ಲಿ ಇಟ್ಟುಕೊಂಡಿದ್ದೀರಾ ಎಂದು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ದೇವ್ರಾಣೆ ನಾನು ಅಂದುಕೊಂಡಿರಲಿಲ್ಲ, ಸಿನಿಮಾ ಇಷ್ಟು ಚೆನ್ನಾಗಿ ಇರುತ್ತೆ ಎಂದು. 25 ವರ್ಷ ಆಗಿತ್ತು ಸಿನಿಮಾ ನೋಡಿ. ಸಿನಿಮಾ ಚೆನ್ನಾಗಿದೆ. ಬಹಳ ಖುಷಿ ಆಯ್ತು." ಎಂದು ಎಂ.ಪಿ ಜಯರಾಜ್ ಸಹೋದರಿ ಹೇಳಿದ್ದಾರೆ.

  ಅಜಿತ್ ಜಯರಾಜ್ ಸಿನಿಮಾ ವೀಕ್ಷಣೆ

  ಅಜಿತ್ ಜಯರಾಜ್ ಸಿನಿಮಾ ವೀಕ್ಷಣೆ

  ಕೆಲ ದಿನಗಳ ಹಿಂದೆ ಎಂ ಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ 'ಹೆಡ್‌ ಬುಷ್' ಸಿನಿಮಾ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. 'ಈ ಚಿತ್ರವನ್ನು ಬಿಡುಗಡೆ ಮಾಡಬಾರದು, ಯಾವ ಕಾರಣಕ್ಕೂ ತಮ್ಮ ತಂದೆಯವರ ಜೀವನದ ಬಗ್ಗೆ ಸಿನಿಮಾ ಮಾಡಲು ಅನುಮತಿ ಕೊಡಬಾರದು' ಎಂದು ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದರು. "ಚಿತ್ರದಲ್ಲಿ ನಮ್ಮ ತಂದೆ ಕಥೆಯನ್ನು ಹೇಳುತ್ತಿದ್ದಾರೆ. ಚಿತ್ರದ ಟೀಸರ್‌ನಲ್ಲಿ ನಮ್ಮ ತಂದೆಯವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ಇಷ್ಟುದಿನ ಕಾದು, ಈಗ ಕಾನೂನು ಹೋರಾಟ ಶುರು ಮಾಡಿದ್ದೇವೆ.ಎಂ ಪಿ ಜಯರಾಜ್‌ ಅವರನ್ನು ನೋಡದವರು, ಅವರ ಮುಂದೆ ನಿಲ್ಲದವರು ಈಗ ಅವನು, ಇವನು ಅಂತ ಮಾತನಾಡುತ್ತಿದ್ದಾರೆ. ಇದು ವೈಯಕ್ತಿಕವಾಗಿ ನನಗೆ ತುಂಬಾ ನೋವು ತಂದಿದೆ. ವಿಷಯ ಗೊತ್ತಿಲ್ಲದೆ ನಮ್ಮ ತಂದೆಯ ಜೀವನ ಆಧರಿಸಿದ 'ಹೆಡ್‌ಬುಷ್‌' ಚಿತ್ರಕ್ಕೆ ಅನುಮತಿ ಕೊಡಬಾರದು ಎಂಬುದು ನನ್ನ ಒತ್ತಾಯ' ಎಂದಿದ್ದರು. ಸದ್ಯ ನಗರದ ಅನುಪಮ ಥಿಯೇಟರ್‌ನಲ್ಲಿ ತಮ್ಮ ತಾಯಿ ಜೊತೆ ಅಜಿತ್ ಜಯರಾಜ್ ಸಿನಿಮಾ ವೀಕ್ಷಿಸುತ್ತಿದ್ದಾರೆ.

  English summary
  Mp Jayaraj's sister mp hemavathi Praises Dhananjaya Starrer Head bush. The film is inspired by real-life incidents that happened in the 1970s. The film tells the rise of gangster MP Jayaraj, who became a nightmare for the ruling dispensation at the time. know More.
  Friday, October 21, 2022, 11:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X