»   »  ಶಿವಣ್ಣನಿಗೆ ಹೊಸ ಸಿನಿಮಾ ಮಾಡ್ತಾರಾ 'ಮಫ್ತಿ' ಡೈರೆಕ್ಟರ್?

ಶಿವಣ್ಣನಿಗೆ ಹೊಸ ಸಿನಿಮಾ ಮಾಡ್ತಾರಾ 'ಮಫ್ತಿ' ಡೈರೆಕ್ಟರ್?

Posted By:
Subscribe to Filmibeat Kannada

'ಮಫ್ತಿ' ಸಿನಿಮಾದಲ್ಲಿ 'ಭೈರತಿ ರಣಗಲ್ಲು' ಪಾತ್ರವನ್ನ ಶಿವರಾಜ್ ಕುಮಾರ್ ನಿರ್ವಹಿಸಿದ್ದರು. ಈಗ ಇದೇ ಭೈರತಿ ರಣಗಲ್ಲು ಪಾತ್ರ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಶಿವಣ್ಣ ಅವರನ್ನು ನಿರ್ದೇಶಕ ನರ್ತನ್ ತುಂಬ ಚೆನ್ನಾಗಿ ತೋರಿಸಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

'ಭೈರತಿ ರಣಗಲ್ಲು' ಪಾತ್ರದ ಹುಟ್ಟಿನ ಬಗ್ಗೆ 'ಮಫ್ತಿ' ನಿರ್ದೇಶಕರ ಮಾತು!

ಇನ್ನೂ 'ಮಫ್ತಿ' ಬಳಿಕ ಶಿವಣ್ಣನ ಜೊತೆ ಮತ್ತೆ ನರ್ತನ್ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಕೂಡ ಸಾಮಾನ್ಯವಾಗಿ ಹುಟ್ಟಿದೆ. ಈ ಬಗ್ಗೆ ಸ್ವತಃ ನರ್ತನ್ ಉತ್ತರಿಸಿದ್ದಾರೆ. 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು ಶಿವಣ್ಣ ಜೊತೆ ಸಿನಿಮಾ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ.

'Mufti' movie director Narthan spoke about Shiva rajkumar

ಶಿವಣ್ಣನ ಜೊತೆ ಮತ್ತೆ ಸಿನಿಮಾ ಮಾಡುತ್ತೀರಾ? ಅಂದರೆ ನರ್ತನ್ ''ಖಂಡಿತ...100%. ಮುಂದೆ ಶಿವಣ್ಣನ ಜೊತೆ ಸಿನಿಮಾ ಮಾಡಿಯೇ ಮಾಡುತ್ತೇನೆ. ಆದರೆ ಯಾವಾಗ ಅಂತ ಗೊತ್ತಿಲ್ಲ. ಇನ್ನು ಆ ಬಗ್ಗೆ ನಿರ್ಧಾರ ಮಾಡಿಲ್ಲ. ಶಿವಣ್ಣನಿಗೆ ಮತ್ತೆ ಸಿನಿಮಾ ಮಾಡಬೇಕು ಅಂದರೆ ಭೈರತಿ ರಣಗಲ್ಲು ಗಿಂತ ಒಳ್ಳೆಯ ಪಾತ್ರ ಬರಬೇಕು'' ಎಂದು ಉತ್ತರಿಸಿದ್ದಾರೆ.

ಕನ್ನಡದ ಬಹುತೇಕ ನಿರ್ದೇಶಕರಿಗೆ ಶಿವಣ್ಣನ ಜೊತೆ ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ನರ್ತನ್ ತಮ್ಮ ಮೊದಲ ಸಿನಿಮಾದಲ್ಲಿಯೇ ಶಿವಣ್ಣನ ಜೊತೆ ಕೆಲಸ ಮಾಡಿದ್ದಾರೆ. ಮುಂದೆ ಅವಕಾಶ ಸಿಕ್ಕರೆ 'ಮಫ್ತಿ' ಡೈರೆಕ್ಟರ್ ಭೈರತಿ ರಣಗಲ್ಲು ಜೊತೆ ಮತ್ತೆ ಸಿನಿಮಾ ಮಾಡುವುದು ಪಕ್ಕಾ.

English summary
'Mufti' movie Director Narthan spoke about Shiva rajkumar in an Exclusive interview with FilmiBeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada