»   » ಗೋಲ್ಡನ್ ಸ್ಟಾರ್ ಗಣೇಶ್ 'ಮುಗುಳುನಗೆ'ಗೆ ಇಷ್ಟೊಂದು ಡಿಮ್ಯಾಂಡ್ ಇದೆ

ಗೋಲ್ಡನ್ ಸ್ಟಾರ್ ಗಣೇಶ್ 'ಮುಗುಳುನಗೆ'ಗೆ ಇಷ್ಟೊಂದು ಡಿಮ್ಯಾಂಡ್ ಇದೆ

Posted By:
Subscribe to Filmibeat Kannada
Ganesh Starrer 'Mugulu Nage' Audio Rights Sold To D-Beats For Record Price | Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ 'ಮುಗುಳುನಗೆ'ಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದಕ್ಕೆ ಒಂದು ತಾಜಾ ಉದಾಹಾರಣೆ ಅಂದರೆ ಚಿತ್ರದ ಟ್ರೇಲರ್.

'ಮುಗುಳುನಗೆ' ಚಿತ್ರದ ಟ್ರೇಲರ್ ಕಳೆದ ಎರಡು ದಿನದ ಹಿಂದೆ ರಿಲೀಸ್ ಆಗಿತ್ತು. ಸದ್ಯ ಚಿತ್ರದ ಟ್ರೇಲರ್ ಈಗ ನಾಲ್ಕುವರೆ ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಯೂಟ್ಯೂಬ್ ನಲ್ಲಿ 'ಮುಗುಳುನಗೆ' ಟ್ರೇಲರ್ ನಂಬರ್ 1 ಟ್ರೆಂಡಿಂಗ್ ನಲ್ಲಿದೆ. ಇದು ಸಿನಿಮಾದ ಬಗ್ಗೆ ಜನರಿಗೆ ಇರುವ ನಿರೀಕ್ಷೆಯನ್ನು ಸಾಬೀತು ಮಾಡಿದೆ.

'Mugulu Nage' kannada movie trailer number 1 trending in youtube

'ಮುಂಗಾರು ಮಳೆ', 'ಗಾಳಿಪಟ' ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಾಯಕ ಗಣೇಶ್ ಅವರ ಜೋಡಿಯಲ್ಲಿ ಅಂತಹದ್ದೇ ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು, ಟ್ರೈಲರ್ ನಲ್ಲೂ ಜಾದೂ ಮಾಡಿದ್ದಾರೆ.

'ಮುಗುಳುನಗೆ' ಟ್ರೈಲರ್ ನಲ್ಲೇ ಜಾದೂ ಮಾಡಿದ ಗಣೇಶ್-ಭಟ್ ಜೋಡಿ

ಮುಗುಳುನಗೆ' ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಇದು ಹರಿಕೃಷ್ಣ ಅವರ 100ನೇ ಸಿನಿಮಾವಾಗಿದೆ.

ಈಗಾಗಲೇ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು,ಚಿತ್ರದ ಮೇಲಿದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಅಂದ್ಹಾಗೆ, 'ಮುಗುಳುನಗೆ' ಸಿನಿಮಾ ಸಪ್ಟೆಂಬರ್ 1ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

English summary
Golden star Ganesh's 'Mugulu Nage' kannada movie trailer number 1 trending in youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada