»   » 'ಮುಗುಳುನಗೆ' ಟ್ರೈಲರ್ ನಲ್ಲೇ ಜಾದೂ ಮಾಡಿದ ಗಣೇಶ್-ಭಟ್ ಜೋಡಿ

'ಮುಗುಳುನಗೆ' ಟ್ರೈಲರ್ ನಲ್ಲೇ ಜಾದೂ ಮಾಡಿದ ಗಣೇಶ್-ಭಟ್ ಜೋಡಿ

Posted By:
Subscribe to Filmibeat Kannada

ಹಲವು ವಿಷಯಗಳಿಗೆ ಕುತೂಹಲ ಮೂಡಿಸಿರುವ 'ಮುಗುಳುನಗೆ' ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದೆ. ಇಷ್ಟು ದಿನ ಹಾಡುಗಳ ಮೂಲಕ ಸೌಂಡ್ ಮಾಡುತ್ತಿದ್ದ ಸಿನಿಮಾ, ಈಗ ರೊಮ್ಯಾಂಟಿಕ್ ಟ್ರೈಲರ್ ರಿಲೀಸ್ ಮಾಡಿ ಆಕರ್ಷಣೆ ಮಾಡುತ್ತಿದೆ.

Golden Star Ganesh starrer Kannada Movie 'Mugulunage' releases on August 25th

'ಮುಂಗಾರು ಮಳೆ', 'ಗಾಳಿಪಟ' ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಾಯಕ ಗಣೇಶ್ ಅವರ ಜೋಡಿಯಲ್ಲಿ ಅಂತಹದ್ದೇ ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು, ಟ್ರೈಲರ್ ನಲ್ಲೂ ಜಾದೂ ಮಾಡಿದ್ದಾರೆ.

ಹುಡುಗಿಯರ ಮನ ಗೆದ್ದ 'ಮುಗುಳುನಗೆ' ಚಿತ್ರದ ಈ ಹಾಡು

'Mugulu Nage' movie trailer Released

'ಮುಗುಳುನಗೆ' ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಇದು ಹರಿಕೃಷ್ಣ ಅವರ 100ನೇ ಸಿನಿಮಾವಾಗಿದೆ. ಈಗಾಗಲೇ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು,ಚಿತ್ರದ ಮೇಲಿದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಅಂದ್ಹಾಗೆ, 'ಮುಗುಳುನಗೆ' ಸಿನಿಮಾ ಸಪ್ಟೆಂಬರ್ 1ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

English summary
Golden star Ganesh's 'Mugulu Nage' kannada movie trailer Released today (august 28). the movie is directed by Yogaraj bhat.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada