For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಚಿತ್ರದಲ್ಲಿ ಐಟಂ ರಾಣಿ... ಆಯಿ ಆಯಿರೋ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮಲ್ಲು ಬೆಡಗಿ ಭಾವನಾ ಮುಖ್ಯಭೂಮಿಕೆಯಲ್ಲಿರುವ 'ಟೋಪಿವಾಲಾ' ಚಿತ್ರದ ಐಟಂ ಹಾಡೊಂದನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು. ಎಂಜಿ ಶ್ರೀನಿವಾಸ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಇಷ್ಟಕ್ಕೂ ಈ ಐಟಂ ಹಾಡಿಗೆ ಹೆಜ್ಜೆ ಹಾಕಿರುವ ಬೆಡಗಿ ಮುಕ್ತಿ ಮೋಹನ್.

  'ಟೋಪಿವಾಲಾ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಇತ್ತೀಚೆಗೆ ಐಟಂ ಹಾಡನ್ನು ಸೆರೆಹಿಡಿಯಲಾಯಿತು. ಈಕೆ ಸ್ಟಾರ್ ಒನ್ ವಾಹಿನಿಯ ಡಾನ್ಸ್ ರಿಯಾಲಿಟಿ ಶೋ 'ಝರಾ ನಾಚ್ ಕೆ ದಿಖಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 'ಮಸಕಲಿ ಗರ್ಲ್ಸ್' ತಂಡದ ನೇತೃತ್ವ ವಹಿಸಿದ್ದರು. ಈಗ 'ಟೋಪಿವಾಲಾ' ಚಿತ್ರಕ್ಕಾಗಿ ತಮ್ಮ ಸೊಂಟ ಬಳುಕಿಸಿದ್ದಾರೆ.

  ಮ್ಯಾಕ್ಸ್ ಲೈಫ್ ಇನ್ಸುರೆನ್ಸ್, ರಿಲಯನ್ಸ್ ಮೊಬೈಲ್, ಸೋನಿ ಎರಿಕ್ಸನ್, ಐಎನ್ ಜಿ ವೈಶ್ಯಾ ಲೈಫ್ ಇನ್ಸುರೆನ್ಸ್ ಸೇರಿದಂತೆ ಹಲವಾರು ವಾಣಿಜ್ಯ ಜಾಹೀರಾತುಗಳಲ್ಲೂ ಅಭಿನಯಿಸಿದ್ದಾರೆ. ಭರತನಾಟ್ಯ, ಜಾಸ್, ಬ್ಯಾಲೆ, ಹಿಪ್ ಹಾಪ್ ನೃತ್ಯ ರೀತಿಗಳಲ್ಲಿ ಪರಿಣಿತೆ. ಇನ್ನು ಈಕೆಗೆ ಐಟಂ ಡಾನ್ಸ್ ಎಂದರೆ ಒಂದು ಲೆಕ್ಕಾನಾ? ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಕುಣಿದಿದ್ದಾರೆ.

  ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಶ್ರೀನಿವಾಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವರು. ಅವರ ಕಿರುಚಿತ್ರ Simply KailAwesome ಗಂಭೀರ ಪ್ರಯತ್ನಕ್ಕೆ ಭಾರಿ ಮನ್ನಣೆ ಸಿಕ್ಕಿದೆ. ಈಗ ಇದೇ ಮೊದಲ ಬಾರಿಗೆ ಉಪೇಂದ್ರ ಚಿತ್ರ ನಿರ್ದೇಶಿಸುತ್ತಿದ್ದಾರೆ.

  ರೋಮ್ಯಾಂಟಿಕ್ ಚಿತ್ರವಾಗಿರುವ ಇದರಲ್ಲಿ ಸಾಕಷ್ಟು ಹಾಸ್ಯ, ಚಲ್ಲಾಟ, ಮಸಾಲೆ ಅಂಶಗಳು ಇವೆ. ವಿ ಹರಿಕೃಷ್ಣ ಸಂಗೀತವಿರುವ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ರವಿಶಂಕರ್, ರಾಜು ತಾಳಿಕೋಟೆ, ರಾಕ್ ಲೈನ್ ಸುಧಾಕರ್ ಮುಂತಾದ ಕಲಾವಿದರಿದ್ದಾರೆ. (ಒನ್ ಇಂಡಿಯಾ ಕನ್ನಡ ಸಿನಿ ಡೆಸ್ಕ್)

  English summary
  Recently item number has pictured for Real Star Upendra lead Kannada film Topiwala. Dancer Mukti Mohan sizzled in an item song. Topiwala is a full length commercial film with lot of fun and frolic contained in the story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X