»   » ಕನ್ನಡದಲ್ಲೂ ಅಭಿನಯಿಸಿದ್ದ ಬಹುಭಾಷಾ ನಟಿ ಅಪಹರಣ

ಕನ್ನಡದಲ್ಲೂ ಅಭಿನಯಿಸಿದ್ದ ಬಹುಭಾಷಾ ನಟಿ ಅಪಹರಣ

Posted By:
Subscribe to Filmibeat Kannada

ಬಹುಭಾಷಾ ನಟಿಯೊಬ್ಬರನ್ನ 5 ಜನ ದುಷ್ಕರ್ಮಿಗಳ ತಂಡ ಅಪಹರಿಸಿದ್ದರು ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ನಿನ್ನೆ (ಫೆಬ್ರವರಿ 17) ಕೇರಳದ ಎರ್ನಾಕಲುಂನಿಂದ ಹೊಸ ಚಿತ್ರದ ಶೂಟಿಂಗ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿರುವಾಗ ನಟಿಯನ್ನ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತ್ರಿಶೂರ್ ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತದ ನಾಟಕವಾಡಿ, ದುಷ್ಕರ್ಮಿಗಳು ನಟಿಯನ್ನ ಅಲ್ಲಿಂದ ಅಪಹರಿಸಿದ್ದರು. ಈ ವೇಳೆ ''ದೈಹಿಕವಾಗಿ ಹಲ್ಲೆ ಮಾಡಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ'' ಎಂದು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದ ನಟಿ ಪೊಲೀಸರಿಗೆ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

multilingual-actress-kidnaped-by-her-car-driver

ಈ ಕೃತ್ಯದಲ್ಲಿ ನಟಿಯ ಕಾರು ಚಾಲಕ ಮಾರ್ಟಿನ್, ಮತ್ತು ಈ ಹಿಂದೆ ಆ ನಟಿಯ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುನಿಲ್ ಕುಮಾರ್ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಮಾರ್ಟಿನ್ ನ ಪೊಲೀಸರು ಬಂಧಿಸಿದ್ದು, ನಟಿ ತಮ್ಮ ಹಿತೈಷಿಯೊಬ್ಬರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

English summary
Malayalam Actress allegedly molested after being abducted on Friday night in Ernakulam in Kerala. Her car driver is held, search on for others. The Actress also acted in Kannada Films.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada