»   » ಪೇಪರ್ ಮೇಲಿನ 'ಸಿಂಹ'ವಾಯಿತೇ 200.ರೂಗೆ ಸಿನಿಮಾ ಟಿಕೆಟ್ ಆದೇಶ.!?

ಪೇಪರ್ ಮೇಲಿನ 'ಸಿಂಹ'ವಾಯಿತೇ 200.ರೂಗೆ ಸಿನಿಮಾ ಟಿಕೆಟ್ ಆದೇಶ.!?

Posted By:
Subscribe to Filmibeat Kannada

ಕರ್ನಾಟಕ ರಾಜ್ಯ ಸರ್ಕಾರದಿಂದ ನಿನ್ನೆ (ಮೇ 2) ಸಿಹಿ ಸುದ್ದಿ ಹೊರಬಿತ್ತು. ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದಂತೆ, ರಾಜ್ಯಾದ್ಯಂತ ಏಕರೂಪ ಟಿಕೆಟ್ ನಿಗದಿಗೊಳಿಸಿ, ನಿನ್ನೆ ಆದೇಶ ಜಾರಿಗೊಳಿಸಲಾಯಿತು.[ಎಲ್ಲಾ ಭಾಷೆಗಳ ಟಿಕೆಟ್ ದರ ಗರಿಷ್ಠ 200 ರು : ಸರ್ಕಾರದ ಆದೇಶ ಜಾರಿ]

ಅಲ್ಲಿಗೆ, ನಿನ್ನೆಯಿಂದಲೇ ರಾಜ್ಯಾದ್ಯಂತ ಎಲ್ಲ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಟಿಕೆಟ್ ಬೆಲೆ 200 ರೂಪಾಯಿಗೆ ನಿಗದಿ ಆಗಬೇಕಿತ್ತು. ಆದ್ರೆ, ಇಲ್ಲಿಯವರೆಗೂ ಅದು ಸಾಧ್ಯ ಆಗಿಲ್ಲ.!

ಮಲ್ಟಿಪ್ಲೆಕ್ಸ್ ಗಳ ಹಗಲು ದರೋಡೆ ನಿಂತಿಲ್ಲ!

ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ನೂ ಟಿಕೆಟ್ ದರಕ್ಕೆ ಕಡಿವಾಣ ಬಿದ್ದಿಲ್ಲ. ಮಲ್ಟಿಪ್ಲೆಕ್ಸ್ ನವರು ಹಗಲು ದರೋಡೆ ಮಾಡುವುದನ್ನು ಇನ್ನೂ ನಿಲ್ಲಿಸಿಲ್ಲ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ 'ಬುಕ್ ಮೈ ಶೋ' ವೆಬ್ ತಾಣ.!

ಒಮ್ಮೆ ಓಪನ್ ಮಾಡಿ ನೋಡಿ....

ಒಮ್ಮೆ 'ಬುಕ್ ಮೈ ಶೋ' ವೆಬ್ ತಾಣ ಓಪನ್ ಮಾಡಿ... ಪರಭಾಷೆಯ ಸಿನಿಮಾಗಳ ಟಿಕೆಟ್ ಬೆಲೆಗಳತ್ತ ಒಮ್ಮೆ ಕಣ್ಣಾಡಿಸಿ... ನಿಮಗೆ ಶಾಕ್ ಆಗುವುದು ಗ್ಯಾರೆಂಟಿ. [ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.!]

ಇವತ್ತೂ 400 ರೂಪಾಯಿಗೆ ಟಿಕೆಟ್ ಓಡುತ್ತಿದೆ!

'ಬಾಹುಬಲಿ-2' ಚಿತ್ರಕ್ಕೆ ಇವತ್ತೂ ಕೂಡ ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ 400 ರೂಪಾಯಿ ವರೆಗೂ ಟಿಕೆಟ್ ಸೇಲ್ ಆಗುತ್ತಿದೆ.[ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.!]

ಬೆಲೆಗಳತ್ತ ಕಣ್ಣಾಡಿಸಿ...

ಬೆಂಗಳೂರಿನ ಬಿನ್ನಿಪೇಟೆ ಮಾಲ್ ನಲ್ಲಂತೂ 350, 400 ರೂಪಾಯಿಗೆ ಟಿಕೆಟ್ ಸೇಲ್ ಆಗುತ್ತಿದೆ.

ಪಿವಿಆರ್ ನಲ್ಲೂ ಅದೇ ಕಥೆ

ಪಿವಿಆರ್ ಕೂಡ ರಾಜ್ಯ ಸರ್ಕಾರದ ಆದೇಶ ಪಾಲಿಸಿಲ್ಲ.

ತೆರೆಗೆ ಲೆಕ್ಕ ಹಾಕಿದ್ರೂ 300 ದಾಟಲ್ಲ.!

ಟಿಕೆಟ್ ಬೆಲೆ 200 (ಗರಿಷ್ಠ) ರೂಪಾಯಿ. ಅದರ ಮೇಲೆ ತೆರೆಗೆ ಹೇರಿದರೂ 260-270 ರೂಪಾಯಿ ದಾಟುವುದಿಲ್ಲ. ಹೀಗಿದ್ದರೂ, ಎಲ್ಲೆಡೆ 300 ರೂಪಾಯಿಗಿಂತಲೂ ಹೆಚ್ಚಿನ ಬೆಲೆಯಲ್ಲಿ ಟಿಕೆಟ್ ಸೇಲ್ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡುವವರು ಯಾರು.?

ಸಿಂಗಲ್ ಸ್ಕ್ರೀನ್ ನಲ್ಲಿ ಹಾಗಿಲ್ಲ.!

ಮೊದಲಿನಿಂದಲೂ ಸಿಂಗಲ್ ಸ್ಕ್ರೀನ್ ಗಳಲ್ಲಿ ಟಿಕೆಟ್ ದರ ಮಲ್ಟಿಪ್ಲೆಕ್ಸ್ ಗಳಿಗೆ ಹೋಲಿಸಿದರೆ ಕೊಂಚ ಕಮ್ಮಿ. ಈಗ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಮೇಲೆ ಕೆಲವು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು 150, 200 ರೂಪಾಯಿಗೆ ಟಿಕೆಟ್ ಫಿಕ್ಸ್ ಮಾಡಿದೆ.

ಆದ್ರೆ ಊರ್ವಶಿ ಕಥೆ ಬೇರೆ.!

ಸದಾ ಪರಭಾಷಾ ಸಿನಿಮಾಗಳೇ ರಾರಾಜಿಸುವ ಬೆಂಗಳೂರಿನ ಊರ್ವಶಿ ಚಿತ್ರಮಂದಿರ (ಸಿಂಗಲ್ ಸ್ಕ್ರೀನ್) ಇವತ್ತು 200, 250, 300 ರೂಪಾಯಿ ವರೆಗೆ 'ಬಾಹುಬಲಿ-2' ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

ಕನ್ನಡ ಸಿನಿಮಾಗಳ ಬೆಲೆ ನೋಡಿ....

ಪರಭಾಷಾ ಸಿನಿಮಾಗಳ ಟಿಕೆಟ್ ಗಳು ಇವತ್ತೂ 400 ರೂಪಾಯಿಗೆ ಸೇಲ್ ಆಗುತ್ತಿದ್ದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳ ಟಿಕೆಟ್ 100, 125, 155 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಮಲ್ಟಿಪ್ಲೆಕ್ಸ್ ಗಳಿಗೆ ಮೂಗುದಾರ ಯಾವಾಗ.?

ಪರಭಾಷಾ ಚಿತ್ರಗಳೂ ಸೇರಿದಂತೆ ಎಲ್ಲಾ ಚಿತ್ರಗಳಿಗೂ ಗರಿಷ್ಠ ಟಿಕೆಟ್ ಬೆಲೆ 200 ರೂಪಾಯಿ ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹೀಗಿದ್ದರೂ, ಈ ಆದೇಶವನ್ನ ಮಲ್ಟಿಪ್ಲೆಕ್ಸ್ ಮಂದಿ ಪಾಲಿಸುತ್ತಿಲ್ಲ. ಇದಕ್ಕೆ ಕಾರಣ ಏನು.?

ಆದೇಶ ಪ್ರತಿ ಬಂದಿಲ್ಲವಂತೆ!

''ಆದೇಶ ಜಾರಿ ಆಗಿರಬಹುದು. ಆದ್ರೆ, ಅದರ ಪ್ರತಿ ಇನ್ನೂ ನಮ್ಮ ಕೈಗೆ ಸೇರಿಲ್ಲ. ನಮಗೆ ಯಾರೂ ಇನ್ಫಾರ್ಮ್ ಮಾಡಿಲ್ಲ. ಡಿಮ್ಯಾಂಡ್ ಲೆಕ್ಕಾಚಾರದ ಮೇಲೆ ನಾವು ಟಿಕೆಟ್ ಫಿಕ್ಸ್ ಮಾಡುತ್ತಿದ್ದೇವೆ'' ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಮಲ್ಟಿಪ್ಲೆಕ್ಸ್ ಒಂದರ ಮ್ಯಾನೇಜರ್ ಹೇಳುತ್ತಾರೆ.

ಪೇಪರ್ ಮೇಲಿನ ಸಿಂಹವಾಯಿತೇ.?

ಸರ್ಕಾರ ಹೊರಡಿಸಿರುವ ಆದೇಶ ಪೇಪರ್ ಮೇಲೆ ಸಿಂಹವಾಗದೇ, ಸಾರ್ವಜನಿಕ ವಲಯದಲ್ಲಿ ಘರ್ಜಿಸಿದರೆ ಮಾತ್ರ ಶ್ರೀಸಾಮಾನ್ಯರಿಗೆ ಸಹಕಾರಿ. ಇದು ಎಂದು ಆಗುವುದೋ.?

English summary
Karnataka State Government has issued an order for reducing ticket rates in Multiplexes to Rs.200 on Tuesday (May 2nd) but Multiplexes are following not yet following the order.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada