»   » ದಾಖಲೆ ಬೆಲೆಗೆ ಸೇಲ್ ಆದ 'ಮಮ್ಮಿ' ಹಿಂದಿ ಡಬ್ಬಿಂಗ್ ರೈಟ್ಸ್.!

ದಾಖಲೆ ಬೆಲೆಗೆ ಸೇಲ್ ಆದ 'ಮಮ್ಮಿ' ಹಿಂದಿ ಡಬ್ಬಿಂಗ್ ರೈಟ್ಸ್.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡಿದ್ದ 'ಮಮ್ಮಿ ಸೇವ್ ಮಿ' ಸಿನಿಮಾ ಬಾಲಿವುಡ್ ನಲ್ಲೂ ಸೌಂಡ್ ಮಾಡಲು ತಯಾರಾಗಿದೆ.

ಕಲೆಕ್ಷನ್ ವಿಷಯದಲ್ಲಿ ಕನ್ನಡದಲ್ಲಿ ದಾಖಲೆ ಬರೆದಿದ್ದ 'ಮಮ್ಮಿ ಸೇವ್ ಮಿ' ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಇದೀಗ ದಾಖಲೆ ಬೆಲೆಗೆ ಮಾರಾಟವಾಗಿದೆ.


ಎಷ್ಟು ಮೊತ್ತಕ್ಕೆ ಸೇಲ್.?

ಮೂಲಗಳ ಪ್ರಕಾರ, 'ಮಮ್ಮಿ ಸೇವ್ ಮಿ' ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 30 ಲಕ್ಷಕ್ಕೆ ಸೇಲ್ ಆಗಿದೆ. [ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]


ರೀಮೇಕ್ ಮಾಡುವವರೂ ಇದ್ದಾರೆ.!

ಬರೀ ಡಬ್ಬಿಂಗ್ ಮಾತ್ರ ಅಲ್ಲ, ಬಾಲಿವುಡ್ ಗೆ 'ಮಮ್ಮಿ ಸೇವ್ ಮಿ' ಚಿತ್ರವನ್ನ ರೀಮೇಕ್ ಮಾಡಲು ಕೆಲವರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. [ವೀರೇಶ್ ಚಿತ್ರಮಂದಿರದಲ್ಲಿ ಸತತ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು ಈ ಚಿತ್ರಕ್ಕೆ.!]


ತೆಲುಗಿನಲ್ಲೂ ಸೂಪರ್ ಕಲೆಕ್ಷನ್ ಮಾಡ್ತು.!

ಈಗಾಗಲೇ ತೆಲುಗಿಗೆ ಡಬ್ ಆಗಿರುವ 'ಮಮ್ಮಿ ಸೇವ್ ಮಿ' ಚಿತ್ರಕ್ಕೆ ಟಾಲಿವುಡ್ ನಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹೀಗಾಗಿ, ಬಾಲಿವುಡ್ ನಲ್ಲೂ 'ಮಮ್ಮಿ ಸೇವ್ ಮಿ' ಚಿತ್ರ ಯಶಸ್ವಿ ಆಗುತ್ತದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.[ವಿದೇಶಗಳಲ್ಲಿ ರಾರಾಜಿಸಲಿದೆ ಕನ್ನಡದ 'ಮಮ್ಮಿ ಸೇವ್ ಮಿ']


ಕಾಲಿವುಡ್ ಗೂ ಹಾರಲಿದ್ದಾಳೆ 'ಮಮ್ಮಿ'

ಕಾಲಿವುಡ್ ನಟ ಸೂರ್ಯ ಹಾಗೂ ಜ್ಯೋತಿಕಾ ಕೂಡ 'ಮಮ್ಮಿ ಸೇವ್ ಮಿ' ಚಿತ್ರವನ್ನ ನೋಡಿ, ಮೆಚ್ಚಿ ತಮಿಳಿಗೆ ರೀಮೇಕ್ ಮಾಡಲು ಮನಸ್ಸು ಮಾಡಿದ್ದಾರೆ.


'ಮಮ್ಮಿ ಸೇವ್ ಮಿ' ಚಿತ್ರದ ಕುರಿತು....

ಪ್ರಿಯಾಂಕಾ ಉಪೇಂದ್ರ, ಯುವಿನಾ ಪಾರ್ಥವಿ, ಐಶ್ವರ್ಯ ಸಿಂಧೋಗಿ ನಟನೆಯ 'ಮಮ್ಮಿ ಸೇವ್ ಮಿ' ಚಿತ್ರ ಅಪ್ಪಟ ಹಾರರ್-ಥ್ರಿಲ್ಲರ್ ಸಿನಿಮಾ. ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದು.


English summary
Kannada Actress Priyanka Upendra starrer Kannada Movie 'Mummy Save Me' dubbing rights have been sold to Hindi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada