»   » ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಮೆಚ್ಚಿದ 'ಮುಂಗಾರು ಮಳೆ-2'

ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಮೆಚ್ಚಿದ 'ಮುಂಗಾರು ಮಳೆ-2'

Posted By:
Subscribe to Filmibeat Kannada

'ಉಡ್ತಾ ಪಂಜಾಬ್' ಸೇರಿದಂತೆ ಇತ್ತೀಚೆಗೆ ತೆರೆಕಾಣುತ್ತಿರುವ ಹಲವು ಸಿನಿಮಾಗಳ ಕೆಲ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಿ ಸಿನಿಮಾ ತಂಡದ ಕೆಂಗಣ್ಣಿಗೆ ಸೆನ್ಸಾರ್ ಮಂಡಳಿ ಗುರಿ ಆಗಿದ್ದ ವಿಷಯ ನಿಮಗೆ ಗೊತ್ತಿದೆ. ಕನ್ನಡದ 'ಕಿರುಗೂರಿನ ಗಯ್ಯಾಳಿಗಳು' ಚಿತ್ರಕ್ಕೂ ಸೆನ್ಸಾರ್ ಕಾಟ ತಪ್ಪಲಿಲ್ಲ. [ಸೆನ್ಸಾರ್ ಮಂಡಳಿ ಕೆಂಗಣ್ಣಿಗೆ ಗುರಿಯಾದ ಕತ್ರಿನಾ ಕೈಫ್ 'ಬ್ರಾ']

ಸೆನ್ಸಾರ್ ಮಂಡಳಿ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿರುವಾಗಲೇ, ಕನ್ನಡ 'ಮುಂಗಾರು ಮಳೆ-2' ಚಿತ್ರ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮನ ಗೆದ್ದಿದೆ.


'Mungaru Male-2' gets 'U' Certificate from Censor Board

ಇ.ಕೆ ಪಿಕ್ಚರ್ಸ್ ಲಾಂಛನದಲ್ಲಿ ಜಿ.ಗಂಗಾಧರ್ ನಿರ್ಮಿಸಿರುವ ಶಶಾಂಕ್ ಆಕ್ಷನ್ ಕಟ್ ಹೇಳಿರುವ 'ಮುಂಗಾರು ಮಳೆ-2' ಚಿತ್ರವನ್ನ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ನೀಡದೆ, 'U' ಸರ್ಟಿಫಿಕೇಟ್ ಕೊಟ್ಟು, ಚಿತ್ರವನ್ನ ಮುಕ್ತಕಂಠದಿಂದ ಶ್ಲಾಘಿಸಿದೆ.


ಇದರಿಂದ ನಿರ್ದೇಶಕ ಶಶಾಂಕ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಫುಲ್ ಖುಷ್ ಆಗಿದ್ದಾರೆ. [ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']


ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ 'ಮುಂಗಾರು ಮಳೆ-2' ಚಿತ್ರದ ಹಾಡುಗಳು ಸೂಪರ್ ಡ್ಯೂಪರ್ ಹಿಟ್ ಆಗಿವೆ. ಸೆಪ್ಟೆಂಬರ್ 9 ರಂದು ಬಿಡುಗಡೆ ಆಗಲಿರುವ 'ಮುಂಗಾರು ಮಳೆ-2' ಚಿತ್ರದ ಟಿಕೆಟ್ ಗಳು ವಿದೇಶಗಳಲ್ಲಿ ಈಗಾಗಲೇ ಸೋಲ್ಡ್ ಔಟ್ ಆಗಿದೆ. [MM2 ಬುಕ್ಕಿಂಗ್ ಆರಂಭ: ಸಿಡ್ನಿಯಲ್ಲಿ ಬಹುತೇಕ ಸೀಟುಗಳು ಭರ್ತಿ]


ಕ್ರೇಜಿ ಸ್ಟಾರ್ ರವಿಚಂದ್ರನ್, ನೇಹಾ ಶೆಟ್ಟಿ, ಶಿಲ್ಪಾ ಮಂಜುನಾಥ್, ಐಂದ್ರಿತಾ ರೇ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿರುವ 'ಮುಂಗಾರು ಮಳೆ-2' ಚಿತ್ರವನ್ನ ನೋಡಲು ನೀವು ರೆಡಿ ಇದ್ದೀರಾ.?

English summary
Golden Star Ganesh starrer Kannada Movie 'Mungaru Male-2' has got 'U' Certificate from Censor Board without any cuts. The movie is releasing on September 9th, 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada