For Quick Alerts
  ALLOW NOTIFICATIONS  
  For Daily Alerts

  ಮಂಡ್ಯದಲ್ಲಿ ದುರ್ಯೋಧನ vs ಅಭಿಮನ್ಯು: ಮುನಿರತ್ನ 'ಕುರುಕ್ಷೇತ್ರ'ಕ್ಕೆ ಫುಲ್ ಟೆನ್ಷನ್.!

  |
  Kurukshetra Kannada Movie : ನಿಖಿಲ್ ಕುಮಾರ್ ಹಾಗು ದರ್ಶನ್ ಮಧ್ಯದಲ್ಲಿ ಮತ್ತೆ ಶುರುವಾಗುತ್ತಾ ಮನಸ್ತಾಪ?

  ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಮತ್ತು ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದಾರೆ. ಸುಮಲತಾ ಪರವಾಗಿ ನಟ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಹಾಗಾಗಿ ಮಂಡ್ಯ ಅಖಾಡದ ರಾಜಕೀಯ ಮತ್ತಷ್ಟು ರಂಗೇರಿದೆ.

  ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

  ವಾಸ್ತವವಾಗಿ ಸುಮಲತಾ ವರ್ಸಸ್ ನಿಖಿಲ್ ಆಗಿದ್ದರೂ, ಕೆಲವು ಕಾರಣದಿಂದ ನಿಖಿಲ್ ವರ್ಸಸ್ ದರ್ಶನ್ ಅಂತಾನೇ ಬಿಂಬಿತವಾಗ್ತಿದೆ. ಅದಕ್ಕೆ ಕಾರಣ ಕುರುಕ್ಷೇತ್ರ ಸಿನಿಮಾ. ಹೌದು, ಮುನಿರತ್ನ ನಿರ್ಮಾಣದ ಬಹುಕೋಟಿ ವೆಚ್ಚದ ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಅಭಿನಯಿಸಿದ್ರೆ, ನಿಖಿಲ್ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ದರ್ಶನ್ 'ಕುರುಕ್ಷೇತ್ರ' ಬಿಡುಗಡೆಗೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರ್.?

  ಇಬ್ಬರು ಒಟ್ಟಿಗೆ ಅಭಿನಯಿಸಿರುವ ಕುರುಕ್ಷೇತ್ರ ಇನ್ನು ರಿಲೀಸ್ ಆಗಿಲ್ಲ. ಬಿಡುಗಡೆ ಮುಂಚೆಯೇ ದುರ್ಯೋಧನ ಮತ್ತು ಅಭಿಮನ್ಯು ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತಿತ್ತು. ಇದೀಗ, ಮಂಡ್ಯ ಚುನಾವಣೆ ಇದಕ್ಕೆ ಬಿಸಿ ತುಪ್ಪದಂತಾಗಿದೆ. ಇದೆಲ್ಲಾ ನಿರ್ಮಾಪಕ ಮುನಿರತ್ನ ಅವರಿಗೆ ಫುಲ್ ಟೆನ್ಷನ್ ಆಗಿದೆ. ಹಾಗಿದ್ರೆ, ಕುರುಕ್ಷೇತ್ರದ ಭವಿಷ್ಯವೇನು? ಮುಂದೆ ಓದಿ.....

  'ಕುರುಕ್ಷೇತ್ರ'ಕ್ಕೆ ಇದ್ಯಾ ಫಲಿತಾಂಶದ ಭಯ

  'ಕುರುಕ್ಷೇತ್ರ'ಕ್ಕೆ ಇದ್ಯಾ ಫಲಿತಾಂಶದ ಭಯ

  ಮಂಡ್ಯ ಅಖಾಡದಲ್ಲಿ ಎದುರಾಳಿಗಳಂತೆ ಪ್ರಚಾರ ಮಾಡಬೇಕಿರುವ ದರ್ಶನ್ ಮತ್ತು ನಿಖಿಲ್ ಕುಮಾರ್, ಚುನಾವಣೆ ನಂತರ ಕುರುಕ್ಷೇತ್ರ ಸಿನಿಮಾಗಾಗಿ ಒಂದೇ ವೇದಿಕೆ ಹಂಚಿಕೊಳ್ಳಬೇಕಿದೆ. ಇದು ಸಾಧ್ಯನಾ ಎಂಬ ಅನುಮಾನ ಈಗ ಕಾಡ್ತಿದೆ. ಯಾಕಂದ್ರೆ, ಫಲಿತಾಂಶದ ನಂತರ ಏನು ಬೇಕಾದರೂ ಆಗಬಹುದು. ಯಾರೇ ಗೆದ್ದರೂ ಮತ್ತೊಬ್ಬರ ಮೇಲೆ ಅದು ಪ್ರಭಾವ ಬೀರಬಹುದು.

  ''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!

  ಪ್ರಚಾರಕ್ಕೆ ಸಾಥ್ ಕೊಡ್ತಾರಾ ಡಿ ಬಾಸ್-ನಿಖಿಲ್?

  ಪ್ರಚಾರಕ್ಕೆ ಸಾಥ್ ಕೊಡ್ತಾರಾ ಡಿ ಬಾಸ್-ನಿಖಿಲ್?

  ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಕುರುಕ್ಷೇತ್ರ ಸಿನಿಮಾ ರಿಲೀಸ್ ಮಾಡಬೇಕಿದೆ. ದರ್ಶನ್ ಅವರ 50ನೇ ಚಿತ್ರ ಎಂದೇ ಗುರುತಿಸಿಕೊಳ್ಳುತ್ತಿರುವ ಈ ಸಿನಿಮಾದ ಪ್ರಚಾರಕ್ಕೆ ದರ್ಶನ್ ಜೊತೆ ನಿಖಿಲ್ ಕೂಡ ಬರ್ತಾರಾ ಅಥವಾ ಬೇರೆ ಯಾವುದಾದರೂ ಕಾರಣ ಹೇಳಿ ಹಿಂದೆ ಸರಿಯುತ್ತಾರಾ ಎಂಬ ಕುತೂಹಲ ಕಾಡ್ತಿದೆ.

  'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು'

  ಮುನಿರತ್ನಗೆ ಹೆಚ್ಚಿದ ಟೆನ್ಷನ್?

  ಮುನಿರತ್ನಗೆ ಹೆಚ್ಚಿದ ಟೆನ್ಷನ್?

  ಎಲ್ಲವೂ ಕೂಲ್ ಆಗಿ ಮುಗಿದರೇ ಸಾಕು ಎಂಬ ಚಿಂತೆಯಲ್ಲಿದ್ದಾರೆ ನಿರ್ಮಾಪಕ ಮುನಿರತ್ನ. ಮಂಡ್ಯದಲ್ಲಿ ಎಷ್ಟು ಸಮಾಧಾನವಾಗಿ ಎಲಕ್ಷನ್ ಮುಗಿಯುತ್ತೋ ಅಷ್ಟೇ ನಿರಾಳ ಆಗ್ತಾರೆ ನಿರ್ಮಾಪಕ ಮುನಿರತ್ನ. ಯಾಕಂದ್ರೆ, ಕುರುಕ್ಷೇತ್ರ ರಿಲೀಸ್ ಮಾಡಬೇಕಂದ್ರೆ ಎಲ್ಲರನ್ನ ಸರಿದೂಗಿಸಿಕೊಂಡು ಹೋಗಬೇಕಿರುವ ಜವಾಬ್ದಾರಿ ಮುನಿರತ್ನ ಮೇಲಿದೆ.

  ಈ ಹಿಂದೆನೇ ವಿವಾದ ಆಗಿದೆ.!

  ಈ ಹಿಂದೆನೇ ವಿವಾದ ಆಗಿದೆ.!

  ಅಂದ್ಹಾಗೆ, ಈ ಹಿಂದೆನೇ ನಿಖಿಲ್ ಮತ್ತು ದರ್ಶನ್ ಪಾತ್ರಗಳ ವಿಷ್ಯದಲ್ಲಿ ಗೊಂದಲವಾಗಿತ್ತು. ಉದ್ದೇಶಪೂರ್ವಕವಾಗಿ ಅಭಿಮನ್ಯು ಪಾತ್ರವನ್ನ ವಿಸ್ತರಿಸಲಾಗಿದೆ. ದರ್ಶನ್ ಅವರ ಪಾತ್ರಕ್ಕಿಂತ ನಿಖಿಲ್ ಪಾತ್ರವನ್ನ ವೈಭವಿಕರಿಸಲಾಗ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಷ್ಯ ಬೇರೆ ವಿಲನ್ ಆಗಿ ಕಾಡಬಹುದು?

  'ಕುರುಕ್ಷೇತ್ರ' ವಿವಾದದ ಬಗ್ಗೆ ಮಾತನಾಡಿದರು ನಿರ್ಮಾಪಕ ಮುನಿರತ್ನ!

  ಯಾವಾಗ ತೆರೆಗೆ ಬರಲಿದೆ?

  ಯಾವಾಗ ತೆರೆಗೆ ಬರಲಿದೆ?

  ಹಾಗ್ನೋಡಿದ್ರೆ, ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರ ಆಗಮನ ಎಂದು ಮುನಿರತ್ನ ಅವರು ಹೇಳಿಕೊಂಡಿದ್ದರು. ಆದ್ರೆ, ಆ ದಿನಕ್ಕೆ ಬರುವ ತಯಾರಿ ಆಗಲಿಲ್ಲ. ಅಷ್ಟರಲ್ಲೇ ನಿಖಿಲ್ ಬೇರೆ ಚುನಾವಣೆಗೆ ಸ್ಪರ್ಧೆ ಮಾಡಿದ್ರು. ಅಲ್ಲಿಗೆ ಎಲೆಕ್ಷನ್ ಮುಗಿಯವರೆಗೂ ಕುರುಕ್ಷೇತ್ರ ರಿಲೀಸ್ ಸಾಧ್ಯವಾಗಲ್ಲ ಎನ್ನುವುದು ಖಾತ್ರಯಾಯಿತು. ಈಗ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಕುರುಕ್ಷೇತ್ರ ಸದ್ದು ಮಾಡಲಿದೆ.

  English summary
  After mandya lok sabha election produecr Munirathna want to face some Challenges for Kurukshetra release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X