»   » 'ಶರಧಿ'ಗೆ, ಸಂಗೀತ ಮಾಂತ್ರಿಕ ಅನೂಪ್ ಸಿಳೀನ್ ಕಂಠದಾನ

'ಶರಧಿ'ಗೆ, ಸಂಗೀತ ಮಾಂತ್ರಿಕ ಅನೂಪ್ ಸಿಳೀನ್ ಕಂಠದಾನ

Posted By:
Subscribe to Filmibeat Kannada

ಕನ್ನಡದಲ್ಲಿ ಈಗ ಕಿರುಚಿತ್ರಗಳ ಪರ್ವ ಶುರುವಾಗಿದ್ದು ಸಾಕಷ್ಟು ಭರವಸೆಯ ನಿರ್ದೇಶಕರು ಚಂದನವಕ್ಕೆ ಪರಿಚಿತರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದೀಗ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಲು ತಯಾರಾಗುತ್ತಿದ್ದು, ಚಿತ್ರ ಕೊನೆಯ ಹಂತದಲ್ಲಿದೆ.

ಅಂದಹಾಗೆ ಇದೀಗ ನಾವು ಹೇಳುತ್ತಿರುವ ಹೊಸಬರ ಕಿರುಚಿತ್ರದ ಹೆಸರು "ಶರಧಿ" ಅಚ್ಚ ಕನ್ನಡದ ಸ್ವಚ್ಛ ಮನಸ್ಸುಗಳೆಲ್ಲಾ ಸೇರಿ ಮಾಡುತ್ತಿರುವ ಈ ಚಿತ್ರವನ್ನು ವಿನಯ್ ಎಂಬ ಪ್ರತಿಭಾನ್ವಿತ ಹೊಸ ನಿರ್ದೇಶಕ ನಿರ್ದೇಶಿಸುತ್ತಿದ್ದಾರೆ.

ಈ ಹೊಸಬರ ಕನಸಿನ " ಶರಧಿಗೆ " ಹಲವಾರು ಸ್ನೇಹದ ಅಲೆಗಳು ಜೊತೆಯಾಗಿದ್ದು ದಡ ತಲುಪುವ ಹಂತದಲ್ಲಿದೆ.

Musician Anoop Seelin sings for a Short Film Sharadhi

ಈ ಕಿರು 'ಶರಧಿ'ಯ ವಿಶೇಷ ಏನಪ್ಪಾ ಅಂದ್ರೆ ಈಗಾಗಲೇ ವಿಕಾಸ್ ವಸಿಷ್ಠರ ರಾಗಕ್ಕೆ ಕನ್ನಡದ ಖ್ಯಾತ ಸಂಗೀತ ಸಂಯೋಜಕ ಮತ್ತು ಗಾಯಕ ಅನೂಪ್ ಸಿಳೀನ್ ದನಿಗೂಡಿಸಿ ಹೊಸ ಪ್ರತಿಭೆಗಳ ಈ ಪ್ರಯತ್ನಕ್ಕೆ ಸಾಥ್ ನೀಡಿರುವುದು ನಿಜಕ್ಕೂ ಶ್ಲಾಘನೀಯ.

ಜೊತೆಗೆ ಇದರ ಮತ್ತೊಂದು ವಿಶೇಷತೆಯೆಂದರೆ ಹಲವಾರು ಹೆಸರಾಂತ ಸಂಗೀತ ನಿರ್ದೇಶಕರ ಬಳಿ ಕಾರ್ಯನಿರ್ವಹಿಸಿರುವ ಮತ್ತು ಈಗಾಗಲೇ ಅನೇಕ ಕನ್ನಡ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಮೂರು ಕನ್ನಡದ ಅತ್ಯದ್ಭುತ ಪ್ರತಿಭೆಗಳಾದ ನೋಬಿನ್, ವಿಕಾಸ್ ವಸಿಷ್ಠ ಮತ್ತು ಗೋಕುಲ್ ಅಭಿಷೇಕ್ ಈ ಚಿತ್ರಕ್ಕೆ ಮನಮೋಹಕ ಹಾಡುಗಳನ್ನು ಒದಗಿಸಿ ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು ಮೂರು ಯುವ ಸಾಹಿತಿಗಳು ಪದ ಪೋಣಿಸಿದ್ದು,  ರಾಮನಾಥ್ ಶಾನಭಾಗ್ ( ಶೀರ್ಷಿಕೆ ಗೀತೆ ),ರಾಘವೇಂದ್ರ ಸಿ ವಿ ( ಅಂದಾಜು ಮೀರಿದ) ಹಾಗೂ ಇನ್ನೊಂದು ವಿಶೇಷ ಗೀತೆಗೆ ರಾಕೇಶ್ ಮಹದೇವ್ ಜೊತೆಗೆ ರಾಮನಾಥ್ ಮತ್ತು ವಿಕಾಸ್ ವಸಿಷ್ಠ ಜೊತೆಯಾಗಿ ಸಾಹಿತ್ಯ ಬರೆದಿದ್ದಾರೆ.

Musician Anoop Seelin sings for a Short Film Sharadhi

ಸಧ್ಯಕ್ಕೆ ಹಾಡುಗಳ ರೆಕಾರ್ಡಿಂಗ್ ನಲ್ಲಿ ಬ್ಯುಸಿ ಇರುವ 'ಶರಧಿ' ಕಿರುಚಿತ್ರ ತಂಡ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಹಾಜರಾಗಲು ಅಣಿಯಾಗುತ್ತಿದೆ ..

ಒಟ್ನಲ್ಲಿ ಹೊಸಪ್ರತಿಭೆಗಳಿಗೆ ಸ್ಯಾಂಡಲ್ ವುಡ್ ನ ಕೆಲವಾರು ಹೆಸರಾಂತ ಪ್ರತಿಭೆಗಳು ಮಾರ್ಗದರ್ಶನ ನೀಡುವ ಮೂಲಕ ನೂತನ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದನ್ನು ಕಂಡರೆ ಕನ್ನಡ ಚಿತ್ರರಂಗಕ್ಕೆ ಇನ್ನು ಹೆಚ್ಚಿನ ಪ್ರತಿಭೆಗಳ ಆಗಮನವಾಗಬಹುದು ಅನ್ನೋದು ನಮ್ಮ ಅನಿಸಿಕೆ ನೀವೇನಂತೀರಾ?.

English summary
Musician Anoop Seelin sings for a Short Film Sharadhi directed by youngster Vinay Song penned by Raghavendra CV.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada