»   » ಡಾ.ರಾಜ್ ಪಾತ್ರ ವೈಭವೀಕರಿಸಲಾಗಿದೆ; ಮುತ್ತುಲಕ್ಷ್ಮಿ

ಡಾ.ರಾಜ್ ಪಾತ್ರ ವೈಭವೀಕರಿಸಲಾಗಿದೆ; ಮುತ್ತುಲಕ್ಷ್ಮಿ

Posted By:
Subscribe to Filmibeat Kannada
Attahasa still
ಎಎಂಆರ್ ರಮೇಶ್ ಆಕ್ಷನ್ ಕಟ್ ಹೇಳಿರುವ 'ಅಟ್ಟಹಾಸ' ಚಿತ್ರಕ್ಕೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಬಿಡುಗಡೆಗ ಸಿದ್ಧವಾಗಿರುವ ಈ ಚಿತ್ರಕ್ಕೆ ಮತ್ತೊಂದು ಕಂಟಕ ಎದುರಾಗಿದೆ. "ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ವೈಭವೀಕರಿಸಲಾಗಿದೆ" ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಆರೋಪಿಸಿದ್ದಾರೆ.

ಈ ಸಂಬಂಧ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿರುವುದು ಗೊತ್ತೇ ಇದೆ. 'ಅಟ್ಟಹಾಸ' ಚಿತ್ರಕ್ಕೆ ಪತ್ರಕರ್ತ ನಕ್ಕೀರನ್ ಗೋಪಾಲ್ ಆರಂಭದಲ್ಲಿ ಕ್ಯಾತೆ ತೆಗೆದರೂ ಕೊನೆಗೆ ತಮ್ಮ ಅಭ್ಯಂತರವೇನು ಇಲ್ಲ ಎಂದರು. ಡಾ.ರಾಜ್ ಕುಟುಂಬಿಕರು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಸೆನ್ಸಾರ್ ಮಂಡಳಿಯೂ ಒಪ್ಪಿಗೆ ನೀಡಿದ್ದು ತೆರಿಗೆ ರಹಿತ ಪ್ರಮಾಣಪತ್ರವನ್ನೂ ನೀಡಿದೆ.

ಆದರೆ ಚಿತ್ರವನ್ನು ವೀಕ್ಷಿಸಿದ ವೀರಪ್ಪನ್ ಪತ್ನಿ ಮಾತ್ರ "ಚಿತ್ರದಲ್ಲಿ ಡಾ.ರಾಜ್ ಅವರನ್ನು ವೈಭವೀಕರಿಸಲಾಗಿದೆ. ಅವರನ್ನು ಹೀರೋ ಎಂಬಂತೆ ತೋರಿಸಲಾಗಿದೆ. ಆದರೆ ಚಿತ್ರದ ಬಹುತೇಕ ಕಥೆ ರಾಜ್ ಅಪಹರಣಕ್ಕೊಳಗಾದ ಸಮಯದ್ದು" ಎಂದು ಮುತ್ತುಲಕ್ಷ್ಮಿ ಆರೋಪಿಸಿದ್ದಾರೆ ಎನ್ನುತ್ತವೆ ಮೂಲಗಳು.

ಸದ್ಯಕ್ಕೆ ಮದ್ರಾಸ್ ಹೈಕೋರ್ಟ್ ತೀರ್ಪಿಗಾಗಿ 'ಅಟ್ಟಹಾಸ' ಚಿತ್ರ ಕಾಯುತ್ತಿದೆ. ಚಿತ್ರಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟರೆ ನವೆಂಬರ್ ಮಧ್ಯಭಾಗದಲ್ಲಿ ಅಟ್ಟಹಾಸ ತೆರೆಕಾಣಲಿದೆ. ಬಹುಶಃ ನವೆಂಬರ್ 16ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಕನ್ನಡ ಚಿತ್ರಪ್ರೇಮಿಗಳ ಕರಾಳ ನೆನಪುಗಳಲ್ಲಿ ಅಚ್ಚಳಿಯದೇ ಉಳಿದ ಪುಟಗಳು ವರನಟ ಡಾ.ರಾಜ್ ಅಪಹರಣ. ಈ ಸತ್ಯ ಘಟನೆಗಳ ಆಧಾರವಾಗಿ ಹೆಣೆದಿರುವ ಚಿತ್ರವೇ 'ಅಟ್ಟಹಾಸ'. ಈ ಚಿತ್ರದ ವಿಶೇಷ ಪಾತ್ರದಲ್ಲಿ ಅರ್ಜುಜ್ ಸರ್ಜಾ ಅಭಿನಯಿಸಿದ್ದಾರೆ. ವೀರಪ್ಪನ್ ಆಗಿ ಕಿಶೋರ್ ಮೀಸೆ ತಿರುವಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಸುರೇಶ್ ಒಬೆರಾಯ್ ಪೋಷಿಸಿದ್ದು ಚಿತ್ರ ಅತೀವ ಕುತೂಹಲ ಕೆರಳಿಸಿದೆ.

ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು. (ಏಜೆನ್ಸೀಸ್)

English summary
Veerappan wife Muthulakshmi objects Kannada film Attahasa. After she watched the film at a special screening organized by the makers stating that the film glorified Dr Rajkumar as a hero.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada