For Quick Alerts
    ALLOW NOTIFICATIONS  
    For Daily Alerts

    ಯಶ್ ಅಲ್ಲ ಹರ್ಷ ಮುಂದಿನ ಸಿನಿಮಾ ಶಿವಣ್ಣನ ಜೊತೆಗೆ!

    |

    Recommended Video

    ನಿರ್ದೇಶಕ ಹರ್ಷ ಮುಂದಿನ ಸಿನಿಮಾ ಯಶ್ ಜೊತೆ ಅಲ್ಲ ಶಿವಣ್ಣನ ಜೊತೆಗೆ | FILMIBEAT KANNADA

    ನಿರ್ದೇಶಕ ಹರ್ಷ 'ಸೀತಾರಾಮ ಕಲ್ಯಾಣ' ಸಿನಿಮಾದ ನಂತರ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು. ಒಂದು ಕಡೆ ಯಶ್ ಜೊತೆಗೆ ಹರ್ಷ 'ರಾಣಾ' ಸಿನಿಮಾ ಶುರು ಮಾಡುತ್ತಾರೆ ಎಂದು ಹೇಳಲಾಗಿತ್ತು.

    'ರಾಣಾ' ಸಿನಿಮಾವನ್ನು ಯಶ್ ಒಪ್ಪದ ಕಾರಣ ಶಿವರಾಜ್ ಕುಮಾರ್ ಆ ಸಿನಿಮಾ ಮಾಡುತ್ತಾರೆ ಎನ್ನುವ ಗುಸು ಗುಸು ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಅದೇ ರೀತಿ ಹರ್ಷ ತಮ್ಮ ಮುಂದಿನ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ, ಈ ಸಿನಿಮಾ 'ರಾಣಾ' ಅಲ್ಲ.

    ಯಶ್ 'ರಾಣ' ಆಗೇ ಆಗ್ತಾರೆ ಅಂತಿದ್ದಾರೆ ಇವ್ರು!ಯಶ್ 'ರಾಣ' ಆಗೇ ಆಗ್ತಾರೆ ಅಂತಿದ್ದಾರೆ ಇವ್ರು!

    ಹಾಗಾದರೆ, ಹರ್ಷ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಹೊಸ ಸಿನಿಮಾದ ಯಾವುದು? ಮುಂದಿದೆ ಓದಿ ಅದಕ್ಕೆ ಉತ್ತರ..

    'ಮೈ ನೇಮ್ ಇಸ್ ಅಂಜಿ'

    'ಮೈ ನೇಮ್ ಇಸ್ ಅಂಜಿ'

    'ಮೈ ನೇಮ್ ಇಸ್ ಅಂಜಿ' ಹೆಸರಿನಲ್ಲಿ ಹರ್ಷ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ನಾಯಕನಾಗಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾತ್ರಿ ಹಬ್ಬದ ಶುಭ ಸಮಯದಲ್ಲಿ ಈ ಸಿನಿಮಾ ಅನೌನ್ಸ್ ಆಗಿದೆ. ಈ ಹಿಂದೆ 'ವಜ್ರಕಾಯ' ಚಿತ್ರದ ಸಮಯದಲ್ಲಿಯೇ ಶಿವಣ್ಣ ಒಮ್ಮೆ ಈ ಚಿತ್ರದ ಬಗ್ಗೆ ಹೇಳಿಕೊಂಡಿದ್ದರು.

    ಹರ್ಷ ನಿರ್ದೇಶನದ 'ರಾಣ' ಚಿತ್ರವನ್ನು ಮಾಡಲ್ಲ ಅಂದ್ರಾ ಯಶ್? ಹರ್ಷ ನಿರ್ದೇಶನದ 'ರಾಣ' ಚಿತ್ರವನ್ನು ಮಾಡಲ್ಲ ಅಂದ್ರಾ ಯಶ್?

    ಹ್ಯಾಟಿಕ್ ಹೀರೋ ಜೊತೆ ಹ್ಯಾಟಿಕ್ ಸಿನಿಮಾ

    ಹ್ಯಾಟಿಕ್ ಹೀರೋ ಜೊತೆ ಹ್ಯಾಟಿಕ್ ಸಿನಿಮಾ

    ನಟ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. 'ಭಜರಂಗಿ' ಚಿತ್ರದ ಮೂಲಕ ಒಂದಾದ ಈ ಜೋಡಿ ಬಳಿಕ 'ವಜ್ರಕಾಯ' ಸಿನಿಮಾ ಮಾಡಿದರು. 'ಭಜರಂಗಿ' ದೊಡ್ಡ ಹಿಟ್ ಚಿತ್ರವಾದರೆ, 'ವಜ್ರಕಾಯ' ಓಕೆ ಓಕೆ ಎನಿಸಿತ್ತು. ಈ ಚಿತ್ರಗಳ ನಂತರ ಹ್ಯಾಟಿಕ್ ಹೀರೋ ಜೊತೆಗೆ ಹರ್ಷ ಹ್ಯಾಟಿಕ್ ಬಾರಿಸಲು ರೆಡಿಯಾಗಿದ್ದಾರೆ.

    ಜೂನ್ ನಲ್ಲಿ ಮುಹೂರ್ತ

    ಜೂನ್ ನಲ್ಲಿ ಮುಹೂರ್ತ

    ಸದ್ಯ, 'ಮೈ ನೇಮ್ ಇಸ್ ಅಂಜಿ' ಚಿತ್ರದ ಸ್ಕ್ರಿಪ್ಟ್ ವರ್ಕ್ ಅಂತಿಮ ಹಂತದಲ್ಲಿ ನಡೆಯುತ್ತಿದೆಯಂತೆ. ಚಿತ್ರಕಥೆ ಬರೆಯುತ್ತಿದ್ದು, ಜೂನ್ ನಲ್ಲಿ ಈ ಸಿನಿಮಾದ ಮುಹೂರ್ತ ನಡೆಯಲಿದೆ. ಶಿವಣ್ಣ ಲುಕ್ ಹೊಸ ರೀತಿಯಲ್ಲಿ ಇರಲಿದೆಯಂತೆ. ಇನ್ನು ಈ ಹಿಂದೆ 2016ರಲ್ಲಿಯೇ 'ಮೈ ನೇಮ್ ಇಸ್ ಅಂಜಿ' ಟೈಟಲ್ ರಿಜಿಸ್ಟರ್ ಆಗಿತ್ತು.

    ಜಯಣ್ಣ ಕಂಬೈನ್ಸ್ ನಿರ್ಮಾಣ

    ಜಯಣ್ಣ ಕಂಬೈನ್ಸ್ ನಿರ್ಮಾಣ

    'ಮೈ ನೇಮ್ ಇಸ್ ಅಂಜಿ' ಸಿನಿಮಾ ಜಯಣ್ಣ ಕಂಬೈನ್ಸ್ ನಿರ್ಮಾಣ ಆಗುತ್ತಿದೆ. ಶಿವಣ್ಣನ ಇತರ ಚಿತ್ರಗಳಾದ 'ಸನ್ ಆಫ್ ಬಂಗಾರದ ಮನುಷ್ಯ', 'ಮಫ್ತಿ', 'ರುಸ್ತುಂ' ಸಿನಿಮಾಗಳಿಗೆ ಸಹ ಜಯಣ್ಣ ಬೋಗೇಂದ್ರ ಬಂಡವಾಳ ಹಾಕಿದ್ದಾರೆ. ಈಗ ಬರುತ್ತಿರುವ ಈ ಸಿನಿಮಾವೂ ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆಗಲಿದೆಯಂತೆ.

    'ರಾಣಾ' ಯಾವಾಗ?

    'ರಾಣಾ' ಯಾವಾಗ?

    ಹರ್ಷ ನಿರ್ದೇಶನ ಮಾಡಬೇಕಿರುವ 'ರಾಣಾ' ಸಿನಿಮಾವನ್ನು ಯಶ್ ರಿಜಿಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಹರ್ಷ ''ರಾಣಾ ಚಿತ್ರದ ಕಥೆ ಮಾಡಿರುವುದು ಯಶ್ ಅವರಿಗಾಗಿಯೇ. ಆ ಸಿನಿಮಾವನ್ನು ಅವರ ಜೊತೆಗೆ ಮಾಡಿಯೇ ಮಾಡುತ್ತೇನೆ ಎಂದಿದ್ದರು. ಹಾಗಾದರೆ, 'ರಾಣಾ' ಚಿತ್ರ 'ಮೈ ನೇಮ್ ಇಸ್ ಅಂಜಿ' ಸಿನಿಮಾದ ಬಳಿಕ ಶುರು ಆಗಬಹುದು.

    English summary
    Actor Shiva Rajkumar's new kannada movie 'My Name Is Anji' will be launching on June. The movie is directed by A Harsha and producing by Jayanna Bhogendra.
    Tuesday, March 5, 2019, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X