For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಾರ್ ಮಿನಾರ್ ಗೆ ನಾಗಾರ್ಜುನ ಪುತ್ರ

  By Rajendra
  |
  ಆರ್ ಚಂದ್ರು ನಿರ್ದೇಶನದ 'ಚಾರ್ ಮಿನಾರ್' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ತೆಲುಗು ಭಾಷೆಗೂ ಈ ಚಿತ್ರ ರೀಮೇಕ್ ಆಗುತ್ತಿರುವುದು ಗೊತ್ತೇ ಇದೆ. ಈ ಹಿಂದೆ ಬಂದಂತಹ ಸುದ್ದಿಗಳ ಪ್ರಕಾರ, ತೆಲುಗು ರೀಮೇಕ್ ನಲ್ಲಿ ನಟ ನಾಗಾರ್ಜುನ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು.

  ಆದರೆ ಚಂದ್ರು ಅವರು ಹಲವರೊಂದಿಗೆ ಚರ್ಚಿಸಿ ಕಡೆಗೆ ನಾಗಾರ್ಜುನ ಪಡಿಯಚ್ಚಿನಂತಿರುವ ಅವರ ಪುತ್ರ ನಾಗಚೈತನ್ಯ ಅವರನ್ನು ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಪೋಷಿಸಿದ್ದ ಪಾತ್ರವನ್ನು ನಾಗಚೈತನ್ಯ ತೆಲುಗಿನಲ್ಲಿ ಪೋಷಿಸಲಿದ್ದಾರೆ.

  ನಟ ನಾಗಾರ್ಜುನ ಅವರಿಗಿಂತಲೂ ನಾಗಚೈತನ್ಯ ಅವರಿಗೆ ಚಿತ್ರದ ಕಥೆ ಹೆಚ್ಚಾಗಿ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಂದ್ರು ಅವರಿಗೆ ಮಣೆಹಾಕಲು ತೀರ್ಮಾನಿಸಿದ್ದಾರೆ. ಇನ್ನು ನಾಗಚೈತನ್ಯ ಬಗ್ಗೆ ಹೇಳಬೇಕೆಂದರೆ, ಅವರ ಅಭಿನಯದ '100% ಲವ್', 'ಬೆಜವಾಡ', 'ಆಟೋನಗರ್ ಸೂರ್ಯ' ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

  ಚಾರ್ ಮಿನಾರ್ ತೆಲುಗು ರೀಮೇಕ್ ಚಿತ್ರವನ್ನು ಲಗಡಪತಿ ಶ್ರೀಧರ್ ಎಂಬುವವರು ನಿರ್ಮಿಸುತ್ತಿದ್ದಾರೆ. ಆದರೆ ಆಕ್ಷನ್ ಕಟ್ ಆರ್ ಚಂದ್ರು ಅವರೇ ಹೇಳುತ್ತಾರೋ ಅಥವಾ ಬೇರೆ ನಿರ್ದೇಶಕನ ಕೈಗೆ ಕೊಡುತ್ತಾರೋ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.

  ಬಾಕ್ಸ್ ಆಫೀಸಲ್ಲಿ 'ಚಾರ್ ಮಿನಾರ್' (ಚಿತ್ರ ವಿಮರ್ಶೆ ಓದಿ) ಚಿತ್ರ ಸುಮಾರಾಗಿ ಸದ್ದು ಮಾಡಿದೆ. ಚಿತ್ರದ ಡೈಲಾಗ್ಸ್, ಒಂದೆರಡು ಹಾಡುಗಳು ಚೆನ್ನಾಗಿದ್ದು ಚಂದ್ರು ಪ್ರಯತ್ನಕ್ಕೆ ಪ್ರಶಂಸೆಯ ಮಾತುಗಳು ಕೇಳಿಬಂದಿವೆ. ಕನ್ನಡ ಚಿತ್ರವೊಂದು ತೆಲುಗಿಗೆ ರೀಮೇಕ್ ಆಗುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. (ಏಜೆನ್ಸೀಸ್)

  English summary
  Kannada director R Chandru confirmed that Naga Chaitanya Akkineni act in 'Charminar' Telugu remake. Lagadapati Sridhar remede the movie in Telugu. Whether R Chandru is directing the Telugu remake of ‘Charminar’ is not yet decided.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X