ಮತ್ತೆ ನಾಗರಹಾವಾದ ಸಾಹಸಸಿಂಹ: ಇದನ್ನ ನೋಡುವುದೇ ಚೆಂದ
Recommended Video

ಸಾಹಸಸಿಂಹ, ಅಭಿನಯ ಭಾರ್ಗವ, ಕರುಣಾಮಯಿ, ಕಲಿಯುಗದ ಕರ್ಣ, ದಾದಾ ಅಭಿನಯದ 'ನಾಗರಹಾವು' ಚಿತ್ರವು ಹಲವು ಹೊಸ ತಂತ್ರಜ್ಞಾನದಿಂದ ಸಿದ್ಧಗೊಂಡು ಇದೇ ಜುಲೈ 20 ರಂದು ರಾಜ್ಯಾದ್ಯಂತ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಈಶ್ವರಿ ಸಂಸ್ಥೆಯಿಂದ ಬಿಡುಗಡೆಗೊಳ್ಳಲಿದೆ.
ಚಿತ್ರವನ್ನ ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಮೊದಲ ದಿನ, ಮೊದಲ ಶೋ ಚಿತ್ರಮಂದಿರಕ್ಕೆ ಹೋಗಿ ಈ ಎವರ್ ಗ್ರೀನ್ ಸಿನಿಮಾವನ್ನ ಹೊಸ ರೂಪದಲ್ಲಿ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಆಶಯ ದಾದಾ ಅಭಿಮಾನಿಗಳದ್ದು. ಹೀಗೆ, ಅಭಿಮಾನಿಯೊಬ್ಬರ ಅಭಿಪ್ರಾಯ ಇಲ್ಲಿದೆ ನೋಡಿ.

'ನಾಗರಹಾವು' ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ನಿರ್ಮಿಸಿದ ಸಿನಿಮಾ. ಆ ರಾಮಾಚಾರಿ ಹಾಗೂ ಚಾಮಯ್ಯ ಮೆಷ್ಟ್ರ ಗುರುಶಿಷ್ಯರ ಸಂಬಂಧ ನೋಡುವುದೇ ಒಂದು ಅಂಧ ಚೆಂದ.
ಚಿತ್ರ ನೋಡಿದವರೂ ಕೂಡ ಮತ್ತೊಮ್ಮೆ ಮಗದೊಮ್ಮೆ ನಿಮ್ಮ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹೋಗಿ ನೋಡಿ ಬನ್ನಿ. ಇಂದಿನ ಕಾಲದ ಮಕ್ಕಳಿಗೂ ತೋರಿಸಿ ಆ ಕಾಲದ ಗತವೈಭವವನ್ನು ತೋರಿಸಿ ಹೆಮ್ಮೆಯಿಂದ..
''ಕನ್ನಡದ ಅತ್ಯಂತ ಸ್ಪುರದ್ರೂಪಿ ನಟರಾದ ವಿಷ್ಣುವರ್ಧನ್ ರವರು ಈ ದಿನ ನಮ್ಮೊಂದಿಗಿಲ್ಲ. ಆದರೆ ಅವರ ಅಭಿನಯ ಇಂದಿಗೂ ಜೀವಂತ. ತ.ರಾ.ಸು ಅವರ ಅದ್ಭುದ ಕಾದಂಬರಿಯನ್ನು ಅತ್ಯದ್ಭುತ ಚಿತ್ರವನ್ನಾಗಿಸಿದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ. ಚಿತ್ರವನ್ನು ತಪ್ಪದೇ ಚಿತ್ರಮಂದಿರಗಳಲ್ಲಿ ವೀಕ್ಷಿಸಿ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











