»   » ಮಕಾಡೆ ಮಲಗಿದ 'ನಗಾರಿ'; ನಿರ್ದೇಶಕ ನಾಪತ್ತೆ

ಮಕಾಡೆ ಮಲಗಿದ 'ನಗಾರಿ'; ನಿರ್ದೇಶಕ ನಾಪತ್ತೆ

Posted By:
Subscribe to Filmibeat Kannada

'ನಗಾರಿ' ಚಿತ್ರದ ನಿರ್ದೇಶಕ ನಂದೀಶ್ ನಾಪತ್ತೆಯಾಗಿದ್ದಾರೆ. ಇದು ರೀಲ್ ಸುದ್ದಿ ಅಲ್ಲ. ಹಂಡ್ರೆಡ್ ಪರ್ಸೆಂಟ್ ರಿಯಲ್ ಸುದ್ದಿ. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ 'ನಗಾರಿ' ಸಿನಿಮಾ ಸೋತ ಬೆನ್ನಲ್ಲೇ ಪತ್ರ ಬರೆದಿಟ್ಟು ನಂದೀಶ್ ಪರಾರಿಯಾಗಿದ್ದಾರೆ.

ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನುವ ವಿಶ್ವಾಸದಲ್ಲಿದ್ದ 'ನಗಾರಿ' ಚಿತ್ರದ ನಿರ್ದೇಶಕ ನಂದೀಶ್, ಚಿತ್ರ ಯಶಸ್ಸು ಕಾಣದಿದ್ದರಿಂದ ಬೇಸರಗೊಂಡಿದ್ದಾರೆ. ''ಒಳ್ಳೆಯ ಚಿತ್ರವನ್ನ ತೆರೆಗೆ ತರುತ್ತೇನೆ ಎಂದು ಎಲ್ಲರಿಗೂ ಭರವಸೆ ನೀಡಿ ಚಿತ್ರವನ್ನ ನಿರ್ದೇಶಿಸಿದ್ದೆ. ಆದ್ರೆ, ಚಿತ್ರ ಸೋತಿರುವುದರಿಂದ ಮನನೊಂದಿದ್ದೇನೆ. ನನ್ನನ್ನ ಹುಡುಕಬೇಡಿ'' ಅಂತ 'ನಗಾರಿ' ಚಿತ್ರದ ನಾಯಕ ವಿಕಾಸ್ ಗೆ ನಂದೀಶ್ ಮೆಸೇಜ್ ಕಳುಹಿಸಿದ್ದಾರೆ.

'Nagari' Director Nandish abscond

ದಿಢೀರ್ ಅಂತ ಬಂದ ಈ ಸಂದೇಶವನ್ನ ನೋಡಿದ ವಿಕಾಸ್, ನಂದೀಶ್ ರನ್ನ ಸಂಪರ್ಕಿಸಲು ಯತ್ನಿಸಿದ್ದಾರೆ. ಆದ್ರೆ, ಅಷ್ಟರಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮನೆಗೆ ಬಂದು ನೋಡಿದರೆ, ಐದು ಪುಟಗಳ ಸುದೀರ್ಘ ಪತ್ರ ಬರೆದಿಟ್ಟು ನಂದೀಶ್ ಹೊರನಡೆದಿದ್ದಾರೆ.

ಅಸಲಿಗೆ ಸ್ನೇಹಿತರೆಲ್ಲಾ ಸೇರಿಕೊಂಡು ಒಟ್ಟಾಗಿ ಮಾಡಿದ ಸಿನಿಮಾ 'ನಗಾರಿ'. ನಿರ್ಮಾಪಕರು ಸಿಗದೆ, ತಮ್ಮ ತಮ್ಮ ಪೋಷಕರಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದು 'ನಗಾರಿ' ಚಿತ್ರವನ್ನ ಎಲ್ಲರೂ ನಿರ್ಮಿಸಿದ್ದರು. ಕಥೆ-ಚಿತ್ರಕಥೆ-ನಿರ್ದೇಶನ ಮಾಡಿದ್ದವರು ನಂದೀಶ್. [ಹಳ್ಳಿಗಾಡಿನ ಪ್ರೇಮಕಥೆ 'ನಗಾರಿ' ಬರ್ತಿದೆ ತಗೋರಿ]

ಓಂ ಪ್ರಕಾಶ್ ರಾವ್ ಮತ್ತು ಎ.ಆರ್.ಬಾಬು ಅವರಿಗೆ ಸಹಾಯಕ ನಿರ್ದೇಶಕನಾಗಿದ್ದ ನಂದೀಶ್, 'ನಗಾರಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. (ಏಜೆನ್ಸೀಸ್)

English summary
Kannada Movie 'Nagari' released all over Karnataka last week and failed to impress the audience. Looking at the poor response, 'Nagari' director felt disheartened and has absconded.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada