For Quick Alerts
  ALLOW NOTIFICATIONS  
  For Daily Alerts

  'ಸಂಜು ವೆಡ್ಸ್ ಗೀತಾ' ಭಾಗ 2ಕ್ಕೆ ನಾಗಶೇಖರ್ ರೆಡಿ

  By Rajendra
  |

  ಯಶಸ್ವಿ ನಿರ್ದೇಶಕ ನಾಗಶೇಖರ್ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ರೆಡಿಯಾಗುತ್ತಿದ್ದಾರೆ. ಸುಮಧುರ ಹಾಡುಗಳಿಂದ, ಸುಂದರ ಪ್ರೇಮಕಥಾನಕದಿಂದ ಕೂಡಿದ್ದ 'ಸಂಜು ವೆಡ್ಸ್ ಗೀತಾ' ಭಾಗ 2ಕ್ಕೆ ಸಿದ್ಧವಾಗಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಮೋಘ ಅಭಿನಯ ಪ್ರೇಕ್ಷಕರ ಹೃದಯ ಗೆದ್ದಿತ್ತು.

  ಆದರೆ ಆ ಚಿತ್ರದಲ್ಲಿ ಪ್ರೇಮಿಗಳಿಬ್ಬರೂ ದುರಂತ ಸಾವಪ್ಪುತ್ತಾರೆ. ಇನ್ನು ಭಾಗ ಎರಡರಲ್ಲಿ ನಾಗಶೇಖರ್ ಅವರು ಕಥೆಯನ್ನು ಎಲ್ಲಿಂದ ಆರಂಭಿಸುತ್ತಾರೆ ಹೇಗೆ ಕನೆಕ್ಟ್ ಮಾಡುತ್ತಾರೆ ಎಂಬ ಕುತೂಹಲ ಇದ್ದೇ ಇದೆ. [ಚಿತ್ರವಿಮರ್ಶೆ ಸಂಜು ವೆಡ್ಸ್ ಗೀತಾ]

  ಮೂಲಗಳ ಪ್ರಕಾರ, ಇದು ಕಂಪ್ಲೀಟ್ ಡಿಫರೆಂಟ್ ಸ್ಟೋರಿಯಂತೆ. ಶ್ರೀನಗರ ಕಿಟ್ಟಿಗೆ ಬದಲಾಗಿ ಸ್ವತಃ ನಾಗಶೇಖರ್ ಅವರೇ ಬಣ್ಣ ಹಚ್ಚುತ್ತಿದ್ದಾರೆ. ಸದ್ಯಕ್ಕೆ ರಮ್ಯಾ ಅವರು ಚಿತ್ರರಂಗದಿಂದ ದೂರಸರಿದಿರುವ ಕಾರಣ 'ಮೈನಾ' ಚಿತ್ರದ ಬೆಡಗಿ ನಿತ್ಯಾ ಮೆನನ್ ಅವರಿಗೆ ಚಾನ್ಸ್ ಸಿಕ್ಕಿದೆ.

  ಸಂಜು ವೆಡ್ಸ್ ಗೀತಾ ಚಿತ್ರ "ಪ್ರೇಮಿಗಳಿಗೆ ಸಾವಿಲ್ಲ, ಪ್ರೇಮಕ್ಕೆ ಅಳಿವಿಲ್ಲ" ಎಂಬ ಅಮರ ಸಂದೇಶ ಸಾರುವಲ್ಲಿ ಯಶಸ್ವಿಯಾಗುತ್ತದೆ. ಪಾತ್ರಗಳಲ್ಲಿನ ಲವಲವಿಕೆ, ಯುವ ಪ್ರೇಮಿಗಳಾಗಿ ರಮ್ಯಾ, ಕಿಟ್ಟಿ ಪ್ರೌಢ ಅಭಿನಯ, ಗ್ರಾಫಿಕ್ಸ್‌ಗೆ ಹೆಚ್ಚಾಗಿ ಅಂಟಿಕೊಳ್ಳದ ನಿರ್ದೇಶಕರು ಸಹಜತೆಗೆ ಒತ್ತು ನೀಡಿದ್ದರು. ಕತೆಯಲ್ಲಿನ ಗಟ್ಟಿತನ ಚಿತ್ರಕ್ಕೆ ಹೊಸ ಆಯಾಮವನ್ನು ನೀಡಿತ್ತು. (ಏಜೆನ್ಸೀಸ್)

  English summary
  Director Nagashekar all set to start Sanju Weds Geetha sequel. The director has dropped Sreenagara Kitty as the hero and cast himself in the lead. Mynaa fame Nithya Menon will be the heroine replacing Ramya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X