Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು, ತೆಲುಗು ಬಳಿಕ ಬಾಲಿವುಡ್ ಗೆ ಎಂಟ್ರಿಕೊಡುತ್ತಿರುವ ನಾಗಶೇಖರ್: ಕನ್ನಡದ ನಟನಿಗೆ ನಿರ್ದೇಶನ
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ನಾಗಶೇಖರ್ ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಸೂಪರ್ ಹಿಟ್ ಲವ್ ಮಾಕ್ ಟೇಲ್ ತೆಲುಗು ರಿಮೇಕ್ ಗೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ.
ಈ ನಡುವೆ ನಾಗಶೇಖರ್ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಸಂಜು ವೆಡ್ಸ್ ಗೀತಾ ಮತ್ತು ಮೈನಾ ಸಿನಿಮಾ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆದಿದ್ದ ನಿರ್ದೇಶಕ ನಾಗಶೇಖರ್ ಇದೀಗ ಬಾಲಿವುಡ್ ಪ್ರೇಕ್ಷಕರನ್ನು ಮೋಡಿ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ ನಾಗಶೇಖರ್ ಬಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳುತ್ತಿರುವುದು ಕನ್ನಡ ನಟನಿಗೆ ಎನ್ನುವುದೇ ವಿಶೇಷ.
ಬಾಲಿವುಡ್
ನ
ಖ್ಯಾತ
ನಿರ್ಮಾಪಕನ
ಪುತ್ರನಿಗೆ
ನಾಗಶೇಖರ್
ನಿರ್ದೇಶನ

ನಾಗಶೇಖರ್ ಹಿಂದಿ ಸಿನಿಮಾಗೆ ಜೈದ್ ಖಾನ್ ನಾಯಕ
ನಾಗಶೇಖರ್ ಚೊಚ್ಚಲ ಹಿಂದಿ ಸಿನಿಮಾ ವಿಚಾರವಾಗಿ ಕನ್ನಡಿಗ ಜೈದ್ ಖಾನ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಜೈದ್ ಖಾನ್ ಗೆ ಕತೆಯ ಬಗ್ಗೆ ವಿವರಣೆ ನೀಡಿದ್ದು, ಮೊದಲಾರ್ದ ಕತೆ ಕೇಳಿ ಜೈದ್ ಖಾನ್ ಓಕೆ ಮಾಡಿದ್ದಾರಂತೆ. ಇನ್ನು ಸಂಪೂರ್ಣ ಕತೆಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಹಿಂದಿ ಜೊತೆಗೆ ಕನ್ನಡದಲ್ಲೂ ಬರ್ತಿದೆ
ಅಂದಹಾಗೆ ಈ ಸಿನಿಮಾ ಹಿಂದಿ ಜೊತೆಗೆ ಕನ್ನಡದಲ್ಲೂ ತಯಾರಿಸಲು ನಾಗಶೇಖರ್ ನಿರ್ಧರಿಸಿದ್ದಾರಂತೆ. ಎರಡು ಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾ ತಯಾರಾಗುವ ಸಾಧ್ಯತೆ ಇದೆ. ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಕನ್ನಡ ಪ್ರೇಕ್ಷಕರಲ್ಲಿ ಮನೆಮಾಡಿದೆ.
ಡಾರ್ಲಿಂಗ್
ಕೃಷ್ಣಗೆ
ನಾಗಶೇಖರ್
ನಿರ್ದೇಶನ:
ಚಿತ್ರದ
ನಾಯಕಿ
ಮತ್ತು
ಹೆಸರು
ಬಹಿರಂಗ

'ಬನಾರಸ್' ಸಿನಿಮಾದಲ್ಲಿ ಜೈದ್ ಖಾನ್
ಜೈದ್ ಖಾನ್ ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಅವರ ಪುತ್ರ. ಜೈದ್ ಖಾನ್ ಬಾಲಿವುಡ್ ಎಂಟ್ರಿಯ ಬಗ್ಗೆ ಆಗಾಗ ಸುದ್ದಿಯಾಗುತ್ತಲೆ ಇದೆ. ಜೈದ್ ಸದ್ಯ ಕನ್ನಡದ ಬನಾರಸ್ ಸಿನಿಮಾದಲ್ಲಿ ನಟಿಸಿದ್ದಾರೆ. ತನ್ನ ಚೊಚ್ಚಲ ಸಿನಿಮಾದ ಚಿತ್ರೀಕರಣ ಮುಗಿಸಿರುವ ಜೈದ್ ಖಾನ್, ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜಯತೀರ್ಥ ಸಾರಥ್ಯಲ್ಲಿ ಮೂಡಿ ಬಂದಿರುವ ಬನಾರಸ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
Recommended Video

ನಾಗಶೇಖರ್ 'ಮೈನಾ' ರಿಮೇಕ್ ಕತೆ ಏನಾಯಿತು?
ಅಂದಹಾಗೆ ನಾಗಶೇಖರ್ ಈ ಮೊದಲು ಕನ್ನಡದ ಮೈನಾ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲು ಸಜ್ಜಾಗಿದ್ದರು. ಆದರೆ ಈ ಬಗ್ಗೆ ಯಾವುದೇ ಅಪ್ ಡೇಟ್ ಹೊರಬಿದ್ದಿಲ್ಲ. 2013ರಲ್ಲಿ ತೆರೆಗೆ ಬಂದಿದ್ದ ಸೂಪರ್ ಮೈನಾ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ಮಾತುಕತೆ ಸಹ ನಡೆಸಿದ್ದರು. ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಅವರ ಮಗ ಭವೀಶ್ ಗೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸಿದ್ದರು. ಆದರೆ ಇನ್ನೂ ಆ ಸಿನಿಮಾ ಕೇಟಾಫ್ ಆಗಿಲ್ಲ. ಆಗಲೇ ಮತ್ತೊಂದು ಬಾಲಿವುಡ್ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.