Don't Miss!
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರವಿಚಂದ್ರನ್ ಕಾಪಿ ಮಾಡಿರುವ 'ತರ್ಲೆ ನನ್ಮಕ್ಳು'ಗೆ ಸೆನ್ಸಾರ್ ತರ್ಲೆ
ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್, ನಾಗ್ ಶೇಖರ್, ಶುಭಾ ಪೂಂಜಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ತರ್ಲೆ ನನ್ಮಕ್ಳು' ಚಿತ್ರಕ್ಕೆ ಹೊಸ ಸಂಕಷ್ಟ ಎದುರಾಗಿದೆ.
ಗಾಂಧಿನಗರದ ವಾಸ್ತವವನ್ನ ಕಟುವಾಗಿ ಟೀಕಿಸಿರುವ ಈ ಚಿತ್ರ ಇದೀಗ ಸೆನ್ಸಾರ್ ಮಂಡಳಿಯಿಂದ ತಕರಾರು ಎದುರಿಸುತ್ತಿದೆ. 'ತರ್ಲೆ ನನ್ಮಕ್ಳು' ಚಿತ್ರ ರೆಡಿಯಾಗಿ ಒಂದು ವರ್ಷ ಕಳೆದಿದೆ. ಆದರೂ ಸಿನಿಮಾಗೆ ಬಿಡುಗಡೆ ಭಾಗ್ಯ ದೊರಕಿಲ್ಲ. ಅದಕ್ಕೆ ಕಾರಣ ಸೆನ್ಸಾರ್ ಪ್ರಾಬ್ಲಂ. [ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು]
ಅಷ್ಟಕ್ಕೂ ಸೆನ್ಸಾರ್ ಮಂಡಳಿ 'ತರ್ಲೆ ನನ್ಮಕ್ಳು' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡದೆ ಇರುವುದಕ್ಕೆ ಕಾರಣ ಕ್ರೇಜಿ ಸ್ಟಾರ್ ರವಿಚಂದ್ರನ್.! ಅದ್ಹೇಗೆ ಅಂದ್ರೆ, 'ತರ್ಲೆ ನನ್ಮಕ್ಳು' ಚಿತ್ರದಲ್ಲಿ ನಾಯಕ ರವಿ ಮಾಮನ ಪಕ್ಕಾ ಅಭಿಮಾನಿ.
ಸಿನಿಮಾಗಳಲ್ಲಿ ರವಿಚಂದ್ರನ್ ಹೇಗೆ ಮಾಡುತ್ತಾರೋ ಹಾಗೆಲ್ಲಾ 'ತರ್ಲೆ ನನ್ಮಕ್ಳು' ಚಿತ್ರದ ನಾಯಕನೂ ಮಾಡುತ್ತಾನೆ. ಹಾಡುಗಳಲ್ಲಿ ನಾಯಕಿಯರೊಂದಿಗೆ ರವಿಚಂದ್ರನ್ ರೋಮ್ಯಾನ್ಸ್ ಮಾಡುವ ಸ್ಟೈಲ್ ನ 'ತರ್ಲೆ ನನ್ಮಕ್ಳು' ನಾಯಕ ಅನುಕರಣೆ ಮಾಡಿದ್ದಾರೆ.
ಇದಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಪಸ್ವರ ಎತ್ತಿ, ನಿರ್ದಿಷ್ಟ ದೃಶ್ಯಗಳಿಗೆ ಕತ್ರಿ ಹಾಕುವಂತೆ ಸೂಚನೆ ನೀಡಿತ್ತು. ಇಲ್ಲಾಂದ್ರೆ 'A' ಸರ್ಟಿಫಿಕೇಟ್ ನೀಡುವುದಾಗಿ ಹೇಳಿತ್ತು. ಆದ್ರೆ, ದೃಶ್ಯಗಳನ್ನ ಕಟ್ ಮಾಡಲ್ಲ 'U/A' ಸರ್ಟಿಫಿಕೇಟ್ ಬೇಕು ಅಂತ ನಿರ್ದೇಶಕ ರಾಕೇಶ್ ಪಟ್ಟು ಹಿಡಿದರು. ಇದರ ಪರಿಣಾಮ 'ತರ್ಲೆ ನನ್ಮಕ್ಳು' ರಿವೈಸಿಂಗ್ ಕಮಿಟಿ ಮುಂದೆ ಬಂತು.
ಅಲ್ಲೂ, ರವಿಚಂದ್ರನ್ ಅನುಕರಣೆ ಮಾಡಿರುವ ದೃಶ್ಯಗಳಿಗೆ ಕತ್ರಿ ಪ್ರಯೋಗ ಮಾಡುವಂತೆ ಸೂಚನೆ ಸಿಕ್ಕಿದೆ. ಹೀಗಾಗಿ 'ತರ್ಲೆ ನನ್ಮಕ್ಳು' ಚಿತ್ರತಂಡ ದೆಹಲಿಯ ಟ್ರಿಬ್ಯೂನಲ್ ಕದ ತಟ್ಟಿದೆ.
ಅಲ್ಲಿ ಚಿತ್ರತಂಡದ ಬಯಕೆಯಂತೆ ಯಾವುದೇ ಕಟ್ಸ್ ಇಲ್ಲದೆ 'U/A' ಸರ್ಟಿಫಿಕೇಟ್ ಸಿಕ್ಕರೆ 'ತರ್ಲೆ ನನ್ಮಕ್ಳು' ಚಿತ್ರವನ್ನ ನೀವೆಲ್ಲಾ ನೋಡಬಹುದು.