»   » ವಿ. ನಾಗೇಂದ್ರ ಪ್ರಸಾದ್ ಚುನಾವಣಾ ಅಖಾಡಕ್ಕೆ

ವಿ. ನಾಗೇಂದ್ರ ಪ್ರಸಾದ್ ಚುನಾವಣಾ ಅಖಾಡಕ್ಕೆ

Posted By:
Subscribe to Filmibeat Kannada
V Nagendra Prasad
ಕೆಜೆಪಿ ಪಕ್ಷದಿಂದ ಚಿತ್ರ ಸಾಹಿತಿ, ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಪಕ್ಷದ ನಾಲ್ಕನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರದಿಂದ ಕ್ಷೇತ್ರದಿಂದ ನಾಗೇಂದ್ರ ಪ್ರಸಾದ್ ಅವರ ಹೆಸರನ್ನು ಘೋಷಿಸಲಾಗಿದೆ.

ಶನಿವಾರ ಕಜೆಪಿ ಕಚೇರಿಯಲ್ಲಿ ಪಕ್ಷದ 31 ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಲಾಯಿತು. ಅದರಲ್ಲಿ ದೊಡ್ಡ ಬಳ್ಳಾಪುರ ಕ್ಷೇತ್ರದಿಂದ ವಿ.ನಾಗೇಂದ್ರ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ. ನಾಗೇಂದ್ರ ಪ್ರಸಾದ್ ಸ್ಪರ್ಧಿಸುವುದು ಖಚಿತವಾಗಿದೆ.(ಕೆಜೆಪಿ 4 ನೇ ಪಟ್ಟಿ)

ನಟ, ನಿರ್ದೇಶಕ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಕನ್ನಡಿಗರಿಗೆ ಚಿರ ಪರಿಚಿತರು. 'ಮೇಘವೆ ಮೇಘವೆ', ವಿನಾಯಕರ ಗೆಳೆಯರ ಬಳಗ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ನಾಗೇಂದ್ರ ಪ್ರಸಾದ್, ಗೀತ ರಚನೆಕಾರರಾಗಿ ಕನ್ನಡಿಗರ ಮನ ಗೆದಿದ್ದಾರೆ.

ಗಜ ಚಿತ್ರದ ಜಲ ಜಲ ಜಲ ಜಲಜಾಕ್ಷಿ, ಹುಡುಗರು ಚಿತ್ರದ ಶಂಭೋ ಶಿವ ಶಂಭೋ, ಸಾರಥಿ ಚಿತ್ರದ ಅತಿರಥ ಮಹಾರಥ ಸಾರಥಿ, ಕರಿಯ ಚಿತ್ರದ ಹೃದಯದ ಒಳಗೆ ಹೃದಯವಿದೆ ಮುಂತಾದ ಗೀತೆಗಳನ್ನು ನೀವು ನೆನೆಪು ಮಾಡಿಕೊಂಡರೆ ನಾಗೇಂದ್ರ ಪ್ರಸಾದ್ ಅವರನ್ನು ಮರೆಯುವಂತಿಲ್ಲ.

ಹೀಗೆ ಹಿಟ್ ಗೀತೆಗಳ ಮೂಲಕ ಕನ್ನಡಿಗರ ಮನೆ ಗೆದ್ದಿರುವ ನಾಗೇಂದ್ರ ಪ್ರಸಾದ್, ಚುನಾವಣೆ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರ ಜನಪ್ರಿಯತೆ ಚುನಾವಣೆಯಲ್ಲಿ ಗೆಲುವು ತಂದು ಕೊಡಲಿದೆಯೋ ಕಾದು ನೋಡಬೇಕು.

ರಕ್ಷಿತಾಗೆ ಟಿಕೆಟ್ ಡೌಟು : ಬಿಎಸ್ಆರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಉತ್ಸಾಹದಲ್ಲಿರುವ ನಟಿ ರಕ್ಷಿತಾ ಅವರಿಗೆ ಟಿಕೆಟ್ ನೀಡಲು ಪಕ್ಷ ಹಿಂದೇಟು ಹಾಕುತ್ತಿದೆ. ಬೆಂಗಳೂರಿನ ಯಾವ ಕ್ಷೇತ್ರದಿಂದಲೂ ಟಿಕೆಟ್ ನೀಡಲು ನಾಯಕರು ಸಿದ್ಧರಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ರಕ್ಷಿತಾ ಟಿಕೆಟ್ ಪಡೆದಿದ್ದಾರೆ. ಆದರೆ, ಪಕ್ಷ ಬಿಟ್ಟು ಬಿಜೆಪಿಯಿಂದ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆದರೆ, ಆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸುತ್ತಿದೆ. ಆದ್ದರಿಂದ ರಕ್ಷಿತಾಗೆ ಟಿಕೆಟ್ ದೊರೆಯುವುದು ಅನುಮಾನವಾಗಿದೆ ಎಂದು ತಿಳಿದು ಬಂದಿದೆ.


ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Lyrics writer and director V Nagendra Prasad will contest for assembly election from doddaballapur constituency as KJP candidate. In party fourth list party officially announced the Nagendra Prasad name.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada