»   »  ನವೀನ್ ಕೃಷ್ಣರ ನಮಸ್ತೆ ಬೆಂಗಳೂರು

ನವೀನ್ ಕೃಷ್ಣರ ನಮಸ್ತೆ ಬೆಂಗಳೂರು

Subscribe to Filmibeat Kannada

ಶ್ರೀಸಾಯಿರಾಘವೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಭಕ್ತವತ್ಸಲಂ ಅವರು ನಿರ್ಮಿಸುತ್ತಿರುವ ಚಿತ್ರ 'ನಮಸ್ತೆ ಬೆಂಗಳೂರು'. ವಿಭಿನ್ನ ಶೀರ್ಷಿಕೆಯ ಈ ಚಿತ್ರಕ್ಕೆ ಈಗ ಶೇಷಾದ್ರಿಪುರಂನಲ್ಲಿರುವ ಡಿಯಾ ಸ್ಟೂಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ.

ಶ್ರೀದೇವಿ ಅವರು ಬರೆದಿರುವ 'ಡಿಂಗು ಮಜಾ ಡಿಂಗು ಮಜಾ - ನಂಗೂ ಮಜಾ ನಿಂಗೂ ಮಜಾ' ಹಾಗೂ ವೇದಾಂತ್ ರಚಿಸಿರುವ 'ಬಾರೇ ನೀ ಬಾರೆ ಮೈಡೊಂಕಿನ ವೈಯ್ಯಾರಿ' ಎಂಬ ಗೀತೆಗಳು ಚಿತ್ರಕ್ಕೆ ಸಂಗೀತ ನೀಡುತ್ತಿರುವ ರಾಜ್‌ಭಾಸ್ಕರ್ ಅವರ ಸಾರಥ್ಯದಲ್ಲಿ ಧ್ವನಿಮುದ್ರಣಗೊಂಡಿವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪ್ರಸ್ತುತ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಈ ಕಥಾನಕವನ್ನು ವಿರೂಪಾಕ್ಷ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಇವರು ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ. ಡಿ.ವಿ.ರಾಜು ಕ್ಯಾಮೆರಾ, ಎಸ್.ಮನೋಹರ್ ಸಂಕಲನ, ಜಾಲಿಬಾಸ್ಟಿನ್ ಸಾಹಸ, ರಮೇಶ್ ನಿರ್ಮಾಣ ನಿರ್ವಹಣೆ ಹಾಗೂ ಪ್ರಶಾಂತ್ ನಿರ್ಮಾಣ ಮೇಲ್ವಿಚಾರಣೆ ಈ ಚಿತ್ರಕ್ಕಿದೆ.

ತಮ್ಮ ಅಮೋಘ ಅಭಿನಯದಿಂದ ಖ್ಯಾತರಾಗಿರುವ ನವೀನ್‌ಕೃಷ್ಣ 'ನಮಸ್ತೆ ಬೆಂಗಳೂರು' ಚಿತ್ರದ ನಾಯಕ. ರಂಜಿತಾ ಚಿತ್ರದನಾಯಕಿ. ಶ್ರೀನಿವಾಸಮೂರ್ತಿ, ರವಿ, ಸಂಗೀತಾ, ಮನೋಜ್, ರೇಖಾದಾಸ್, ಬುಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್, ಸ್ವಸ್ತಿಕ್ ಶಂಕರ್, ಡಿಂಗ್ರಿ ನಾಗರಾಜ್ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada