For Quick Alerts
  ALLOW NOTIFICATIONS  
  For Daily Alerts

  ಪ್ರಥಮ್ ಇನ್ಮುಂದೆ 'ಪಿ ಬಾಸ್': ಬರ್ತಡೇಗೆ ಕಾದಿದೆ ಇನ್ನೊಂದು ಸರ್ಪ್ರೈಸ್.!

  |

  ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ಕೈಯಲ್ಲಿ 'ನಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿಸಿ ಇಡೀ ಇಂಡಸ್ಟ್ರಿಯ ಅಚ್ಚರಿಗೊಳಿಸಿದ್ದ ಪ್ರಥಮ್ ಈಗ ಇನ್ನೊಂದು ಸರ್ಪ್ರೈಸ್ ಕೊಡ್ತಿದ್ದಾರೆ.

  ಡಿ ಬಾಸ್, ವೈ ಬಾಸ್, ಅಪ್ಪು ಬಾಸ್, ಶಿವಣ್ಣ ಬಾಸ್ ಇದ್ದಂತೆ ಇನ್ಮುಂದೆ ಪಿ ಬಾಸ್ ಕೂಡ ಎಂಟ್ರಿಯಾಗ್ತಿದ್ದಾರೆ. ಹೌದು, ಪ್ರಥಮ್ ಇನ್ಮುಂದೆ ಪಿ ಬಾಸ್ ಆಗಿ ಪ್ರಮೋಟ್ ಆಗಿದ್ದಾರೆ. ರಾಜಕಾರಣಿಗಳು, ಸಿನಿ ಸ್ಟಾರ್ ಗಳು ಪ್ರಥಮ್ ಅವರನ್ನ ಪಿ ಬಾಸ್ ಎಂದೇ ಕರೆಯುತ್ತಿದ್ದಾರೆ.

  ಈಗ ವಿಷ್ಯ ಏನಪ್ಪಾ ಅಂದ್ರೆ ನಾಳೆ ಪ್ರಥಮ್ ಅವರ ಹುಟ್ಟುಹಬ್ಬವಿದ್ದು, ಅದೇ ಸಂತಸದಲ್ಲಿ ನಟಭಯಂಕರ ಚಿತ್ರದ ಟೀಸರ್ ರಿಲೀಸ್ ಆಗ್ತಿದೆ. ಈಗಾಗಲೇ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅವರು ನಟಭಯಂಕರ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಕೊನೆಗೂ 'ದರ್ಶನ್ ಗಿಂತ ದೊಡ್ಡ ಸ್ಟಾರ್' ಕೈಯಲ್ಲಿ ಪೋಸ್ಟರ್ ರಿಲೀಸ್ ಮಾಡಿದ ಪ್ರಥಮ್

  ದರ್ಶನ್ ಅವರ ತಾಯಿ ಮೀನಾ ತೂಗುದೀಪ, ಸಂಸದೆ ಶೋಭ ಕರಂದ್ಲಾಜೆ, ಬಿಎಸ್ ಯಡಿಯೂರಪ್ಪ, ಸದಾನಂದ ಗೌಡ, ಈಶ್ವರಪ್ಪ, ಅಕುಲ್ ಬಾಲಾಜಿ ಸೇರಿದಂತೆ ಹಲವರು ನಟಭಯಂಕರ ಟೀಸರ್ ನೋಡಿ ಥ್ರಿಲ್ ಆಗಿ ಪಿ ಬಾಸ್ ಗೆ ವಿಶ್ ಮಾಡಿದ್ದಾರೆ.

  ನಟಭಯಂಕರ ಚಿತ್ರದಲ್ಲಿ ಪ್ರಥಮ್ ನಾಯಕನಾಗಿದ್ದು, ಜೊತೆಗೆ ತಾವೇ ನಿರ್ದೇಶನ ಮಾಡ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ದೇವ್ರಂಥ ಮನುಷ್ಯ, ಎಂಎಲ್ಎ ಚಿತ್ರಗಳಲ್ಲಿ ನಟಿಸಿರುವ ಪಿ ಬಾಸ್ ಈಗ ನಟಭಯಂಕರ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ.

  ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ಬಿಗ್ ಬಾಸ್' ಪ್ರಥಮ್

  ಚಿತ್ರದ ಪ್ರಮುಖ ಪಾತ್ರವೊಂದನ್ನ ಹಿರಿಯ ನಟ ಶಂಕರ್ ಅಶ್ವತ್ ಅವರಿಂದ ಮಾಡಿಸುವ ಮಾತುಕತೆ ನಡೆಸಿದ್ದಾರಂತೆ ಪ್ರಥಮ್. ಅದರ ಜೊತೆಗೆ ಹಿರಿಯ ನಟಿ ಲೀಲಾವತಿ ಅವರನ್ನ ಕೂಡ ನಟಭಯಂಕರ ಚಿತ್ರದಲ್ಲಿ ನಟಿಸಲು ಒಪ್ಪಿಸಿ ಕರೆತರ್ತಿದ್ದಾರೆ. ಈಗಾಗಲೇ ಭರ್ಜರಿ ಬೇಡಿಕೆ ಮೊತ್ತಕ್ಕೆ ನಟಭಯಂಕರ ಆಡಿಯೋ ಹಕ್ಕುಗಳು ಲಹರಿ ಸಂಸ್ಥೆಗೆ ಮಾರಾಟವಾಗಿದೆ. ಒಟ್ನಲ್ಲಿ ತಮ್ಮ ಸಿನಿಮಾಗಳನ್ನ ವಿಭಿನ್ನ ಪ್ರಚಾರ ಮಾಡಿ ಜನರ ಮುಂದೆ ತರುವ ಒಳ್ಳೆ ಹುಡುಗ ಈ ಸಲ ದೊಡ್ಡ ಸ್ಕೆಚ್ ಹಾಕ್ಕೊಂಡು ಬರ್ತಿದ್ದಾರೆ.

  English summary
  Biggboss fame pratham starrer nata bhayankara movie teaser will released tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X