For Quick Alerts
  ALLOW NOTIFICATIONS  
  For Daily Alerts

  'ನಟಸಾರ್ವಭೌಮ' ಮೊಟ್ಟ ಮೊದಲ ಶೋ ಇಂದು ರಾತ್ರಿ 9.45ಕ್ಕೆ.!

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ನಾಳೆ ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಸಹಜವಾಗಿ ದೊಡ್ಡ ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ ಮಿಡ್ ನೈಟ್ ಶೋ ಮಾಡೋದು ಕಾಮನ್. ಆದ್ರೆ, ಅಪ್ಪು ಅಭಿಮಾನಿಗಳು ಅದಕ್ಕಿಂತ ಇನ್ನೊಂದು ಹಂತ ಮುಂದೆ ಹೋಗಿದ್ದಾರೆ.

  ಹೌದು, ಫೆಬ್ರವರಿ 7 ರಂದು ನಟಸಾರ್ವಭೌಮ ತೆರೆಕಾಣುತ್ತಿದ್ದರೇ ಅದಕ್ಕಿಂತ ಒಂದು ದಿನ ಮುಂಚೆಯೇ ಫ್ಯಾನ್ಸ್ ಶೋ ಆಯೋಜಿಸಿದ್ದಾರೆ. ಅಂದ್ರೆ, ಇದು ಮಿಡ್ ನೈಟ್ ಶೋ ಅಲ್ಲ. ಫೆಬ್ರವರಿ 6 ರಂದು ರಾತ್ರಿ ನಡೆಯಲಿರುವ ಶೋ ಆಗಲಿದೆ.

  ಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕುಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕು

  ಅಲ್ಲಿಗೆ ಒಂದು ದಿನ ಮುಂಚೆಯೇ ಪುನೀತ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಸಿನಿಮಾ ನೋಡಲಿದ್ದಾರೆ. ಇಂತಹ ಅಭಿಮಾನದ ಶೋ ಬೆಂಗಳೂರಿನ ಖ್ಯಾತ ಚಿತ್ರಮಂದಿರದಲ್ಲಿ ಆಯೋಜನೆಯಾಗಿದೆ. ಅಷ್ಟಕ್ಕೂ, ಯಾವ ಥಿಯೇಟರ್, ಎಷ್ಟು ಗಂಟೆಗೆ? ಮುಂದೆ ಓದಿ.....

  ಪ್ರಸನ್ನ ಥಿಯೇಟರ್ ನಲ್ಲಿ ಪ್ರೀಮಿಯರ್ ಶೋ

  ಪ್ರಸನ್ನ ಥಿಯೇಟರ್ ನಲ್ಲಿ ಪ್ರೀಮಿಯರ್ ಶೋ

  ನಟಸಾರ್ವಭೌಮ ಸಿನಿಮಾ ನಾಳೆ ಅಂದ್ರೆ, ಇಂದು ಮಧ್ಯರಾತ್ರಿ 12 ಗಂಟೆಗೆ ಮೊದಲ ಶೋ ಆಗಬೇಕಿತ್ತು. ಆದ್ರೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ರಾತ್ರಿ 9.45ಕ್ಕೆ ಮೊಟ್ಟ ಮೊದಲ ಶೋ ನಡೆಯಲಿದೆ.

  Interview: 'ನಟಸಾರ್ವಭೌಮ'ನ ರಹಸ್ಯ ಬಿಚ್ಚಿಟ್ಟ ರಚಿತಾ ರಾಮ್Interview: 'ನಟಸಾರ್ವಭೌಮ'ನ ರಹಸ್ಯ ಬಿಚ್ಚಿಟ್ಟ ರಚಿತಾ ರಾಮ್

  ಸಿಂಗಲ್ ಸ್ಕ್ರೀನ್ ನಲ್ಲಿ ಮೊದಲ ಪ್ರೀಮಿಯರ್

  ಸಿಂಗಲ್ ಸ್ಕ್ರೀನ್ ನಲ್ಲಿ ಮೊದಲ ಪ್ರೀಮಿಯರ್

  ಸಹಜವಾಗಿ ಸಿನಿಮಾ ಅಧಿಕೃತವಾಗಿ ರಿಲೀಸ್ ಆಗುವುದಕ್ಕೂ ಮುಂಚೆ ಕೆಲವು ಮಾಲ್ ಗಳಲ್ಲಿ ವಿಶೇಷ ಪ್ರದರ್ಶನ ಮಾಡುವುದುಂಟು. ಆದ್ರೆ, ಇದನ್ನ ಸ್ವತಃ ಚಿತ್ರತಂಡವೇ ಆಯೋಜನೆ ಮಾಡುತ್ತೆ. ಕೇವಲ ವಿಐಪಿಗಳಿಗಾಗಿ ಶೋ ಮಾಡುತ್ತೆ. ಆದ್ರೆ, ಇದೇ ಮೊದಲ ಬಾರಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಒಂದು ದಿನಕ್ಕೂ ಮುಂಚೆ ಪ್ರೀಮಿಯರ್ ಶೋ ಆಗ್ತಿದೆ.

  ಅಪ್ಪು ಲೈಫ್ ನಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದುಅಪ್ಪು ಲೈಫ್ ನಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದು

  ಊರ್ವಶಿಯಲ್ಲಿ 24/7 ಶೋ

  ಊರ್ವಶಿಯಲ್ಲಿ 24/7 ಶೋ

  ಲಾಲ್ ಬಾಗ್ ಬಳಿ ಇರುವ ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಸತತ 24 ಗಂಟೆಯೂ ನಟಸಾರ್ವಭೌಮ ಸಿನಿಮಾ ಪ್ರದರ್ಶನವಾಗಲಿದೆ ಎಂಬ ಮಾತಿದೆ. ಆದ್ರೆ, ಅಧಿಕೃತವಾಗಿ ಆರು ಶೋ ಮಾತ್ರವಿದ್ದು, ಉಳಿದ ಎಲ್ಲ ಶೋಗಳು ಫ್ಯಾನ್ಸ್ ಶೋ ಆಗಲಿದೆ.

  ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' 24 ಗಂಟೆಗಳ ನಿರಂತರ ಪ್ರದರ್ಶನಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' 24 ಗಂಟೆಗಳ ನಿರಂತರ ಪ್ರದರ್ಶನ

  ಅನೇಕ ಕಡೆ ಮಿಡ್ ನೈಟ್ ಶೋ

  ಅನೇಕ ಕಡೆ ಮಿಡ್ ನೈಟ್ ಶೋ

  ಕೇವಲ ಊರ್ವಶಿ ಚಿತ್ರಮಂದಿರದಲ್ಲಿ ಮಾತ್ರವಲ್ಲ, ರಾಜ್ಯದ ಹಲವು ಕಡೆ ಇಂದು ಮಧ್ಯರಾತ್ರಿ 12 ಗಂಟೆಗೆ ಪುನೀತ್ ಸಿನಿಮಾ ರಿಲೀಸ್ ಆಗಲಿದೆ. ಪುನೀತ್ ಅಭಿನಯಿಸಿರುವ ಈ ಚಿತ್ರವನ್ನ ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.

  English summary
  Due to pressure from fans, Prasanna theatre on Magadi Road screening Nata saarvabhowma today at 9.45pm. Yes Wednesday 9.45pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X