»   » ಈ ತಿಂಗಳಾಂತ್ಯಕ್ಕೆ 'ನಾನು ಅವನಲ್ಲ, ಅವಳು' ನಿಮ್ಮ ಮುಂದೆ

ಈ ತಿಂಗಳಾಂತ್ಯಕ್ಕೆ 'ನಾನು ಅವನಲ್ಲ, ಅವಳು' ನಿಮ್ಮ ಮುಂದೆ

Posted By:
Subscribe to Filmibeat Kannada

62ನೇ ಸಾಲಿನ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿಕೊಂಡ ಖ್ಯಾತ ಕನ್ನಡದ 'ನಾನು ಅವನಲ್ಲ, ಅವಳು' ಚಿತ್ರ ಸದ್ಯದಲ್ಲೇ ನಿಮ್ಮೆದುರಿಗೆ ಬರಲಿದೆ.

ಹೌದು, ಸೆಪ್ಟೆಂಬರ್ 25ನೇ ತಾರೀಖು 'ನಾನು ಅವನಲ್ಲ, ಅವಳು' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. [ರಾಷ್ಟ್ರ ಪ್ರಶಸ್ತಿ ಪಡೆದ 'ನಾನು ಅವನಲ್ಲ, ಅವಳು' ಚಿತ್ರ ಕುರಿತು]


naanu avanalla avalu

ನಿರ್ದೇಶಕ ಬಿ.ಎಸ್.ಲಿಂಗದೇವರು ಇದೇ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿಯರ ಕುರಿತು ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಲೈಂಗಿಕ ಅಲ್ಪಸಂಖ್ಯಾತೆ ವಿದ್ಯಾ ಅವರು ಬರೆದಿರುವ 'I am Vidya' ಕೃತಿಯ ಸಿನಿಮಾ ರೂಪಾಂತರ 'ನಾನು ಅವನಲ್ಲ, ಅವಳು'.


ಟಿವಿ ಧಾರಾವಾಹಿಗಳ ಜನಪ್ರಿಯ ನಿರ್ಮಾಪಕರಾದ ರವಿ ಗರಣಿ ಈ ಚಿತ್ರದ ನಿರ್ಮಾಪಕ. 150ಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರು ಈ ಚಿತ್ರದಲ್ಲಿ ನಟಿಸಿದ್ದಾರೆ. [ಶಿವರಾಜ್ ಕುಮಾರ್ ಮೆಚ್ಚಿದ 'ನಾನು ಅವನಲ್ಲ, ಅವಳು']


ಮಂಗಳಮುಖಿ ಪಾತ್ರದಲ್ಲಿ ಸಂಚಾರಿ ವಿಜಯ್ ನೀಡಿರುವ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಅವರ ನಟನೆ ಹೇಗೆ ಮೂಡಿಬಂದಿದೆ ಅಂತ ನೀವು ಕಣ್ಣಾರೆ ನೋಡುವುದಕ್ಕೆ ಸೆಪ್ಟೆಂಬರ್ 25ರವರೆಗೂ ವೇಯ್ಟ್ ಮಾಡಿ.

English summary
National Award winning 'Naanu avanalla Avalu' movie is all set to release on September 25th. B.S.Lingadevaru directorial 'Naanu avanalla Avalu' features Sanchari Vijay in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada