For Quick Alerts
  ALLOW NOTIFICATIONS  
  For Daily Alerts

  'ಬಿಗಿಲ್' ಬಗ್ಗೆ ನೆಗಿಟಿವ್ ಪ್ರಚಾರಕ್ಕೆ ಇಳಿದ್ರಾ ಆ ಸ್ಟಾರ್ ನಟನ ಅಭಿಮಾನಿಗಳು?

  |

  ಸಿನಿಮಾ ಚೆನ್ನಾಗಿದ್ದರೂ ಚೆನ್ನಾಗಿಲ್ಲ ಎಂದು ನೆಗಿಟಿವ್ ಪ್ರಚಾರ ಮಾಡುವ ಸಂಸ್ಕೃತಿ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡ್ತಿದೆ. ಉದ್ದೇಶಪೂರ್ವಕವಾಗಿ ಕೆಲವು ಚಿತ್ರಗಳ ವಿರುದ್ಧ ಅಪಪ್ರಚಾರ ಮಾಡುವ ಗುಂಪು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

  ಕನ್ನಡದಲ್ಲಿ ಪೈಲ್ವಾನ್ ಸಿನಿಮಾ ತೆರೆಕಂಡಾಗ ಇಂತಹದೊಂದು ವಿಷಯ ಭಾರಿ ಸದ್ದು ಮಾಡಿತ್ತು. ಪೈಲ್ವಾನ್ ಚಿತ್ರ ಚೆನ್ನಾಗಿಲ್ಲ ಎಂದು ರಿಲೀಸ್ ಆದ ದಿನದಿಂದಲೇ ನೆಗಿಟಿವ್ ಪ್ರಚಾರ ಆರಂಭಿಸಿದ್ದರು ಎಂದು ಸ್ವತಃ ಚಿತ್ರತಂಡ ಆರೋಪಿಸಿತ್ತು.

  'ಬಿಗಿಲ್' ಮಧ್ಯರಾತ್ರಿ ಶೋ ರದ್ದು: ಬೆಂಕಿಯಿಟ್ಟು ವಿಜಯ್ ಅಭಿಮಾನಿಗಳು ಆಕ್ರೋಶ'ಬಿಗಿಲ್' ಮಧ್ಯರಾತ್ರಿ ಶೋ ರದ್ದು: ಬೆಂಕಿಯಿಟ್ಟು ವಿಜಯ್ ಅಭಿಮಾನಿಗಳು ಆಕ್ರೋಶ

  ಇದೀಗ, ಇಂತಹ ಸಂಸ್ಕೃತಿ ತಮಿಳು ಇಂಡಸ್ಟ್ರಿಯಲ್ಲೂ ಸುದ್ದಿ ಮಾಡಿದೆ. ವಿಜಯ್ ನಟಿಸಿರುವ 'ಬಿಗಿಲ್' ಸಿನಿಮಾ ತೆರೆಕಂಡಿದ್ದು, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬಿಗಿಲ್ ಸಿನಿಮಾ ಸೋತಿದೆ ಎಂದು ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಲಾಗುತ್ತಿದೆ. ಈ ಆರೋಪ ಈಗ ಸ್ಟಾರ್ ನಟನ ಅಭಿಮಾನಿಗಳ ವಿರುದ್ಧ ಕೇಳಿಬರುತ್ತಿದೆ. ಮುಂದೆ ಓದಿ.....?

  #BigilDisaster ಟ್ರೆಂಡಿಂಗ್

  #BigilDisaster ಟ್ರೆಂಡಿಂಗ್

  #BigilDisaster ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಟ್ ಆಗಿದೆ. ಇದಕ್ಕೆ ಕಾರಣ ತಮಿಳು ನಟ ಅಜಿತ್ ಫ್ಯಾನ್ಸ್ ಎಂದು ಹೇಳಲಾಗುತ್ತಿದೆ. ಸಿನಿಮಾ ನೋಡಿ ಬಂದ ಅಭಿಮಾನಿಗಳು ಥಿಯೇಟರ್ ಬಳಿ ಗಲಾಟೆ ಮಾಡಿರುವುದು, ಪೋಸ್ಟರ್ ಕಿತ್ತು ಎಸೆದಿರುವ ದೃಶ್ಯಗಳು ವೈರಲ್ ಆಗಿದೆ. ಬಿಗಿಲ್ ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.

  'ಸರ್ಕಾರ್' ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಸೋತ 'ಬಿಗಿಲ್''ಸರ್ಕಾರ್' ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಸೋತ 'ಬಿಗಿಲ್'

   ಭಾರಿ ನಷ್ಟ ಸಾಧ್ಯತೆ

  ಭಾರಿ ನಷ್ಟ ಸಾಧ್ಯತೆ

  ಬಿಗಿಲ್ ಸಿನಿಮಾಗೆ ಭಾರಿ ನಷ್ಟ ಸಾಧ್ಯತೆ ಇದೆ. ಆಂಧ್ರ-ತೆಲಂಗಾಣದಲ್ಲಿ ಶೇಕಡಾ 90 ರಷ್ಟು ಜನರಿಗೆ ಬಿಗಿಲ್ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿಯೇ ಇಲ್ಲ. ಸಿನಿಮಾ ರಿಲೀಸ್ ಆದ್ಮೇಲೂ ಪಾಸಿಟೀವ್ ಟಾಕ್ ಇಲ್ಲ. ಬಿಡುಗಡೆಗೆ ಮುಂಚೆ ಇದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಪ್ರಚಾರ ಆಗುತ್ತಿದೆಯಂತೆ.

  ವಿಜಯ್ ವರ್ಸಸ್ ಅಜಿತ್

  ವಿಜಯ್ ವರ್ಸಸ್ ಅಜಿತ್

  ತಮಿಳುನಾಡಿನಲ್ಲಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳ ನಡುವೆ ಮೊದಲಿನಿಂದಲೂ ಫ್ಯಾನ್ಸ್ ವಾರ್ ನಡೆಯುತ್ತಲೇ ಇದೆ. ರಜನಿಕಾಂತ್ ಬಳಿಕ ಮುಂದಿನ ಸೂಪರ್ ಸ್ಟಾರ್ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುವ ಕಾಲಿವುಡ್ ಅಭಿಮಾನಿಗಳು ಅಜಿತ್ ಮತ್ತು ವಿಜಯ್ ಇಬ್ಬರಲ್ಲಿ ಯಾರು ಶ್ರೇಷ್ಠ ಎಂದು ಚರ್ಚೆ ಮಾಡ್ತಿದ್ದಾರೆ. ಇದರ ಪರಿಣಾಮ ಇಷ್ಟೆಲ್ಲಾ ಫ್ಯಾನ್ಸ್ ವಾರ್ ಆಗಲು ದಾರಿ ಮಾಡಿದೆ.

  'ಬಿಗಿಲ್' ಮೊದಲ ದಿನದ ಗಳಿಕೆ

  'ಬಿಗಿಲ್' ಮೊದಲ ದಿನದ ಗಳಿಕೆ

  ಮೊದಲ ದಿನದ ಗಳಿಕೆಯಲ್ಲಿ ವಿಜಯ್ ಸಿನಿಮಾಗಳು ಮೇಲಿಂದ ಕೆಳಗೆ ಹೋಗುತ್ತಿದೆ ಎನ್ನಲಾಗಿದೆ. ಸರ್ಕಾರ್ ಸಿನಿಮಾ 31 ಕೋಟಿ ಬಾಚಿಕೊಂಡಿತ್ತು, ಮೆರ್ಸಲ್ 24 ಕೋಟಿ ಗಳಿಸಿತ್ತು. ಈಗ ಬಿಗಿಲ್ ಸಿನಿಮಾ 22 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.

  English summary
  #BigilDisaster is trending in twitter. Tamil actor Ajith fans are doing all this negative publicity about Bigil? its true?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X