»   » ಮುಂಗಾರು ಮಳೆಯಲ್ಲಿ ಗಣೇಶ್ ಜೊತೆಯಾದ ಕುಡ್ಲದ ಬಾಲೆ

ಮುಂಗಾರು ಮಳೆಯಲ್ಲಿ ಗಣೇಶ್ ಜೊತೆಯಾದ ಕುಡ್ಲದ ಬಾಲೆ

Posted By:
Subscribe to Filmibeat Kannada

2006 ಡಿಸೆಂಬರ್ 26ರಂದು ತೆರೆ ಕಂಡಿದ್ದ ನಿರ್ದೇಶಕ ಯೋಗರಾಜ ಭಟ್ಟರ ಅದ್ಭುತ ಚಿತ್ರ 'ಮುಂಗಾರು ಮಳೆ' ಎಲ್ಲಾ ಯುವಜನತೆಯಲ್ಲಿ ಸಂಚಲನ ಮೂಡಿಸಿತ್ತು. ಹಾಡುಗಳಂತೂ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಗಣೇಶ್, ಸಂಜನಾ ಗಾಂಧಿ, ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡು ಮಳೆಯಲ್ಲಿ ನೆನೆದಿದ್ದರು.

ಅಂದು ಭಟ್ರು ತಮ್ಮ ಚಿತ್ರಕ್ಕೆ ಹೊಸ ಹುಡುಗಿ ಸಂಜನಾ ಗಾಂಧಿಯನ್ನು ಕರೆತಂದು ಸ್ಯಾಂಡಲ್ ವುಡ್ ಗೆ ಪರಿಚಯ ಮಾಡಿಕೊಟ್ಟಿದ್ದು, ಅದೇ ಸಂಜನಾ ಗಾಂಧಿ ಇದೀಗ ಪೂಜಾ ಗಾಂಧಿಯಾಗಿ ಇತ್ತೀಚೆಗೆ ಗಾಂಧಿನಗರದಲ್ಲಿ ಸುದ್ದಿ ಮಾಡುತ್ತಿರುವುದು. ಎಲ್ಲಾ ನಿಮಗೆ ಗೊತ್ತಿರುವ ವಿಚಾರ ತಾನೇ.


Neha Shetty pair up with Golden star Ganesh in 'Mungaru Male 2'

ಇದೀಗ 2015 ರಲ್ಲಿ ನಿರ್ದೇಶಕ ಶಶಾಂಕ್ ಆಕ್ಷನ್-ಕಟ್ ಹೇಳಲಿರುವ, ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಂಡಿರುವ 'ಮುಂಗಾರು ಮಳೆ 2' ಚಿತ್ರಕ್ಕೆ ನಮ್ಮ ಕರಾವಳಿ ಬೆಡಗಿ 2014ರ 'ಮಿಸ್ ಮಂಗಳೂರು ಚೆಲುವೆ' ನೇಹಾ ಶೆಟ್ಟಿ ಗಣೇಶ್ ಜೊತೆ ಡ್ಯುಯೆಟ್ ಹಾಡಲು ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.


ನಿರ್ದೇಶಕ ಶಶಾಂಕ್ ತಮ್ಮ ಚಿತ್ರಕ್ಕೆ ಗ್ಲಾಮರಸ್ ಲುಕ್, ಜೊತೆಗೆ ಸ್ಟೈಲೀಷ್ ಆಗಿರುವ ಹೊಸ ಹುಡುಗಿಯ ಹುಡುಕಾಟದಲ್ಲಿದ್ದರು. ಅಡೀಷನ್ ಸಂದರ್ಭದಲ್ಲಿ ಕೊನೆಯದಾಗಿ 'ಝೀರೋ ಫಿಗರ್' ಸುಂದರಿ, ಕುಡ್ಲದ ಬಾಲೆ ನೇಹಾ ಶೆಟ್ಟಿ ಆಯ್ಕೆಯಾದರು.


Neha Shetty pair up with Golden star Ganesh in 'Mungaru Male 2'

ಇದೀಗ 'ಮುಂಗಾರು ಮಳೆ 2' ಚಿತ್ರಕ್ಕೆ ನಾಯಕಿ ಪಕ್ಕಾ ಆಗಿರುವುದರಿಂದ ಇದೇ ಜುಲೈ 28 ರಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಶಶಾಂಕ್ ಪ್ಲಾನ್ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಬೇಗ ಮುಗಿದರೆ 'ಮುಂಗಾರು ಮಳೆ' ಡಿಸೆಂಬರ್ 26 ರಂದು ರಿಲೀಸ್ ಆದಂತೆ 'ಮುಂಗಾರು ಮಳೆ 2' ರಿಲೀಸ್ ಮಾಡುವ ಆತುರದಲ್ಲಿದೆ ಚಿತ್ರತಂಡ. ಈ ಚಿತ್ರದ ಇನ್ನಷ್ಟು ಸುದ್ದಿಗಾಗಿ ಫಿಲ್ಮಿಬೀಟ್ ಕನ್ನಡ ನೋಡುತ್ತಿರಿ.

English summary
Neha Shetty roped into pair up with Golden star Ganesh in his upcoming 'Mungaru Male 2'.The movie is directed by Shashank of 'Krishna Leela' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada