twitter
    For Quick Alerts
    ALLOW NOTIFICATIONS  
    For Daily Alerts

    ಏನಿದು ಅನ್ಯಾಯ? ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡಿಕ್ಕಿಲ್ಲ ಆದ್ಯತೆ

    |

    ಕೊರೊನಾ ಭೀತಿಯಿಂದಾಗಿ ಚಿತ್ರಮಂದಿರಗಳು ಬಂದ್ ಆಗಿ ಸಿನಿ ಪ್ರೇಮಿಗಳು ಅಮೆಜಾನ್, ನೆಟ್‌ಫ್ಲಿಕ್ಸ್ ಮೊರೆ ಹೋಗಿದ್ದಾರೆ. ಆದರೆ ಹೀಗೆ ಆನ್‌ಲೈನ್‌ ಸೈಟ್‌ಗಳಲ್ಲಿ ಕನ್ನಡ ಸಿನಿಮಾ ಹುಡುಕುವ ಸಿನಿಪ್ರೇಕ್ಷಕರಿಗೆ ನಿರಾಸೆ ಉಂಟಾಗಿದೆ.

    Recommended Video

    ವೆಬ್ ಸಿರೀಸ್ ನಲ್ಲಿ ಸಾಯಿ ಪಲ್ಲವಿ ನಟನೆ | Filmibeat Kannada

    ಅಮೆಜಾನ್‌ ಪ್ರೈಂ ನಲ್ಲಿ ಕೆಲವು ಕನ್ನಡ ಸಿನಿಮಾಗಳು ಲಭ್ಯವಿವೆ ಆದರೆ ಆನ್‌ಲೈನ್ ಸಿನಿಮಾ ದೊಡ್ಡಣ್ಣ ನೆಟ್‌ಫ್ಲಿಕ್ಸ್‌ ನಲ್ಲಿ ಕನ್ನಡಕ್ಕೆ ಆದ್ಯತೆಯೇ ಇಲ್ಲ. ಬೇರೆ ಭಾಷೆಗಳಿಗೆ ಇರುವ ಪ್ರಾದಾನ್ಯತೆ ಕನ್ನಡಕ್ಕೆ ಇರದಿರುವುದು ಅಕ್ಷಮ್ಯ.

    ಕೊರೊನಾ ಭೀತಿಯಿಂದ ಮನೆಯಲ್ಲಿದ್ದೀರಾ? ಅಮೆಜಾನ್‌-ನೆಟ್‌ಫ್ಲಿಕ್ಸ್‌ಗಳಲ್ಲಿ ಈ ಸಿನಿಮಾಗಳನ್ನು ನೋಡಿರಿಕೊರೊನಾ ಭೀತಿಯಿಂದ ಮನೆಯಲ್ಲಿದ್ದೀರಾ? ಅಮೆಜಾನ್‌-ನೆಟ್‌ಫ್ಲಿಕ್ಸ್‌ಗಳಲ್ಲಿ ಈ ಸಿನಿಮಾಗಳನ್ನು ನೋಡಿರಿ

    ಹೌದು, ನೆಟ್‌ಫ್ಲಿಕ್ಸ್‌ನಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಕನ್ನಡ ಸಿನಿಮಾಗಳಿವೆ. ಅವೂ ಸಹ ಕಳೆದ 2018 ಅಥವಾ ಅದಕ್ಕಿಂತಲೂ ಹಿಂದೆ ಬಿಡುಗಡೆ ಆಗಿರುವ ಸಿನಿಮಾಗಳು ಮಾತ್ರವೇ ಇವೆ. ಇದು ಕನ್ನಡ ಸಿನಿಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

    ಕನ್ನಡ ಆಯ್ಕೆಯನ್ನೇ ಕೊಟ್ಟಿಲ್ಲ ನೆಟ್‌ಫ್ಲಿಕ್ಸ್‌

    ಕನ್ನಡ ಆಯ್ಕೆಯನ್ನೇ ಕೊಟ್ಟಿಲ್ಲ ನೆಟ್‌ಫ್ಲಿಕ್ಸ್‌

    ನೆಟ್‌ಫ್ಲಿಕ್ಸ್‌ ನಲ್ಲಿ ಕನ್ನಡ ಸಿನಿಮಾಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಇವೆ. 'ಜೋನರ್' ಆಯ್ಕೆ ಅಡಿಯಲ್ಲಿ ಹಿಂದಿ, ಮರಾಠಿ, ಬೆಂಗಾಳಿ, ತೆಲುಗು, ತಮಿಳು, ಮಲೆಯಾಳಂ ಆಯ್ಕೆಗಳನ್ನು ನೀಡಿರುವ ನೆಟ್‌ಫ್ಲಿಕ್ಸ್‌ ಕನ್ನಡ ಆಯ್ಕೆಯನ್ನೇ ನೀಡಿಲ್ಲ.

    ಬೆರಳೆಣಿಕೆಯಷ್ಟು ಮಾತ್ರವೇ ಸಿನಿಮಾಗಳಿವೆ

    ಬೆರಳೆಣಿಕೆಯಷ್ಟು ಮಾತ್ರವೇ ಸಿನಿಮಾಗಳಿವೆ

    'ಒಂದು ಮೊಟ್ಟೆಯ ಕತೆ', ತಿಥಿ, 'ಯೂ ಟರ್ನ್‌', 'ನಾತಿಚರಾಮಿ', 'ಶುದ್ಧಿ', 'ಆಯನ್', 'ಉರ್ವಿ', 'ಹೊಂಬಣ್ಣ' ಸಿನಿಮಾಗಳು ಮಾತ್ರವೇ ನೆಟ್‌ಫ್ಲಿಕ್ಸ್‌ನಲ್ಲಿ ಇವೆ. ಬೇರೆ ಯಾವ ಕನ್ನಡ ಸಿನಿಮಾಗಳೂ ಸಹ ಇಲ್ಲ. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಸಿನಿಮಾಗಳು ಸಹ ಕನ್ನಡದಲ್ಲಿ ಇಲ್ಲದಿರುವುದು ಆಶ್ಚರ್ಯ.

    ಕೆಲ ಒಳ್ಳೆಯ ಕನ್ನಡ ಸಿನಿಮಾಗಳು ಅಮೆಜಾನ್‌ ಪ್ರೈಂ ನಲ್ಲಿವೆ

    ಕೆಲ ಒಳ್ಳೆಯ ಕನ್ನಡ ಸಿನಿಮಾಗಳು ಅಮೆಜಾನ್‌ ಪ್ರೈಂ ನಲ್ಲಿವೆ

    ಅಮೆಜಾನ್‌ ಪ್ರೈಂ ನಲ್ಲಿ ಕೆಲ ಒಳ್ಳೆಯ ಕನ್ನಡ ಸಿನಿಮಾಗಳು ಇವೆ. ಇತ್ತೀಚೆಗೆ ಬಿಡುಗಡೆ ಆದ ದಿಯಾ ಮತ್ತು ಲವ್ ಮಾಕ್‌ಟೇಲ್‌ ಗಳು ಅಮೆಜಾನ್‌ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿವೆ. ನಿಜಕ್ಕೆ ಚಿತ್ರಮಂದಿರಕ್ಕಿಂತಲೂ ಅಮೆಜಾನ್‌ ಪ್ರೈಂ ನಲ್ಲಿಯೇ ಈ ಎರಡೂ ಸಿನಿಮಾಗಳನ್ನು ಹೆಚ್ಚಿನ ಜನ ನೋಡಿದ್ದಾರೆ.

    ಡಬ್ಬಿಂಗ್ ಹಾವಳಿ ಇಲ್ಲೂ ಬಿಟ್ಟಿಲ್ಲ

    ಡಬ್ಬಿಂಗ್ ಹಾವಳಿ ಇಲ್ಲೂ ಬಿಟ್ಟಿಲ್ಲ

    ಉಳಿದಂತೆ ಅವನೇ ಶ್ರೀಮನ್ನಾರಾಯಣ, ಒಡೆಯಾ, 99 ನಂತಹಾ ಕೆಲವು ಇತ್ತೀಚಿನ ಸಿನಿಮಾಗಳು ಇವೆ. ಆದರೆ ಇಲ್ಲಿಯೂ ಡಬ್ಬಿಂಗ್ ಕನ್ನಡದ ಬೆನ್ನು ಬಿಟ್ಟಿಲ್ಲ. ತೆಲುಗು-ತಮಿಳು ವಿಭಾಗಗಳಲ್ಲಿ ಇರುವ ಸಿನಿಮಾಗಳೇ ಕನ್ನಡ ವಿಭಾಗದಲ್ಲಿಯೂ ಡಬ್ಬಿಂಗ್ ಅವತರಣಿಕೆಯಾಗಿ ಕಾಣಿಸಿಕೊಂಡಿವೆ.

    ಗೆದ್ದ ಚಿತ್ರಗಳನ್ನಷ್ಟೆ ಕೊಳ್ಳುತ್ತಾರೆ: ನಿರ್ಮಾಪಕರ ಬೇಸರ

    ಗೆದ್ದ ಚಿತ್ರಗಳನ್ನಷ್ಟೆ ಕೊಳ್ಳುತ್ತಾರೆ: ನಿರ್ಮಾಪಕರ ಬೇಸರ

    ನಿರ್ಮಾಪಕರ ಪ್ರಕಾರ, ಅಮೆಜಾನ್‌ ನವರು ಮೊದಲಿಗೆ ತಾವೇ ಮುಂದೆ ಬಂದು ಸಿನಿಮಾಗಳನ್ನು ಕೊಳ್ಳುತ್ತಿದ್ದರು. ಆದರೆ ಈಗ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಓಡಿದ ಚಿತ್ರಗಳನ್ನು ಮಾತ್ರವೇ ಕೊಳ್ಳುತ್ತಾರಂತೆ. ಈಗಾಗಲೇ ಚಿತ್ರಮಂದಿರಗಳಲ್ಲಿ ನೋಡಿದ ಚಿತ್ರವನ್ನು ಅಪ್ಲಿಕೇಶನ್‌ನಲ್ಲಿ ಏಕೆ ನೋಡುತ್ತಾರೆ. ಅಲ್ಪ-ಸ್ವಲ್ಪ ಓಡಿದ, ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ಚಿತ್ರವನ್ನು ಕೊಳ್ಳುವ ಪ್ರಯತ್ನ ಅಮೆಜಾನ್‌ ನವರು ಮಾಡುತ್ತಿಲ್ಲ ಎಂಬುದು ಅವರ ಬೇಸರ.

    English summary
    Netflix not giving prefrence to Kannada language movies at all. There only few Kannada movies in Netflix.
    Tuesday, March 17, 2020, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X