For Quick Alerts
  ALLOW NOTIFICATIONS  
  For Daily Alerts

  ಇಂದ್ರಜಿತ್ ಲಂಕೇಶ್ 'ಡ್ರಗ್ಸ್' ಆರೋಪ: ಇಷ್ಟು ದಿನ ಏಕೆ ಸುಮ್ಮನೆ ಇದ್ರಿ ಸಾರ್?

  |

  ಕನ್ನಡ ಚಿತ್ರರಂಗದಲ್ಲಿ ಕೆಲವು ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಸೇವನೆ ಮಾಡುತ್ತಾರೆ, ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ, ಪಾರ್ಟಿಗಳಲ್ಲಿ ನಶೆ ಏರಿಸಿಕೊಂಡು ಎಂಜಾಯ್ ಮಾಡ್ತಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಇಂದ್ರಜಿತ್ ಅವರ ಆರೋಪದ ಬಳಿಕ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಆಘಾತಗೊಂಡಿದ್ದಾರೆ. ಕೆಲವು ಇಂದ್ರಜಿತ್ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ಅವರ ಬಳಿ ಸಾಕ್ಷ್ಯ ಇದ್ದರೆ ಕೊಡಲಿ, ಕಾನೂನಿ ಪ್ರಕಾರ ಶಿಕ್ಷೆಯಾಗುತ್ತೆ, ಸುಮ್ಮನೆ ಇಂಡಸ್ಟ್ರಿಯ ಹೆಸರು ಹಾಳು ಮಾಡುವುದು ಬೇಡ ಎಂದಿದ್ದಾರೆ.

  ಸಿದ್ದಗಂಗಾ ಮಠಕ್ಕೆ ಸುದೀಪ್, ಇಂದ್ರಜಿತ್ ಲಂಕೇಶ್ ಭೇಟಿ: ಡ್ರಗ್ಸ್ ಬಗ್ಗೆ ಕಿಚ್ಚ ಹೇಳಿದ್ದೇನು?ಸಿದ್ದಗಂಗಾ ಮಠಕ್ಕೆ ಸುದೀಪ್, ಇಂದ್ರಜಿತ್ ಲಂಕೇಶ್ ಭೇಟಿ: ಡ್ರಗ್ಸ್ ಬಗ್ಗೆ ಕಿಚ್ಚ ಹೇಳಿದ್ದೇನು?

  ಕನ್ನಡ ಕಲಾವಿದರ ಹೇಳಿಕೆಗಳು, ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಗಳು ಹಾಗೂ ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಗಳ ಆಧಾರದಲ್ಲಿ ನೆಟ್ಟಿಗರು ಸಹ ದೊಡ್ಡಮಟ್ಟದ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತು ಫಿಲ್ಮಿಬೀಟ್ ಫೇಸ್‌ಬುಕ್‌ ಖಾತೆಯಲ್ಲಿ ಇಂದ್ರಜಿತ್ ಲಂಕೇಶ್ ಹೋರಾಟಕ್ಕೆ ನಿಮ್ಮ ಬೆಂಬಲ ಇದ್ಯಾ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಬಂದಿರುವ ಕಾಮೆಂಟ್‌ಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮುಂದೆ ಓದಿ.....

  ಸತ್ಯ ಯಾವಾಗಲೂ ಕಹಿಯಾಗಿ ಇರುತ್ತೆ

  ಸತ್ಯ ಯಾವಾಗಲೂ ಕಹಿಯಾಗಿ ಇರುತ್ತೆ

  ''ಸತ್ಯ ಯಾವಾಗಲೂ ಕಹಿಯಾಗೆ ಇರುತ್ತೆ. ಇಂದ್ರಜಿತ್ ಲಂಕೇಶ್ ಅವರ ಧೈರ್ಯವನ್ನು ಮೆಚ್ಚಲೇಬೇಕು. ಅವರ ಹತ್ತಿರ ಸಾಕ್ಷಿ ಇದೆ ಅಂತಲೇ ಅವರು ಇಷ್ಟೊಂದು ಬಹಿರಂಗವಾಗಿ ಹೇಳ್ತಾ ಇರೋದು. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ತಪ್ಪು ಯಾರೇ ಮಾಡಿದ್ರು ಅವರಿಗೆ ಶಿಕ್ಷೆ ಆಗಲಿ. ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟಿಕೊಂಡು ನೋಡ್ತಾ ಇದ್ದಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಸರ್'' ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

  ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು

  ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು

  ''ಖಂಡಿತಾ ವಾಗಿಯೂ ಎಲ್ಲಾ ಕನ್ನಡಿಗರ ಬೆಂಬಲ ಇದೆ, ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಗೌರವ ಇದೆ, ಅದು ಇಂಥ ಡ್ರಗ್ಸ್ ಕಹಾನಿ ಯಿಂದ ಹಾಳಗಬಾರದು ತಪ್ಪು ಮಾಡಿದವರಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಆಗಲೇಬೇಕು'' ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.

  ಸಿಸಿಬಿ ಅಧಿಕಾರಿಗಳಿಗೆ ಇಂದ್ರಜಿತ್ ಲಂಕೇಶ್ ಕೊಟ್ಟಿದ್ದು ಹೇಳಿಕೆ ಮಾತ್ರ, ಸಾಕ್ಷ್ಯ ಇಲ್ಲಸಿಸಿಬಿ ಅಧಿಕಾರಿಗಳಿಗೆ ಇಂದ್ರಜಿತ್ ಲಂಕೇಶ್ ಕೊಟ್ಟಿದ್ದು ಹೇಳಿಕೆ ಮಾತ್ರ, ಸಾಕ್ಷ್ಯ ಇಲ್ಲ

  ಸತ್ಯ ಸಾಭೀತು ಮಾಡಲು ನಮ್ಮ ಬೆಂಬಲ ಇದೆ

  ಸತ್ಯ ಸಾಭೀತು ಮಾಡಲು ನಮ್ಮ ಬೆಂಬಲ ಇದೆ

  ''ಚಿತ್ರ ರಂಗಕ್ಕೆ ಒಂದು ಗೌರವ ಇತ್ತು ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಸತ್ಯವನ್ನು ಸಾಭೀತು ಮಾಡಲು ನಮ್ಮ ಬೆಂಬಲವು ಇರುತ್ತದೆ'' ಎಂದು ಸಪೋರ್ಟ್ ಮಾಡುತ್ತಿದ್ದಾರೆ.

  ಇಂದ್ರಜಿತ್ ಸಾಮಾಜಿಕ ಪ್ರಜ್ಞೆಗೆ ಅಭಿನಂದನೆ

  ಇಂದ್ರಜಿತ್ ಸಾಮಾಜಿಕ ಪ್ರಜ್ಞೆಗೆ ಅಭಿನಂದನೆ

  ''ಮಾದಕ ವಸ್ತುಗಳ ಮಾರಾಟ. ಸಾಗಾಟ, ಸೇವನೆ ಹಾಗೂ ಸಹಾಯ ಸಹಕಾರ ಹಾಗೂ ಸಮರ್ಥನೆ ಮಾಡುವುದು ಕಾನೂನಿನ ಅನ್ವಯ ಮಹಾ ಅಪರಾಧ ಆಗಿರುವುದರಿಂದ ಅಂತಹವರನ್ನು ಹೊರಗೆಳೆದು ತರಲು ಪೊಲೀಸ್ ರವರಿಗೆ ಮಾಹಿತಿ ನೀಡಲು ಮುಂದೆ ಬಂದ ಇಂದ್ರಜಿತ್ ರವರ ಸಾಮಾಜಿಕ ಪ್ರಜ್ಞೆಗೆ ಅಭಿನಂದನೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೆ

  ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೆ

  ''ಇಂದ್ರಜೀತ್ ಯಾವುದೇ ಹೋರಾಟ ನಡೆಸುತ್ತಿಲ್ಲ. ನಂದು ಎಲ್ಲಿಡಲಿ ಅಂತ ಮಧ್ಯ ಬಂದು ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೆ. ಅದಿಲ್ಲವಾದರೆ ಆತನಿಗೆ ಈ ವಿಷಯವನ್ನು ತನಿಖಾಧಿಕಾರಿಗಳಿಗೆ ಮೊದಲೇ ತಿಳಿಸಬಹುದಿತ್ತು. Black mail ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶ ಇದ್ದಿರಬಹುದು. ಅದ್ರೆ ತನಿಖಾಧಿಕಾರಿಗಳು ಮಾದಕವಸ್ತು ಸರಬರಾಜು ಮಾಡುವ ವ್ಯಕ್ತಿ ಯನ್ನು ಬಂಧಿಸಿದ್ದರಿಂದ ಬೇರೆ ವಿಧಿ ಇಲ್ಲದೆ ಜನರ ಕಣ್ಣಲ್ಲಿ ಹೀರೊ ಆಗಲು ಇದನ್ನೆಲ್ಲಾ ಮಾಡಿದ್ದಾರೆ ಎಂದು ನನ್ನ ಭಾವನೆ. ಮಾದಕವಸ್ತು ಅತ್ಯಂತ ಶ್ರೀಮಂತರು ಮಾತ್ರ ಕೊಳ್ಳಲು ಸಾಧ್ಯ. ಆದುದರಿಂದ ತನಿಖೆಯಿಂದ ಸಣ್ಣ ಹುಳಕ್ಕೆ ಶಿಕ್ಷೆ ಆಗ್ಬಹುದು ಬಿಟ್ರೆ ದೊಡ್ಡ ದೊಡ್ಡ ಕುಳಗಳ ಹೆಸರು ಕೂಡಾ ಬರಲಾದದು' ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ.

  ಇಷ್ಟು ದಿನ ಏಕೆ ಸುಮ್ಮನೆ ಇದ್ರಿ ಸಾರ್

  ಇಷ್ಟು ದಿನ ಏಕೆ ಸುಮ್ಮನೆ ಇದ್ರಿ ಸಾರ್

  ''ನಿಜ ಅವರ ಈ ಧೈರ್ಯ ವನ್ನ ಮೆಚ್ಚಲೇಬೇಕು ಆದರೆ ಎಲ್ಲಾ ಸಾಕ್ಷಿ ಗಳನ್ನ ಇಟ್ಟಿರುವ ಈ ಇಂದ್ರಜಿತ್ ಸಾರ್ ಆ ದಿನಗಳಲೇ ಈ ರೀತಿ ಬಹಿರಂಗವಾಗಿಯೇ ಬಂದು ಹೇಳಿದ್ರೆ ತುಂಬಾ ಅನಾಹುತಗಳನ್ನು ತಪ್ಪಿಸಬಹುದಿತ್ತು. ಆದರೆ ಪೋಲೀಸರು ಶ್ರಮ ವಹಿಸಿ ಆ ಕೋಟೆ ಭೇಧಿಸಿದ ಮೇಲೆ ಇವರು ಅವರು ಇವರು ಇದ್ದಾರೆ ಎಂದು ಹೇಳುವುದು ಎಷ್ಟು ಸರಿ. ಸ್ವಾಮಿ ಇಂದ್ರಜಿತ್ ಲಂಕೇಶ್ ರವರೆ ನೀವೆ ಹೇಳಿದ್ದೀರ ಪೋಲೀಸರ ಹತ್ತಿರ ಈಗಾಗಲೇ ತುಂಬಾ ಮಾಹಿತಿ ಇದೆ ಎಂದು ನೀವು ಹೇಳಿಲ್ಲ ಅಂದರು ಅವರು ಅವರ ಕೆಲಸ ಮಾಡುತ್ತಾರೆ ಅದು ರಾಜಕೀಯ ಹಸ್ತಕ್ಷೇಪ ಇಲ್ಲ ಅಂದರೆ ಆದರೆ ಎಲ್ಲಾ ಬಲ್ಲ ನೀವು ಇಷ್ಟು ದಿನ ಏಕೆ ಸುಮ್ಮನೆ ಇದ್ರಿ ಸಾರ್'' ಎಂದು ಪ್ರಶ್ನಿಸಿದ್ದಾರೆ.

  English summary
  How Netizens are reacting about Indrajit Lankesh Allegations on sandalwood drugs mafia?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X