For Quick Alerts
  ALLOW NOTIFICATIONS  
  For Daily Alerts

  ಹೊಸ ಕಥೆಯೊಂದನ್ನು ಹೇಳಲು ಹೊರಟಿದೆ 'ಕಥಾ'

  By ಫಿಲ್ಮಿಬೀಟ್ ಡೆಸ್ಕ್‌
  |

  ಸಿನಿಮಾ ಅಂತ ಬಂದಾಗ 'ಲವ್ ಸ್ಟೋರಿ, ಕ್ರೈಂ, ಹಾರರ್, ಮೆಲೋಡ್ರಾಮಾ, ಫ್ಯಾಮಿಲಿ ಡ್ರಾಮಾ' ಹೀಗೆ ಯಾವುದೋ ಒಂದು ಕಥಾವಸ್ತುವನ್ನು ಹೊಂದಿರುತ್ತದೆ. ಆದರೆ ಅದನ್ನು ತೆರೆಯಮೇಲೆ ಪ್ರಸ್ತುತಪಡಿಸುವ

  ಪ್ರಯತ್ನ ಹೊಸತನದಿಂದ ಕೂಡಿದ್ದರೆ ಅಥವಾ ಪ್ರೇಕ್ಷಕನನ್ನು ರಂಜಿಸಿದರೆ ಮಾತ್ರ ಸಿನಿರಸಿಕರು ಅಂತಹ ಸಿನಿಮಾಗಳನ್ನು ಸ್ವೀಕರಿಸುತ್ತಿದ್ದಾರೆ. ಹೀಗಾಗಿಯೇ ಹೊಸತನದಿಂದ ಕೂಡಿದ ಕಥೆಯೊಂದನ್ನು ಹೇಳಲು ಹೊರಟಿದೆ, ಕಾಮಿಡಿ ಕಮ್ ಸಸ್ಪೆನ್ಸ್ ಥ್ರಿಲ್ಲರ್ 'ಕಥಾ' ವಸ್ತುವನ್ನು ಹೊಂದಿರುವ 'ಕಥಾ'.

  ಕರ್ನಾಟಕದಲ್ಲಿ 'ಕೆಜಿಎಫ್ 2' ಮೀರಿಸಿದ 'ಕಾಂತಾರ': ಸಿನಿಮಾ ನೋಡಿದವರ ಸಂಖ್ಯೆ ಎಷ್ಟು? ಕರ್ನಾಟಕದಲ್ಲಿ 'ಕೆಜಿಎಫ್ 2' ಮೀರಿಸಿದ 'ಕಾಂತಾರ': ಸಿನಿಮಾ ನೋಡಿದವರ ಸಂಖ್ಯೆ ಎಷ್ಟು?

  'ಕಥಾ: A story never heard before' ಟ್ಯಾಗ್ ಲೈನ್ ನೊಂದಿಗೆ ಮೂಡಿಬರುತ್ತಿರುವ ಈ ಚಿತ್ರವನ್ನು

  ಹೆಚ್ಚು ಸದ್ದು-ಗದ್ದಲ, ಆರ್ಭಟ ಮಾಡದೆ ತಣ್ಣಗೆ ಚಿತ್ರೀಕರಣವನ್ನು ಮಾಡಿ ಮುಗಿಸಿದೆ ಚಿತ್ರತಂಡ. ಇನ್ನು ಇದರ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿರುವ ಚಿತ್ರದ ನಿರ್ದೇಶಕರಾದ ರವೀಂದ್ರ ಕೊಟಕಿ "ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಬಹುತೇಕ ಚಿತ್ರತಂಡ ಹೊಸಬರಿಂದ ಕೂಡಿದ್ದು, ಉತ್ಸಾಹ-ಲವಲವಿಕೆಯಿಂದಲೇ ಚಿತ್ರೀಕರಣವನ್ನು ಮಾಡಿ ಮುಗಿಸಲಾಗಿದೆ. ಶೀಘ್ರದಲ್ಲೇ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲಾಗುತ್ತದೆ"ಎಂದು ಹೇಳಿದ್ದಾರೆ.

  ಇನ್ನು ಈ ಚಿತ್ರದ ನಿರ್ಮಾಪಕರಾದ ಡಾ.ಸುನಿಲ್ ಕುಂಬಾರ ಅವರ ಚಿತ್ರದ ಬಗ್ಗೆ ಮಾತನಾಡುತ್ತಾ "ಇದೊಂದು ಪ್ರಯೋಗಾತ್ಮಕ ಪ್ರಯತ್ನ. ನಾಯಕ-ನಾಯಕಿ ಸೇರಿದಂತೆ ಈ ತಂಡ ಹೊಸಬರಿಂದ ಕೂಡಿದೆ. ಇದರ ಪ್ರಧಾನ ಆಕರ್ಷಣೆ ಖ್ಯಾತ ನಟರಾದ ಲಯ ಕೋಕಿಲ ಅವರು. ಈಗಷ್ಟೇ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರುತ್ತೇವೆ" ಅಂತ ಹೇಳಿದ್ದಾರೆ. ಸುನೀಲ್ ಕುಂಬಾರರ ಜೊತೆಗೆ ಈ ಚಿತ್ರಕ್ಕೆ ವೆಂಕಟ್ ಸಾಯಿ ಸಹ ನಿರ್ಮಾಪಕರಾಗಿದ್ದಾರೆ.

  'ಮಜ್ಜಿಗೆ ಹುಳಿ' ಚಿತ್ರದ ನಂತರ ನಿರ್ದೇಶಕ ರವೀಂದ್ರ ಕೊಟಕಿ ನಿರ್ದೇಶಿಸುತ್ತಿರುವ ಈ 'ಕಥಾ' ಚಿತ್ರದಲ್ಲಿ ಉತ್ತರ ಕರ್ನಾಟಕದ ಹೊಸ ಪ್ರತಿಭೆ ಸಿರಾಜ್ ನಾಯಕನಟನಾಗಿ ಸಿನಿ ರಂಗವನ್ನು ಪ್ರವೇಶ ಮಾಡುತ್ತಿದ್ದಾರೆ. ಇನ್ನು ನಾಯಕ ನಟಿಯಾಗಿ ಹಾಸನ ಮೂಲದ ಚಂದನಾ ಪ್ರಸಾದ್ ಅಭಿನಯಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕುಶಾಲ್ ನಾರಾಯಣ್ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಲಯ ಕೋಕಿಲ ಕಾಣಿಸಿಕೊಂಡಿದ್ದಾರೆ.

  ರವೀಂದ್ರ ಕೊಟಕಿ ಕಥೆ- ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಆರಾಧ್ಯ ಅವರ ಸಿನಿಮಾಟೋಗ್ರಫಿ ಇದ್ದು, DSK ಸಿನಿಮಾಸ್ ಇದರ ಅಡಿಯಲ್ಲಿ ಡಾ. ಸುನೀಲ್ ಕಂಬಾರ ಅವರು ನಿರ್ಮಾಣ ಮಾಡಿದ್ದು ವೆಂಕಟ್ ಸಾಯಿ ಸಹ ನಿರ್ಮಾಪಕರಾಗಿದ್ದಾರೆ.

  English summary
  New Kannada movie Katha will release teaser soon. Movie is directed by Ravindra Kotaki. new faces acted in the movie.
  Monday, October 24, 2022, 18:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X