For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್'ಗಳಿಗೆ ಸೆಡ್ಡು ಹೊಡೆದ ನಿಖಿಲ್ ಕುಮಾರ್

  By Bharath Kumar
  |
  ದಿ ವಿಲನ್‌ನ್ನು ಹಿಂದಿಕ್ಕಿದ ನಿಖಿಲ್ ಕುಮಾರಸ್ವಾಮಿ..!! | Filmibeat Kannada

  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಂತೂ ನಿಖಿಲ್ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿ ಇದೆ.

  ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಕುಮಾರ್ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಕನ್ನಡದ ಸೂಪರ್ ಸ್ಟಾರ್ ಗಳನ್ನ ಕೂಡ ಹಿಂದಿಕ್ಕುವಷ್ಟು ಬೆಳೆಯುತ್ತಿದ್ದಾರೆ. ಹಾಗೂ ಪರಭಾಷೆಗಳ ಮಧ್ಯೆ ಕನ್ನಡ ಚಿತ್ರರಂಗವನ್ನ ಬಹಳ ಎತ್ತರಕ್ಕೆ ಹೋಗಲು ಮೆಟ್ಟಿಲಾಗ್ತಿದ್ದಾರೆ.

  ಹೌದು, ಇದಕ್ಕೆ ಕಾರಣ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್. ಬಿಡುಗಡೆಯಾದ 2 ದಿನದಲ್ಲಿ ಸ್ಟಾರ್ ಗಳನ್ನ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಅದು ಸುದೀಪ್ ಮತ್ತು ಶಿವಣ್ಣ ಅಂತಹ ಸೂಪರ್ ಸ್ಟಾರ್ ಗಳ ಚಿತ್ರಕ್ಕೆ ಪೈಪೋಟಿ ನೀಡುತ್ತಿರುವುದು ವಿಶೇಷವೇ ಸರಿ. ಅಷ್ಟಕ್ಕೂ, ನಿಖಿಲ್ ಸಿನಿಮಾ ಮಾಡಿರುವ ದಾಖಲೆ ಏನು.? ಮುಂದೆ ಓದಿ....

  'ದಿ ವಿಲನ್' ಹಾಡನ್ನ ಹಿಂದಿಕ್ಕಿದ ನಿಖಿಲ್

  'ದಿ ವಿಲನ್' ಹಾಡನ್ನ ಹಿಂದಿಕ್ಕಿದ ನಿಖಿಲ್

  ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹುದೊಡ್ಡ ಸಿನಿಮಾ 'ದಿ ವಿಲನ್'. ಈ ಚಿತ್ರದ ಹಾಡು ಇಲ್ಲಿಯವರೆಗೂ ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದ್ರೆ, ಸುಮಾರು ಒಂದು ವಾರದಿಂದ 'ದಿ ವಿಲನ್' ಹಾಡು ಮಾಡಿದ್ದ ದಾಖಲೆಯನ್ನ ನಿಖಿಲ್ ಸಿನಿಮಾದ ಟೀಸರ್ ಒಂದೇ ದಿನದಲ್ಲಿ ಬ್ರೇಕ್ ಮಾಡಿದೆ.

  'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್

  'ಟಿಕ್ ಟಿಕ್' ಹಾಡನ್ನ ಹಿಂದಿಕ್ಕಿದ 'ಸೀತಾರಾಮ'

  'ಟಿಕ್ ಟಿಕ್' ಹಾಡನ್ನ ಹಿಂದಿಕ್ಕಿದ 'ಸೀತಾರಾಮ'

  'ದಿ ವಿಲನ್' ಚಿತ್ರದ 'ಟಿಕ್ ಟಿಕ್ ಟಿಕ್' ಹಾಡು ಜುಲೈ 24 ರಂದು ಬಿಡುಗಡೆಯಾಗಿತ್ತು. ಈಗ ಈ ಹಾಡಿನ ವೀಕ್ಷಕರ ಸಂಖ್ಯೆ ಸುಮಾರು 26.3 ಲಕ್ಷ ಇದೆ. ಆದ್ರೆ, ಎರಡು ದಿನದ ಹಿಂದೆ ಬಿಡುಗಡೆಯಾದ 'ಸೀತಾರಾಮ ಕಲ್ಯಾಣ' ಟೀಸರ್ ವೀಕ್ಷಕರ ಸಂಖ್ಯೆ 32.5 ಲಕ್ಷ ದಾಟಿದೆ.

  'ಐ ಯಾಮ್ ವಿಲನ್' ರೆಕಾರ್ಡ್ ಮಟಾಶ್

  'ಐ ಯಾಮ್ ವಿಲನ್' ರೆಕಾರ್ಡ್ ಮಟಾಶ್

  ಇನ್ನು ಜುಲೈ 13 ರಂದು ಬಿಡುಗಡೆಯಾಗಿದ್ದ 'ದಿ ವಿಲನ್' ಚಿತ್ರದ 'ಐ ಯಾಮ್ ವಿಲನ್' ಹಾಡು ಇದುವರೆಗೂ 41.7 ಲಕ್ಷ ವೀಕ್ಷಕರನ್ನ ಹೊಂದಿದೆ. ಸದ್ಯಕ್ಕೆ 'ಸೀತಾರಾಮ ಕಲ್ಯಾಣ' ಟೀಸರ್ ಓಟ ನೋಡಿದ್ರೆ ಈ ಹಾಡಿನ ರೆಕಾರ್ಡ್ ಕೂಡ ಮಟಾಶ್ ಆಗುತ್ತೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

  'ಕುರುಕ್ಷೇತ್ರ'ದಲ್ಲೂ ಜಾದೂ ಮಾಡಿದ ನಿಖಿಲ್

  'ಕುರುಕ್ಷೇತ್ರ'ದಲ್ಲೂ ಜಾದೂ ಮಾಡಿದ ನಿಖಿಲ್

  ಇನ್ನು 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್ ಗೆ ವಿಶೇಷವಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಈ ಟೀಸರ್, ದರ್ಶನ್ ವರ್ಷನ್ ನ ಟೀಸರ್ ಅನ್ನೇ ಹಿಂದಿಕ್ಕಿ ಸುದ್ದಿಯಾಗಿತ್ತು. ದರ್ಶನ್ ವರ್ಷನ್ ಟೀಸರ್ 27.2 ಲಕ್ಷ ವೀಕ್ಷಕರನ್ನ ಹೊಂದಿದೆ. ಆದ್ರೆ, ನಿಖಿಲ್ ವರ್ಷನ್ ಟೀಸರ್ 39 ಲಕ್ಷ ಮಂದಿ ನೋಡಿದ್ದಾರೆ.

  ಟ್ರೆಂಡಿಂಗ್ ನಲ್ಲಿ ನಂಬರ್ 1

  ಟ್ರೆಂಡಿಂಗ್ ನಲ್ಲಿ ನಂಬರ್ 1

  ಸದ್ಯ, 'ಸೀತಾರಾಮ ಕಲ್ಯಾಣ' ಟೀಸರ್ ಯೂಟ್ಯೂಬ್ ನಲ್ಲಿ ನಂಬರ್ ವನ್ ಟ್ರೆಂಡಿಂಗ್ ನಲ್ಲಿದೆ. ಹರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಮಧು ಅಭಿನಯಿಸಿದ್ದಾರೆ.

  English summary
  CM HD Kumaraswamy son Nikhil Kumaraswamy Starrer 'Seetharam Kalyana' Teaser is trends at number 1 on youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X