twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಮನೆ ಕಟ್ಟಿಸಲು ಭೂಮಿ ಪೂಜೆ ಮಾಡಿದ ನಿಖಿಲ್ ಕುಮಾರಸ್ವಾಮಿ ದಂಪತಿ

    |

    ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಿಧಾನಕ್ಕೆ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಸಕ್ರಿಯಗೊಳ್ಳುತ್ತಿದ್ದಾರೆ.

    Recommended Video

    ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

    ಲಾಕ್‌ಡೌನ್ ಸಮಯದಲ್ಲಿ ಸರಳವಾಗಿ ವಿವಾಹವಾಗಿ ನಂತರ ಲಾಕ್‌ಡೌನ್ ನ ಬಿಡುವಿನ ಸಮಯವನ್ನು ಪತ್ನಿಯೊಂದಿಗೆ ಕಳೆದ ನಿಖಿಲ್ ಇದೀಗ ಹೊಸದಾಗಿ ಮನೆ ನಿರ್ಮಿಸುತ್ತಿದ್ದಾರೆ.

    ಹೌದು, ಲಾಕ್‌ಡೌನ್ ಸಮಯದಲ್ಲಿ ಕೃಷಿ ಮಾಡಲು ಪ್ರಾರಂಭಿಸಿದ ನಿಖಿಲ್ ಕುಮಾರಸ್ವಾಮಿ, ಇದೀಗ ಮನೆ ಸಹ ಕಟ್ಟಿಸಲು ಪ್ರಾರಂಭಿಸಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿ ಭೂಮಿ ಪೂಜೆ ನೆರವೇರಿಸಿದ್ದಾರೆ.

    ಕೃಷಿ ಭೂಮಿಗೆ ಹತ್ತಿರವಾಗಿರಲು ಮನೆ ನಿರ್ಮಾಣ

    ಕೃಷಿ ಭೂಮಿಗೆ ಹತ್ತಿರವಾಗಿರಲು ಮನೆ ನಿರ್ಮಾಣ

    ಮದುವೆಯ ನಂತರ ಬಹುತೇಕ ಸಮಯ ಫಾರ್ಮ್‌ಹೌಸ್‌ನಲ್ಲೇ ಕಳೆದಿರುವ ನಿಖಿಲ್ ಮತ್ತು ರೇವತಿ ಅಲ್ಲಿಯೇ ಒಂದು ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಕೃಷಿ ಭೂಮಿಗೆ ಹತ್ತಿರವಾಗಿ ಮನೆ ಇರಲೆಂದು ಈ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ.

    ನಿಖಿಲ್ ಪತ್ನಿ ರೇವತಿ ಆರ್ಕಿಟೆಕ್ಟ್

    ನಿಖಿಲ್ ಪತ್ನಿ ರೇವತಿ ಆರ್ಕಿಟೆಕ್ಟ್

    ನಿಖಿಲ್ ಪತ್ನಿ ರೇವತಿ ಸ್ವತಃ ಆರ್ಕಿಟೆಕ್ಟ್ ಆಗಿದ್ದು, ಮನೆ ನಿರ್ಮಾಣದ ಬಹುಪಾಲು ಮೇಲುಸ್ತುವಾರಿಯನ್ನು ಅವರೇ ಹೊರಲಿದ್ದಾರೆ. ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಕಾರ್ಯ ಮುಗಿಯಲಿದೆ ಎನ್ನಲಾಗಿದೆ.

    ಕೃಷಿ ಪ್ರಾರಂಭಿಸಿರುವ ನಿಖಿಲ್ ಕುಮಾರಸ್ವಾಮಿ

    ಕೃಷಿ ಪ್ರಾರಂಭಿಸಿರುವ ನಿಖಿಲ್ ಕುಮಾರಸ್ವಾಮಿ

    ಕೆಲವು ದಿನಗಳ ಹಿಂದಷ್ಟೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಿಖಿಲ್ ಕುಮಾರಸ್ವಾಮಿ ಪ್ರಾರಂಭಿಸಿದ್ದರು. ತಾವು ಕೃಷಿಕನಾಗಿ ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ. ರೈತಾಪಿ ಜೀವನ ಶ್ರೇಷ್ಠ ಜೀವನ ಎಂದು ನಿಖಿಲ್ ಹೇಳಿದ್ದರು.

    ಕೊಡಗಿಗೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ

    ಕೊಡಗಿಗೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ

    ರಾಜಕೀಯದಲ್ಲೂ ಮತ್ತೆ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ, ಇತ್ತೀಚೆಗಷ್ಟೆ, ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿ ನೆರೆ ವೀಕ್ಷಣೆ ಮಾಡಿ, ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದರು. ಕೇಂದ್ರದ ತ್ವಿಭಾಷಾ ನೀತಿ ವಿರುದ್ಧ ಸಹ ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದರು ನಿಖಿಲ್.

    English summary
    Nikhil Kumaraswamy and wife Revathi building new house for them. They perform pooja recently.
    Saturday, August 22, 2020, 19:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X