»   » ದರ್ಶನ್ ಜೊತೆ ನಿಖಿತಾ ಸಿನಿಮಾ ಮಾಡಲ್ವಂತೆ!

ದರ್ಶನ್ ಜೊತೆ ನಿಖಿತಾ ಸಿನಿಮಾ ಮಾಡಲ್ವಂತೆ!

Posted By:
Subscribe to Filmibeat Kannada

ಸುಮಾರು ದಿನಗಳ ನಂತ್ರ ತಲೆ ಬಾಚ್ಕೊಂಡು ಪೌಡ್ರಾಕ್ಕೊಂಡು ಮತ್ತೆ ಗಾಂಧಿನಗರಕ್ಕೆ ಕಾಲಿಟ್ಟಿದ್ದ ನಿಖಿತಾ, ಹೀಗೆ ಮಾತಾಡ್ತಾ ಮಾತಾಡ್ತಾ ದರ್ಶನ್ ಟಾಪಿಕ್ ತೆಗೆದ್ರಂತೆ. ಚಾಲೆಂಜಿಂಗ್ ಸ್ಟಾರ್ ಅಭಿನಯಿಸುವ 50ನೇ ಚಿತ್ರ 'ಸರ್ವಾಂತರ್ಯಾಮಿ'ಗೆ ನಾನೇ ಹೀರೋಯಿನ್ನು ಗೊತ್ತಾ ಅಂದುಬಿಟ್ರಂತೆ.

ಈ ಅಂತೆಕಂತೆ ಗಾಂಧಿನಗರದ ತುಂಬೆಲ್ಲಾ ಗಿರಿಕಿ ಹೊಡೆದ್ಮೇಲೆ ಎಲ್ಲೋ ಇದ್ದ ನಿಖಿತಾಗೆ ಎಚ್ಚರವಾಗಿದೆ. ಅರ್ಥಾತ್, ದರ್ಶನ್ ಜೊತೆ ಸಿನಿಮಾ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಎಲ್ಲಾ ಗಾಳಿ ಸುದ್ದಿಗಳಿಗೆ ನಿಖಿತಾ ಹಾಕಿರುವ ಬ್ರೇಕ್ ಈ ಟ್ವೀಟ್. ''ನಾನು ಹೊಸ ಸಿನಿಮಾ ಮಾಡುವುದಾದರೆ, ಅದನ್ನ ಅನೌನ್ಸ್ ಮಾಡುತ್ತೇನೆ. ಸುಮ್ಮನೆ ಕಲ್ಪನೆ ಮಾಡಿಕೊಂಡು, ನನ್ನ ಕೆಲಸದ ಬಗ್ಗೆ ರೂಮರ್ಸ್ ಹಬ್ಬಿಸಬೇಡಿ ಅಂತ ಎಲ್ಲರನ್ನೂ ಕೇಳಿಕೊಳ್ಳುತ್ತೇನೆ. ಧನ್ಯವಾದ'' ಅಂತ ನಟಿ ನಿಖಿತಾ ತುಕ್ರಾಲ್ ಟ್ವೀಟ್ ಮಾಡಿದ್ದಾರೆ. [ರಾಯಣ್ಣನ ನಂತರ ಮತ್ತೆ ದರ್ಶನ್ ನಿಖಿತಾ ಜೋಡಿ?]

Nikitha Thukral clears the air on acting with Darshan

ಅಲ್ಲಿಗೆ, ಒಂದಂತೂ ಸ್ಪಷ್ಟ. ದರ್ಶನ್ ಜೊತೆ ನಿಖಿತಾ ನಟಿಸುತ್ತಿಲ್ಲ. ಆದ್ರೆ, ಈ ಸುದ್ದಿಯಿಂದ ಸುಂಟರಗಾಳಿ ಎದ್ದಿದ್ದು ನೋಡಿ, ಯಾರಾದ್ರೂ ನಿರ್ಮಾಪಕರು ಮನಸ್ಸು ಮಾಡಿದರೆ ದರ್ಶನ್ ಮತ್ತು ನಿಖಿತಾರನ್ನ ಮತ್ತೊಮ್ಮೆ ತೆರೆಮೇಲೆ ಒಂದು ಮಾಡಬಹುದೇನೋ..!?

English summary
Multi-lingual Actress Nikitha Thukral has taken her twitter account to clarify that she is not acting with Kannada Actor Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada